Daily Devotional: ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಈ ವಿಡಿಯೋದಲ್ಲಿ ಅತಿಥಿ ದೇವೋಭವ ಪರಿಕಲ್ಪನೆ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಪ್ರಾಚೀನ ಸಂಪ್ರದಾಯಗಳ ಪ್ರಕಾರ, ಅತಿಥಿ ಸತ್ಕಾರವು ಪುಣ್ಯಕರ ಮತ್ತು ಕರ್ಮಫಲಗಳನ್ನು ತೊಡೆದುಹಾಕುವುದು ಎಂದು ಹೇಳಲಾಗುತ್ತದೆ. ಅತಿಥಿಗಳಿಗೆ ಆಹಾರ ನೀಡುವುದರಿಂದ ಆರೋಗ್ಯ ಮತ್ತು ಮನಸ್ಸಿನ ತೃಪ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ವಿಡಿಯೋ ನೋಡಿ.
ಬೆಂಗಳೂರು, ಏಪ್ರಿಲ್ 10: ಅತಿಥಿ ಸತ್ಕಾರವು ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರಾಚೀನ ಕಾಲದಿಂದಲೂ, ಮನೆಗೆ ಬಂದ ಅತಿಥಿಗಳಿಗೆ ಆಹಾರ ನೀಡುವುದನ್ನು ಪುಣ್ಯಕಾರ್ಯವೆಂದು ಪರಿಗಣಿಸಲಾಗುತ್ತದೆ. ಅತಿಥಿ ದೇವೋಭವ ಎಂಬ ಮಾತಿನಂತೆ, ಅತಿಥಿಗಳು ದೇವರ ಸಮಾನರು ಎಂಬ ನಂಬಕೆ. ಅವರಿಗೆ ಆಹಾರ ನೀಡುವುದರಿಂದ ಕರ್ಮಫಲಗಳನ್ನು ತೊಡೆದುಹಾಕಿಕೊಳ್ಳಬಹುದು ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ಆಹಾರ ನೀಡುವುದರಲ್ಲಿ ಭಕ್ತಿ ಮತ್ತು ಸಂತೃಪ್ತಿ ಮುಖ್ಯ. ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡುವುದು ಸಕಾರಾತ್ಮಕತೆ ಮತ್ತು ತೃಪ್ತಿಯನ್ನು ತರುತ್ತದೆ. ವೃದ್ಧರು, ಮಕ್ಕಳು, ಅಶಕ್ತರು ಮತ್ತು ಅನಾಥರಿಗೆ ಆಹಾರ ನೀಡುವುದು ಅತ್ಯಂತ ಪುಣ್ಯದ ಕೆಲಸವಾಗಿದೆ.
Latest Videos