ಧನ್ವೀರ್ ಮದುವೆಗೆ ಯಾವ ಬಟ್ಟೆ ಹಾಕಿಕೊಳ್ಳಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದರ್ಶನ್
ಧನ್ವೀರ್ ಹಾಗೂ ದರ್ಶನ್ ಅವರು ಒಟ್ಟಾಗಿ ‘ವಾಮನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾ ವೀಕ್ಷಣೆ ವೇಳೆ ನಟ ಧನ್ವೀರ್ ವಿವಾಹದ ಪ್ಲ್ಯಾನ್ ರಿವೀಲ್ ಮಾಡಿದ್ದಾರೆ. ಯಾವಾಗ ಯಾವ ಬಟ್ಟೆ ಧರಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಚ್ಚರಿ ಆಗಿದೆ.
ದರ್ಶನ್ (Darshan) ಅವರು ಆಪ್ತ ಗೆಳೆಯ ಧನ್ವೀರ್ ಅವರ ‘ವಾಮನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಚಿತ್ರವನ್ನು ನೊಡುವಾಗ ಅವರು ಧನ್ವೀರ್ ವಿವಾಹ ವಿಚಾರ ಮಾತನಾಡಿದ್ದಾರೆ. ಧನ್ವೀರ್ ತಂದೆ-ತಾಯಿ ಬಳಿ ಬೇಗ ಮಗನ ಮದುವೆ ಮಾಡುವಂತೆ ಕೋರಿದ್ದಾರೆ. ಅಲ್ಲದೆ, ಮದುವೆ ದಿನ ಯಾವ ಬಟ್ಟೆ, ರಿಸೆಪ್ಷನ್ಗೆ ಯಾವ ಬಟ್ಟೆ ಧರಿಸಬೇಕು ಎಂಬುದನ್ನು ದರ್ಶನ್ ಪ್ಲ್ಯಾನ್ ಮಾಡಿಟ್ಟಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 10, 2025 08:20 AM