AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ

Updated on: Apr 10, 2025 | 10:00 PM

ಈವರೆಗೆ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ 108 ಆಂಬ್ಯುಲೆನ್ಸ್​ಗಳನ್ನು ಇನ್ಮುಂದೆ ಸರ್ಕಾರವೇ ನಿರ್ವಹಿಸಲಿದೆ. ಹೌದು. ಈವರೆಗೂ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಆದ್ರೆ, ಇನ್ಮುಂದೆ 108 ಆಂಬ್ಯುಲೆನ್ಸ್​ ಸೇವೆಯನ್ನು ರಾಜ್ಯ ಸರ್ಕಾರವೇ ನಿಭಾಯಿಸಲಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ, (ಏಪ್ರಿಲ್ 10): ಈವರೆಗೆ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ 108 ಆಂಬ್ಯುಲೆನ್ಸ್​ಗಳನ್ನು(ambulance) ಇನ್ಮುಂದೆ ಸರ್ಕಾರವೇ ನಿರ್ವಹಿಸಲಿದೆ. ಹೌದು. ಈವರೆಗೂ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಆದ್ರೆ, ಇನ್ಮುಂದೆ 108 ಆಂಬ್ಯುಲೆನ್ಸ್​ ಸೇವೆಯನ್ನು ರಾಜ್ಯ ಸರ್ಕಾರವೇ ನಿಭಾಯಿಸಲಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ (Dinesh gundu rao) ತಿಳಿಸಿದ್ದಾರೆ. ಇಂದು(ಏಪ್ರಿಲ್ 10) ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆಯಿಂದಲೇ 108 ಆಂಬ್ಯುಲೆನ್ಸ್ ತುರ್ತು ಸೇವೆಯನ್ನು ರಾಜ್ಯ ಸರ್ಕಾರವೇ ನಿಭಾಯಿಸಲಿದೆ. ಜಿವಿಕೆ ಅಥವಾ ಖಾಸಗಿ ಸಂಸ್ಥೆಗೆ 108 ಆಂಬ್ಯುಲೆನ್ಸ್​ ಸೇವೆ ಟೆಂಡರ್ ನೀಡಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಜಿಲ್ಲಾ ಕೇಂದ್ರದಲ್ಲೇ ಕಂಟ್ರೋಲ್ ರೂಮ್ ತೆರೆಯಲಾಗುವುದು ಎಂದು ಸ್ಪಷ್ಟಪಡಿಸಿದರು.