Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಮುನಾ ಸ್ವಚ್ಛತಾ ಕಾರ್ಯ; ವಜೀರಾಬಾದ್ ಬ್ಯಾರೇಜ್‌ನಲ್ಲಿ ನದಿ ಭಾಗದ ಚರಂಡಿಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ

ಯಮುನಾ ಸ್ವಚ್ಛತಾ ಕಾರ್ಯ; ವಜೀರಾಬಾದ್ ಬ್ಯಾರೇಜ್‌ನಲ್ಲಿ ನದಿ ಭಾಗದ ಚರಂಡಿಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ರೇಖಾ ಗುಪ್ತಾ

ಸುಷ್ಮಾ ಚಕ್ರೆ
|

Updated on: Apr 10, 2025 | 4:27 PM

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವ ಪರ್ವೇಶ್ ವರ್ಮಾ ವಜೀರಾಬಾದ್‌ನಲ್ಲಿ ಚರಂಡಿಯನ್ನು ಪರಿಶೀಲಿಸಿದರು. ದೆಹಲಿ ಮುಖ್ಯಮಂತ್ರಿ ಇತರ ಸಚಿವರೊಂದಿಗೆ ಯಮುನಾ ನದಿ ಮತ್ತು ಒಳಚರಂಡಿ ಯೋಜನೆಗಳನ್ನು ಪರಿಶೀಲಿಸಿದರು. ನದಿ ದಂಡೆಯ ಅಭಿವೃದ್ಧಿಗಾಗಿ ಕೆಲಸ ಮಾಡಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲೆಫ್ಟಿನೆಂಟ್ ಗವನರ್ನರ್ ವಿ.ಕೆ. ಸಕ್ಸೇನಾ, ಜಲ ಸಚಿವ ಪರ್ವೇಶ್ ವರ್ಮಾ, ದೆಹಲಿ ಜಲ ಮಂಡಳಿ (ಡಿಜೆಬಿ), ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಹಲವಾರು ಅಧಿಕಾರಿಗಳು ಮುಖ್ಯಮಂತ್ರಿಯೊಂದಿಗೆ ಇದ್ದರು.

ನವದೆಹಲಿ, ಏಪ್ರಿಲ್ 10: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (CM Rekha Gupta) ಇಂದು (ಏಪ್ರಿಲ್ 10) ಹಲವಾರು ದೊಡ್ಡ ಚರಂಡಿಗಳು ಮತ್ತು ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ನದಿ (Yamuna River) ಭಾಗದ ಚರಂಡಿಗಳನ್ನು ಪರಿಶೀಲಿಸಿದರು. ನದಿ ದಂಡೆಯ ಯೋಜನೆಯಲ್ಲಿ ಕೆಲಸ ಮಾಡಲು ಸಿಎಂ ರೇಖಾ ಗುಪ್ತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನದಿ ಶುದ್ಧೀಕರಣದ ನಡೆಯುತ್ತಿರುವ ಕಾರ್ಯಗಳನ್ನು ಪರಿಶೀಲಿಸಿದರು ಮತ್ತು ಯಮುನಾ ನದಿ ದಂಡೆಯ ಯೋಜನೆಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಯೋಜನೆಯು ನದಿಯ ಉದ್ದಕ್ಕೂ ವಾಕಿಂಗ್ ಟ್ರ್ಯಾಕ್‌ಗಳು ಮತ್ತು ಮನರಂಜನಾ ಪ್ರದೇಶಗಳನ್ನು ರಚಿಸುವುದನ್ನು ಒಳಗೊಂಡಿರುತ್ತದೆ. ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಯಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ