AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಜುಗರ ಆಗುವ ಒಂದು ದೃಶ್ಯ ಕೂಡ ‘ವಿದ್ಯಾಪತಿ’ ಚಿತ್ರದಲ್ಲಿ ಇಲ್ಲ: ಮಲೈಕಾ

ಏಪ್ರಿಲ್ 10ರಂದು ಬಿಡುಗಡೆ ಆಗಲಿರುವ ‘ವಿದ್ಯಾಪತಿ’ ಸಿನಿಮಾದಲ್ಲಿ ಮಲೈಕಾ ವಸುಪಾಲ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದು ಕಾಮಿಡಿ ಸಿನಿಮಾ ಆಗಿದ್ದರೂ ಕೂಡ ಇದರಲ್ಲಿ ಪ್ರೇಕ್ಷಕರಿಗೆ ಮುಜುಗರ ಆಗುವಂತಹ ದೃಶ್ಯಗಳಿಲ್ಲ ಎಂದು ಮಲೈಕಾ ಹೇಳಿದ್ದಾರೆ. ಡಾಲಿ ಧನಂಜಯ ನಿರ್ಮಾಣ ಮಾಡಿದ ಈ ಚಿತ್ರದಲ್ಲಿ ನಾಗಭೂಷಣ ಹೀರೋ ಆಗಿದ್ದಾರೆ.

ಮುಜುಗರ ಆಗುವ ಒಂದು ದೃಶ್ಯ ಕೂಡ ‘ವಿದ್ಯಾಪತಿ’ ಚಿತ್ರದಲ್ಲಿ ಇಲ್ಲ: ಮಲೈಕಾ
Malaika Vasupal
Follow us
TV9 Web
| Updated By: ಮದನ್​ ಕುಮಾರ್​

Updated on: Apr 08, 2025 | 5:29 PM

ನಟಿ ಮಲೈಕಾ ವಸುಪಾಲ್ (Malaika Vasupal) ಅವರು ವೃತ್ತಿಜೀವನದ ಆರಂಭದಲ್ಲಿ ಕಾಮಿಡಿ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲು ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಟಿಸಿದ ಅವರು ಈಗ ‘ವಿದ್ಯಾಪತಿ’ (Vidyapati) ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ನಾಗಭೂಷಣ್ (Nagabhushana) ಜೊತೆ ತೆರೆ ಹಂಚಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಕಾಮಿಡಿ ಸಿನಿಮಾ ಆರಿಸಿಕೊಂಡಿರುವ ಅವರಿಗೆ ಈ ಪ್ರಕಾರದ ಚಿತ್ರಗಳ ಮೇಲೆ ನಂಬಿಕೆ ಇದೆ. ಉತ್ತಮವಾದ ಕಾಮಿಡಿ ಸಿನಿಮಾಗಳು ಎಂದಿಗೂ ಸೋತಿಲ್ಲ ಎಂದು ಅವರು ಹೇಳಿದ್ದಾರೆ. ಟಿವಿ9 ಸಂದರ್ಶನದಲ್ಲಿ ಮಲೈಕಾ ವಸುಪಾಲ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾ ಹಿಟ್ ಆಯಿತು. ಈಗ ‘ವಿದ್ಯಾಪತಿ’ ಕೂಡ ಜನರಿಗೆ ಇಷ್ಟ ಆಗಲಿದೆ ಎಂಬ ನಂಬಿಕೆ ಮಲೈಕಾ ವಸುಪಾಲ್ ಅವರಿಗೆ ಇದೆ. ‘ಜನರು ಉಪಾಧ್ಯಕ್ಷ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ರಿಲೀಸ್ ಸಮಯದಲ್ಲಿ ನಮಗೂ ಗೊತ್ತಿರಲಿಲ್ಲ. ಜನರು ತುಂಬ ಚೆನ್ನಾಗಿ ಸ್ವೀಕರಿಸಿದರು. ನನಗೆ ಅನಿಸುವ ಪ್ರಕಾರ ಕಾಮಿಡಿ ಸಿನಿಮಾಗಳು ಯಾವತ್ತೂ ಸೋತಿಲ್ಲ’ ಎಂದು ಮಲೈಕಾ ವಸುಪಾಲ್ ಹೇಳಿದ್ದಾರೆ.

‘ನಮ್ಮ ವಿದ್ಯಾಪತಿ ಸಿನಿಮಾ ತುಂಬ ಕ್ಲೀನ್ ಕಾಮಿಡಿ. ಮಕ್ಕಳಿಗೆ ಇಷ್ಟ ಆಗುತ್ತದೆ. ಯಾವುದೇ ಡಬಲ್ ಮೀನಿಂಗ್ ಜೋಕ್ ಇಲ್ಲ. ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಆರಾಮಾಗಿ ಕುಳಿತುಕೊಂಡು ನೋಡಬಹುದು. ಮುಜುಗರ ಆಗುವಂತಹ ಒಂದು ಸೀನ್ ಕೂಡ ಈ ಸಿನಿಮಾದಲ್ಲಿ ಇಲ್ಲ. ಗಂಭೀರವಾದ ವಿಚಾರವನ್ನು ಕಾಮಿಡಿ ಮೂಲಕ ಹೇಳಿದ್ರೆ ಆ ಪ್ರಯತ್ನ ಎಂದಿಗೂ ಸೋಲುವುದಿಲ್ಲ’ ಎಂದಿದ್ದಾರೆ ಮಲೈಕಾ ವಸುಪಾಲ್.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ವಿದ್ಯಾಪತಿ’ ಸಿನಿಮಾದಲ್ಲಿ ಮಲೈಕಾ ಅವರು ಸೂಪರ್​ ಸ್ಟಾರ್​ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 10ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಡಾಲಿ ಧನಂಜಯ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಒಂದು ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಟ್ರೇಲರ್​ನಲ್ಲಿ ಡಾಲಿ ಧನಂಜಯ ಅವರ ಪಾತ್ರ ಗಮನ ಸೆಳೆದಿದೆ.

ಇದನ್ನೂ ನೋಡಿ: ‘ವಿದ್ಯಾಪತಿ’ ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆದ ಕನ್ನಡದ ಮಲೈಕಾ

ಈ ಸಿನಿಮಾದ ‘ಮದನಾರಿ’ ಹಾಡಿನಲ್ಲಿ ಮಲೈಕಾ ವಸುಪಾಲ್ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ನಾನು ಮಾಡಿರುವುದು ಸೂಪರ್ ಸ್ಟಾರ್ ಪಾತ್ರ. ಅಂಥ ಸೂಪರ್​ ಸ್ಟಾರ್ ನಟಿಯರು ಹಲವು ಬಗೆಯ ಪಾತ್ರ ಮಾಡಿರುತ್ತಾರೆ. ಅದನ್ನೆಲ್ಲ ಒಂದು ಹಾಡಿನಲ್ಲಿ ತೋರಿಸಿದ್ದಾರೆ. ಆ ಹಾಡು ಅಸಭ್ಯವಾಗಿ ಇಲ್ಲ. ಶೂಟಿಂಗ್ ಮಾಡುವಾಗ ಅಮ್ಮ ಕೂಡ ಪಕ್ಕದಲ್ಲಿ ಇದ್ದರು. ಆ ವಿಚಾರದಲ್ಲಿ ಅಮ್ಮ ಬೆಂಬಲ ನೀಡಿದರು. ಒಂದು ಮಿತಿಯಲ್ಲಿ ಮಾಡಿದರೆ ಏನೂ ಅಶ್ಲೀಲ ಎನಿಸುವುದಿಲ್ಲ. ತಂದೆ-ತಾಯಿ ಕೂಡ ಒಪ್ಪುತ್ತಾರೆ’ ಎಂದಿದ್ದಾರೆ ಮಲೈಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ