‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಡಾಲಿ ಧನಂಜಯ ಅವರು ‘ವಿದ್ಯಾಪತಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ಸ್ನೇಹಿತ ನಾಗಭೂಷಣ್ ಹೀರೋ ಆಗಿ ನಟಿಸಿದ್ದಾರೆ. ಸಿನಿಮಾ ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಬಗ್ಗೆ ಹಿರಿಯ ನಟಿ ತಾರಾ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ನಟಿ ತಾರಾ ಅನುರಾಧಾ ಅವರು ‘ವಿದ್ಯಾಪತಿ’ (Vidyapati) ಸಿನಿಮಾ ನೋಡಿದ್ದಾರೆ. ಪ್ರೀಮಿಯರ್ ಶೋ ಬಳಿಕ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ನಾಗಭೂಷಣ (Nagabhushana), ಮಲೈಕಾ ವಸುಪಾಲ್ ಮುಂತಾದವರು ನಟಿಸಿದ್ದಾರೆ. ನಾಗಭೂಷಣ ಪ್ರತಿಭೆಯನ್ನು ತಾರಾ ಹೊಗಳಿದ್ದಾರೆ. ‘ನಾಗು ಜೊತೆ ಬಡವ ರಾಸ್ಕಲ್ ಸಿನಿಮಾದಲ್ಲಿ ನಾನು ಒಂದು ದೃಶ್ಯದಲ್ಲಿ ನಟಿಸಿದ್ದಾಗಲೇ ಇವನು ಸಖತ್ ಕಲಾವಿದ ಅಂತ ಧನಂಜಯ್ಗೆ ಹೇಳಿದ್ದೆ. ಅದನ್ನು ಅವನು ಟಗರು ಪಲ್ಯ ಸಿನಿಮಾದಲ್ಲಿ ಸಾಬೀತು ಮಾಡಿದ. ಈಗ ಈ ಸಿನಿಮಾದಲ್ಲಿ ಗಟ್ಟಿಯಾದ. ಡಾಲಿಗೆ ಈ ಸಿನಿಮಾದಿಂದ ಯಶಸ್ಸು ಸಿಗಲಿ. ನಾಗುಗೆ ಹೆಸರು ತಂದುಕೊಡಲಿ’ ಎಂದು ತಾರಾ (Tara Anuradha) ಅವರು ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos