IPL 2025: ಸ್ಟಾರ್ಕ್ ಓವರ್‌ನಲ್ಲಿ 30 ರನ್ ಚಚ್ಚಿದ ಕೊಹ್ಲಿ- ಸಾಲ್ಟ್; ವಿಡಿಯೋ ನೋಡಿ
Virat Kohli, Phil Salt Blast: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರು ಅದ್ಭುತ ಪ್ರದರ್ಶನ ನೀಡಿದರು. ಸ್ಟಾರ್ಕ್ ಎಸೆದ ಒಂದು ಓವರ್‌ನಲ್ಲಿ ಈ ಇಬ್ಬರು 30 ರನ್ ಗಳಿಸಿ ಆರ್‌ಸಿಬಿಗೆ ಅದ್ಭುತ ಆರಂಭ ನೀಡಿದರು. ಈ ಇಬ್ಬರ ಅದ್ಭುತ ಬ್ಯಾಟಿಂಗ್‌ನಿಂದ ಆರ್‌ಸಿಬಿ ಮೊದಲ ಮೂರು ಓವರ್‌ಗಳಲ್ಲಿ 53 ರನ್ ಗಳಿಸಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆರ್‌ಸಿಬಿ ಪರ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್, ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್‌ನಲ್ಲಿ ಬರೋಬ್ಬರಿ 30 ರನ್ ಕಲೆಹಾಕಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಆರ್‌ಸಿಬಿ ಮೊದಲ 3 ಓವರ್‌ಗಳಲ್ಲಿ 53 ರನ್ ಕಲೆಹಾಕಿತು.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್ನ ಸ್ಟ್ರೈಕ್ ತೆಗೆದುಕೊಂಡ ಫಿಲ್ ಸಾಲ್ಟ್ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದರು. ಆ ಬಳಿಕ ಎರಡು, ಮೂರು ಹಾಗೂ ನಾಲ್ಕನೇ ಎಸೆತವನ್ನು ಸಾಲ್ಟ್ ಬೌಂಡರಿ ಬಾರಿಸಿದರು. ದುರಾದೃಷ್ಟವೆಂಬಂತೆ ಸ್ಟಾರ್ಕ್ ಎಸೆದ ನಾಲ್ಕನೇ ಎಸೆತ ನೋ ಬಾಲ್ ಆಗಿತ್ತು. ಆ ಬಳಿಕ ಫ್ರೀ ಹಿಟ್ನಲ್ಲೂ ಸಾಲ್ಟ್ ಸಿಕ್ಸರ್ ಬಾರಿಸಿದರು. ಐದನೇ ಎಸೆತದಲ್ಲಿ ಸಾಲ್ಟ್ ಸಿಂಗಲ್ ತೆಗೆದುಕೊಂಡರು. ಕೊನೆಯ ಬಾಲ್ನಲ್ಲಿ ಸ್ಟ್ರೈಕ್ಗೆ ಬಂದ ಕೊಹ್ಲಿ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದರು. ಈ ಮೂಲಕ ಆರ್‌ಸಿಬಿ ಕೇವಲ 18 ಎಸೆತಗಳಲ್ಲಿ 53 ರನ್ ಕಲೆಹಾಕಿತು.

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
