AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidyapati Review: ನಾಗಭೂಷಣ-ಧನಂಜಯ್ ನಟನೆಯ ‘ವಿದ್ಯಾಪತಿ’ ಚಿತ್ರದ ವಿಮರ್ಶೆ

ವಿದ್ಯಾಪತಿ ಸಿನಿಮಾ ವಿಮರ್ಶೆ: ನಾಗಭೂಷಣ ಹಾಗೂ ಧನಂಜಯ್ ಅವರು ಒಟ್ಟಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ನಾಗಭೂಷಣ ಅವರು ಹೀರೋ ಆಗಿ ನಟಿಸಿದ ‘ವಿದ್ಯಾಪತಿ’ ಚಿತ್ರಕ್ಕೆ ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದು, ಸಿನಿಮಾ ಇಂದು (ಏಪ್ರಿಲ್ 10) ರಿಲೀಸ್ ಆಗಿದೆ. ಚಿತ್ರದ ವಿಮರ್ಶೆ ನಿಮ್ಮ ಮುಂದೆ.

Vidyapati Review: ನಾಗಭೂಷಣ-ಧನಂಜಯ್ ನಟನೆಯ ‘ವಿದ್ಯಾಪತಿ’ ಚಿತ್ರದ ವಿಮರ್ಶೆ
ವಿದ್ಯಾಪತಿ
Follow us
ರಾಜೇಶ್ ದುಗ್ಗುಮನೆ
|

Updated on: Apr 10, 2025 | 11:23 AM

ಸಿನಿಮಾ ಹೆಸರು: ವಿದ್ಯಾಪತಿ. ಪಾತ್ರವರ್ಗ: ನಾಗಭೂಷಣ, ಮಲೈಕಾ ವಾಸುಪಾಲ್, ಧನಂಜಯ್, ರಾಮಚಂದ್ರ ರಾಜು ಮುಂತಾದವರು. ನಿರ್ಮಾಣ: ಧನಂಜಯ್. ರೇಟಿಂಗ್: 3/5. ‘ವಿದ್ಯಾಪತಿ’ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದ ಚಿತ್ರ. ಕೊವಿಡ್ ಸಮಯದಲ್ಲಿ ‘ಇಕ್ಕಟ್’ ಹೆಸರಿನ ಸಿನಿಮಾ ಮಾಡಿದ್ದ ಹಸೀನ್ ಖಾನ್-ಇಶಾಮ್ ಖಾನ್ ಈಗ ‘ವಿದ್ಯಾಪತಿ’ ನಿರ್ದೇಶನ ಮಾಡಿದ್ದಾರೆ. ‘ಇಕ್ಕಟ್’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದ ನಾಗಭೂಷಣ ಅವರೇ ಈ ಚಿತ್ರದಲ್ಲೂ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಡಾಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಏನಿದೆ, ಏನಿಲ್ಲ ಎಂಬ ಮಾಹಿತಿ ಇಲ್ಲಿದೆ.

‘ಇದು ಅವನ ಯುದ್ಧ, ಅವನೇ ಹೋರಾಡಬೇಕು’- ಇದು ಡಾಲಿ ಧನಂಜಯ್ ಅವರು ಸಿನಿಮಾ ಒಂದರಲ್ಲಿ ಹೇಳುವ ಡೈಲಾಗ್. ಇಡೀ ಚಿತ್ರದ ಥೀಮ್ ಏನು ಎಂಬುದನ್ನು ಈ ಸಂಭಾಷಣೆ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಬೆನ್ನು ತೋರಿಸಿ ಓಡಿ ಹೋಗುವ ಬದಲು ಹೋರಾಡಬೇಕು. ಐದೇಟು ಹೊಡೆದಾಗ ಸುಮ್ಮನೆ ಇರುವ ಬದಲು ಒಂದಾದರೂ ಏಟನ್ನು ಹೊಡೆಯಬೇಕು ಎಂಬುದು ‘ವಿದ್ಯಾಪತಿ’ ಚಿತ್ರದ ಸಾರಾಂಶ.

ಸಿದ್ದು (ನಾಗಭೂಷಣ) ಬಡ ಕುಟುಂಬದ ಹುಡುಗ. ಆತನಿಗೆ ಸೂಪರ್ ಸ್ಟಾರ್ ವಿದ್ಯಾ (ಮಲೈಕಾ ವಾಸುಪಾಲ್) ಮೇಲೆ ಲವ್ ಆಗುತ್ತದೆ. ಆಕೆಯನ್ನು ಒಲಿಸಿಕೊಳ್ಳಲು ಈತ ಸುಳ್ಳಿನ ಸರಮಾಲೆ ಕಟ್ಟುತ್ತಾನೆ. ಸುಳ್ಳನ್ನು ನಿಜವೆಂದು ನಂಬುವ ಆಕೆ ಇಂಪ್ರೆಸ್ ಆಗಿ ಆತನ ಮದುವೆ ಆಗುತ್ತಾಳೆ. ದುರಾಸೆಯೇ ಸರಸ್ವ ಆಗಿರೋ ವಿದ್ಯಾಪತಿ ಕುಟುಂಬ, ಗೆಳೆಯರನ್ನು ತೊರೆಯುತ್ತಾನೆ. ಪತ್ನಿಗೆ ಮ್ಯಾನೇಜರ್ ಆಗಿ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸುತ್ತಾರೆ. ಆದರೆ, ಸುಳ್ಳು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಒಂದು ದಿನ ಮುಖವಾಡ ಕಳಚಿ ಬೀಳುತ್ತದೆ. ಸಮಸ್ಯೆಗಳಿಗೆ ಬೆನ್ನು ಹಾಕಿ ಓಡುವ ವಿದ್ಯಾಪತಿ ಕಥೆ ಏನಾಗುತ್ತದೆ? ಆತ ಈ ಯುದ್ಧದಲ್ಲಿ ಗೆಲ್ಲುತ್ತಾನಾ? ಇದಕ್ಕೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು.

ಇದನ್ನೂ ಓದಿ
Image
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟ್; ವಿವಾದದ ಬಳಿಕ ಉಲ್ಟಾ
Image
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
Image
‘ಕರ್ನಾಟಕ ಜನತೆಗಾಗಿ ಸಿನಿಮಾ ಮಾಡೋದು, ಪ್ಯಾನ್​ ಇಂಡಿಯಾಗಾಗಿ ಅಲ್ಲ’; ದರ್ಶನ್
Image
ಕೇರೆ ಹಾವು ರಕ್ಷಿಸಿ ಅದರ ಮಹತ್ವ ತಿಳಿಸಿದ ದುನಿಯಾ ವಿಜಯ್

ಸಿದ್ದು ಪಾತ್ರದಲ್ಲಿ ಕಾಣಿಸಿಕೊಂಡಿರೋ ನಾಗಭೂಷಣ ಅವರು ನಟನೆ ಮೂಲಕ ಇಷ್ಟ ಆಗುತ್ತಾರೆ. ಸಿನಿಮಾ ಉದ್ದಕ್ಕೂ ಅವರ ಪಾತ್ರವೇ ಹೈಲೈಟ್. ಇಡೀ ಚಿತ್ರವನ್ನು ಅವರು ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದಾರೆ ಎಂದರೂ ತಪ್ಪಾಗಲಾರದು. ನಾಗಭೂಷಣ ಅವರಿಗೆ ಇಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ದೇಶಕರು ನೀಡಿದ್ದಾರೆ. ಕಾಮಿಡಿಯನ್ ಆಗಿ, ಮಗನಾಗಿ, ಪತಿಯಾಗಿ, ಅಣ್ಣನಾಗಿ, ಮಲ ಮಗನಾಗಿ, ಗೆಳೆಯನಾಗಿ ಹೀಗೆ ಹಲವು ಜವಾಬ್ದಾರಿಗಳ ಮೂಲಕ ಅವರು ಭಾವನಾತ್ಮಕವಾಗಿ ಸೆಳೆದುಕೊಳ್ಳುತ್ತಾರೆ. ಒಮ್ಮೆ ನಗಿಸುವ ಸಿದ್ದು, ಮತ್ತೊಮ್ಮೆ ಭಾವನೆಗಳ ಅಲೆಯಲ್ಲಿ ತೇಲಿಸುತ್ತಾನೆ. ಪ್ರತಿ ಸಂಬಂಧಗಳ ಅರ್ಥವನ್ನು ಹುಡುಕುತ್ತಾ ಪ್ರೇಕ್ಷಕನಿಗೆ ಒಂದು ಸಂದೇಶ ನೀಡುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ನಟನೆಯಲ್ಲಿ ಅವರು ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ.

ಚಿತ್ರದಲ್ಲಿ ವಿದ್ಯಾ ಪಾತ್ರ ಮಾಡಿರೋ ಮಲೈಕಾ ಅಲ್ಲಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಸ್ಕ್ರೀನ್​ಸ್ಪೇಸ್ ಅಗತ್ಯ ಇತ್ತು. ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಶ್ರೀವತ್ಸ ಶ್ಯಾಮ್ ಇಷ್ಟ ಆಗುತ್ತಾರೆ. ಗರುಡ ರಾಮ್ ಅವರು ವಿಲನ್ ಪಾತ್ರದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿದ್ಯಾಪತಿ ಹಾಗೂ ಜಗ್ಗು (ಗರುಡಾ ರಾಮ್) ನಡುವಿನ ಫೈಟ್ ನೋಡಿದರೆ ‘ಚೆನ್ನೈ ಎಕ್ಸ್​ಪ್ರೆಸ್​ನಲ್ಲಿ ತಂಗಬಲಿ ಹಾಗೂ ರಾಹುಲ್ ಮುಖಾಮುಖಿ ಆಗುವ ದೃಶ್ಯಗಳು ನೆನಪಾಗುತ್ತವೆ. ಡಾಲಿ ಧನಂಜಯ್ ಅವರ ಪಾತ್ರ ಕೊನೆಯಲ್ಲಿ ಬಂದರೂ ಹೆಚ್ಚು ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಮುಜುಗರ ಆಗುವ ಒಂದು ದೃಶ್ಯ ಕೂಡ ‘ವಿದ್ಯಾಪತಿ’ ಚಿತ್ರದಲ್ಲಿ ಇಲ್ಲ: ಮಲೈಕಾ

‘ವಿದ್ಯಾಪತಿ’ ಸಿನಿಮಾದ ಕಥೆ ಹೇಳಲು ನಿರ್ದೇಶಕರು ಹಳೆಯ ತಂತ್ರವನ್ನೇ ಬಳಕೆ ಮಾಡಿದ್ದಾರೆ. ಅವರು ಇನ್ನೂ ಬಿಗಿಯಾದ ನಿರೂಪಣೆ ಮಾಡಿದರೆ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು. ಸಿನಿಮಾನ ಎರಡು ಗಂಟೆ ಹೇಳಬೇಕು ಎನ್ನುವ ಕಾರಣಕ್ಕೆ ಕೆಲವು ಕಡೆಗಳಲ್ಲಿ ದೃಶ್ಯಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದಂತೆ ಕಂಡರೂ ಅಚ್ಚರಿ ಏನಿಲ್ಲ. ಒಟ್ಟಾರೆ ಸಿನಿಮಾ ಫ್ಯಾಮಿಲಿ ಎಂಟರ್​ಟೇನರ್ ಆಗಿ ಇಷ್ಟ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.