ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಧನ್ವೀರ್ ಗೌಡ ಅವರು ನಟಿಸಿದ ‘ವಾಮನ’ ಸಿನಿಮಾದ ವಿಶೇಷ ಪ್ರದರ್ಶನ ಬೆಂಗಳೂರಿನ ಜಿಟಿ ಮಾಲ್ನಲ್ಲಿ ನಡೆದಿದೆ. ಸೆಲೆಬ್ರಿಟಿಗಳಗಾಗಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಅವರು ಬಂದು ಕಾರಿನಿಂದ ಇಳಿದ ಕೂಡಲೇ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ.
ನಟ ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅದರ ನಡುವೆಯೂ ಅವರು ‘ವಾಮನ’ (Vaamana) ಸಿನಿಮಾದ ಪ್ರೀಮಿಯರ್ ಶೋಗೆ ಹಾಜರಿ ಹಾಕಿದ್ದಾರೆ. ಇದು ಧನ್ವೀರ್ ಗೌಡ (Dhanveer Gowda) ನಟನೆಯ ಸಿನಿಮಾ. ಆದ್ದರಿಂದ ಅವರು ಸಪೋರ್ಟ್ ಮಾಡಲು ಬಂದಿದ್ದಾರೆ. ದರ್ಶನ್ ಅವರು ಬಂದ ಕೂಡಲೇ ಅಭಿಮಾನಿಗಳು ಮುತ್ತಿಕೊಂಡರು. ಡಿ ಬಾಸ್ ಎಂದು ಜೈಕಾರ ಕೂಗಲು ಆರಂಭಿಸಿದರು. ಕುಂಟುತ್ತಲೇ ಸಾಗಿದ ದರ್ಶನ್ (Darshan) ಅವರು ಚಿತ್ರತಂಡದ ಜೊತೆ ಕುಳಿತು ‘ವಾಮನ’ ಸಿನಿಮಾ ನೋಡಿದರು. ಈ ಚಿತ್ರ ಏಪ್ರಿಲ್ 10ರಂದು ರಾಜ್ಯದ್ಯಂತ ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos