AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 27 May: ಚಿನ್ನ ಮತ್ತು ಬೆಳ್ಳಿ ಮತ್ತೆ ಮತ್ತೆ ಇಳಿಕೆ; ನೋಡಿ ಇವತ್ತು ಎಷ್ಟಿದೆ ರೇಟು, ಇಲ್ಲಿದೆ ಡೀಟೇಲ್ಸ್

Bullion Market 2023, May 27th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,710 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 72.90 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 27 May: ಚಿನ್ನ ಮತ್ತು ಬೆಳ್ಳಿ ಮತ್ತೆ ಮತ್ತೆ ಇಳಿಕೆ; ನೋಡಿ ಇವತ್ತು ಎಷ್ಟಿದೆ ರೇಟು, ಇಲ್ಲಿದೆ ಡೀಟೇಲ್ಸ್
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 27, 2023 | 5:00 AM

Share

ಮುಖ್ಯಾಂಶಗಳು

  • ಭಾರತದಲ್ಲಿ ಮೇ 27ರಂದು 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 55,650 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 7,290 ರೂ ಇದೆ.
  • ದುಬೈ ಬಳಿಕ ಅಮೆರಿಕದಲ್ಲೂ ಚಿನ್ನದ ಬೆಲೆ ಮತ್ತೆ 50,000 ರೂ ಒಳಗೆ ಬಂದಿದೆ. ಸಿಂಗಾಪುರದಲ್ಲೂ ತಕ್ಕಮಟ್ಟಿಗೆ ಚಿನ್ನ ಅಗ್ಗವಾಗಿದೆ.
  • ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 55,700 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,620 ರೂ ಇದೆ.

ಬೆಂಗಳೂರು: ಈ ವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ (Gold and Silver Prices) ಓಟ ಮುಂದುವರಿದಿದೆ. ಬಹುತೇಕ ದೇಶ ವಿದೇಶ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿದಿದೆ. ಅಮೆರಿಕ ಮತ್ತು ದುಬೈನಲ್ಲಿ ಚಿನ್ನದ ಬೆಲೆ 50,000 ರೂ ಮಟ್ಟಕ್ಕಿಂತ ಕಡಿಮೆಗೆ ಇಳಿದಿದೆ. ಸಿಂಗಾಪುರ, ಕುವೇತ್​ನಲ್ಲೂ ಬೆಲೆ ನಿರೀಕ್ಷೆಮೀರಿ ಕುಸಿಯುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,290 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,620 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿGermany: ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಈ ಸ್ಥಿತಿ ಬರಲು ಏನು ಕಾರಣ? ಭಾರತಕ್ಕಿದೆಯಾ ಆತಂಕ?

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 27ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,710 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 729 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,920 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,700 ರೂ
  • ಚೆನ್ನೈ: 56,050 ರೂ
  • ಮುಂಬೈ: 55,650 ರೂ
  • ದೆಹಲಿ: 55,800 ರೂ
  • ಕೋಲ್ಕತಾ: 55,650 ರೂ
  • ಕೇರಳ: 55,650 ರೂ
  • ಅಹ್ಮದಾಬಾದ್: 55,700 ರೂ
  • ಜೈಪುರ್: 55,800 ರೂ
  • ಲಕ್ನೋ: 55,800 ರೂ
  • ಭುವನೇಶ್ವರ್: 55,650 ರೂ

ಇದನ್ನೂ ಓದಿHighest Pay: ಯಾವ ನಗರಗಳಲ್ಲಿ ಹೆಚ್ಚು ಸಂಬಳ; ಯಾವ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್; ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (51,183 ರುಪಾಯಿ)
  • ದುಬೈ: 2190 ಡಿರಾಮ್ (49,273 ರುಪಾಯಿ)
  • ಅಮೆರಿಕ: 595 ಡಾಲರ್ (49,211 ರುಪಾಯಿ)
  • ಸಿಂಗಾಪುರ: 819 ಸಿಂಗಾಪುರ್ ಡಾಲರ್ (50,044 ರುಪಾಯಿ)
  • ಕತಾರ್: 2,250 ಕತಾರಿ ರಿಯಾಲ್ (51,049 ರೂ)
  • ಓಮನ್: 238.50 ಒಮಾನಿ ರಿಯಾಲ್ (51,176 ರುಪಾಯಿ)
  • ಕುವೇತ್: 187 ಕುವೇತಿ ದಿನಾರ್ (50,232 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,620 ರೂ
  • ಚೆನ್ನೈ: 7,620 ರೂ
  • ಮುಂಬೈ: 7,290 ರೂ
  • ದೆಹಲಿ: 7,290 ರೂ
  • ಕೋಲ್ಕತಾ: 7,290 ರೂ
  • ಕೇರಳ: 7,620 ರೂ
  • ಅಹ್ಮದಾಬಾದ್: 7,290 ರೂ
  • ಜೈಪುರ್: 7,290 ರೂ
  • ಲಕ್ನೋ: 7,290 ರೂ
  • ಭುವನೇಶ್ವರ್: 7,620 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ