Sign In

By signing in or creating an account, you agree with Associated Broadcasting Company's Terms & Conditions and Privacy Policy.

Germany: ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಈ ಸ್ಥಿತಿ ಬರಲು ಏನು ಕಾರಣ? ಭಾರತಕ್ಕಿದೆಯಾ ಆತಂಕ?

Reasons Why Germany Facing Economic Recession: ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮೈನಸ್​ಗೆ ಹೋದರೆ ಅದು ಆರ್ಥಿಕ ಹಿಂಜರಿತದ ಸಂಕೇತವಾಗಿದೆ. 2020ರಲ್ಲಿ ಕೋವಿಡ್ ನಂತರ, 2 ವರ್ಷದ ಅಂತರದಲ್ಲಿ ಜರ್ಮನಿ ಎರಡು ಬಾರಿ ರಿಸಿಶನ್​ಗೆ ಸಿಲುಕಿದಂತಾಗಿದೆ.

Germany: ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಈ ಸ್ಥಿತಿ ಬರಲು ಏನು ಕಾರಣ? ಭಾರತಕ್ಕಿದೆಯಾ ಆತಂಕ?
ಜರ್ಮನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2023 | 12:13 PM

ಬರ್ಲಿನ್: ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಹಿನ್ನಡೆ (Economic Recession) ಬಗ್ಗೆ ಸುದ್ದಿಗಳನ್ನು ಸಾಕಷ್ಟು ಓದಿದ್ದೇವೆ. ಹೆಚ್ಚಾಗಿ ಅಮೆರಿಕ ಮತ್ತು ಬ್ರಿಟನ್​ನ ಆರ್ಥಿಕ ಸಂಕಷ್ಟದ ಬಗ್ಗೆ ವರದಿಗಳು ಬಹಳಷ್ಟು ಬಂದಿವೆ. ಇದೀಗ ಜರ್ಮನಿ ದೇಶ ಹೆಚ್ಚು ಸದ್ದಿಲ್ಲದೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. 2022ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಜರ್ಮನಿಯ ಆರ್ಥಿಕತೆ ಶೇ. 0.5ರಷ್ಟು ಕುಸಿತ ಕಂಡಿತ್ತು. ಅಂದರೆ, ಮೈನಸ್ 0.5ಗೆ ಇಳಿದಿತ್ತು. ಇದೀಗ 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 0.3ರಷ್ಟು ಜಿಡಿಪಿ ಕುಸಿತವಾಗಿದೆ. ಅಂದರೆ ಮೈನಸ್ 0.3 ಆಗಿದೆ. ಜರ್ಮನಿ ಸರ್ಕಾರದ ಸಾಂಖ್ಯಿಕ ಕಚೇರಿಯಿಂದ ಈ ಮಾಹಿತಿಯನ್ನು ಮೇ 25ರಂದು ಬಿಡುಗಡೆ ಮಾಡಲಾಗಿದೆ. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮೈನಸ್​ಗೆ ಹೋದರೆ ಅದು ಆರ್ಥಿಕ ಹಿಂಜರಿತದ ಸಂಕೇತವಾಗಿದೆ. 2020ರಲ್ಲಿ ಕೋವಿಡ್ ನಂತರ, 2 ವರ್ಷದ ಅಂತರದಲ್ಲಿ ಜರ್ಮನಿ ಎರಡು ಬಾರಿ ರಿಸಿಶನ್​ಗೆ ಸಿಲುಕಿದಂತಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮಗಳು ಯೂರೋಪಿಯನ್ ದೇಶಗಳ ಬುಡ ಅಲುಗಾಡಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಅತಿಹೆಚ್ಚು ಬಾಧಿತವಾಗಿರುವುದು ಬ್ರಿಟನ್ ಮತ್ತು ಜರ್ಮನಿ ಮಾತ್ರವೇ. ಬೇರೆ ಯೂರೋಪಿಯನ್ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಪಾರಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಿಷಿ ಸುನಕ್ ಪ್ರಧಾನಿಯಾದ ಬಳಿಕ ಬ್ರಿಟನ್ ದೇಶದ ಆರ್ಥಿಕತೆಯೂ ಪ್ರಪಾತಕ್ಕೆ ಬೀಳುವುದರಿಂದ ಬಚಾವ್ ಆಗಿದೆ. ಜರ್ಮನಿ ವಿಚಾರಕ್ಕೆ ಬಂದರೆ, ರಷ್ಯಾ ಉಕ್ರೇನ್ ಯುದ್ಧದಿಂದ ಮುರಿದಿದ್ದ ಸರಬರಾಜು ಸರಪಳಿ ವ್ಯವಸ್ಥೆ ಮತ್ತೆ ಕ್ರೋಢೀಕರಣಗೊಂಡರೂ ಆರ್ಥಿಕತೆಯ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ. ಹಣದುಬ್ಬರವೇ ಜರ್ಮನಿ ಪಾಲಿಗೆ ಪ್ರಮುಖ ವಿಲನ್ ಆಗಿರುವುದು.

ಇದನ್ನೂ ಓದಿDevi Shetty: ಕಡಿಮೆ ಬೆಲೆಗೆ ವೈದ್ಯಕೀಯ ಚಿಕಿತ್ಸೆ ಕೊಡುವ ಡಾ. ದೇವಿಶೆಟ್ಟಿ ಆಸ್ತಿ ರೂ 11,000 ಕೋಟಿಗೂ ಹೆಚ್ಚು; ಅಷ್ಟು ಸಂಪಾದನೆ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ

ಜರ್ಮನಿ ಆರ್ಥಿಕ ಹಿಂಜರಿತ ಕಾಣಲು ಪ್ರಮುಖ ಕಾರಣಗಳೇನು?

  • ಹಣದುಬ್ಬರ: ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆ.
  • ವೆಚ್ಚ ಕಡಿತ: ಜನಸಾಮಾನ್ಯರು ವೆಚ್ಚ ಪ್ರಮಾಣ ತೀರಾ ಕಡಿಮೆ ಮಾಡಿದ್ದು.
  • ಸರ್ಕಾರದಿಂದಲೂ ವೆಚ್ಚ ಕಡಿತ
  • ರಷ್ಯಾ ಉಕ್ರೇನ್ ಯುದ್ಧ ಪರಿಣಾಮ ಪೆಟ್ರೋಲ್, ಗ್ಯಾಸ್ ಸರಬರಾಜಿಗೆ ಅಡೆತಡೆ; ಪೆಟ್ರೋಲ್ ಬೆಲೆ ಏರಿಕೆ

ಜರ್ಮನಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳುವ ಅವಕಾಶ ಇದೆಯಾ?

ಜರ್ಮನಿ ದೇಶದಲ್ಲಿ ಎಲ್ಲವೂ ತೀರಾ ಹಾಳಾಗಿಲ್ಲ. ಸತತ ಎರಡು ಕ್ವಾರ್ಟರ್ ಮಾತ್ರ ಜಿಡಿಪಿ ಬೆಳವಣಿಗೆ ಮೈನಸ್​ನಲ್ಲಿದೆ. ಆದರೆ, ಹೆಚ್ಚು ಶೀತವಿಲ್ಲದ ಚಳಿಗಾಲ, ಕೈಗಾರಿಕೆಗಳ ಚಟುವಟಿಕೆ ಗರಿಗೆದರಿರುವುದು, ಹೂಡಿಕೆ ಹೆಚ್ಚಾಗಿರುವುದು, ರಫ್ತು ಹೆಚ್ಚಾಗಿರುವುದು, ಆಮದು ಕಡಿಮೆ ಆಗಿರುವುದು ಇವೆಲ್ಲವೂ ಜರ್ಮನಿಗೆ ಪಾಸಿಟಿವ್ ಸಂಕೇತಗಳಾದರೂ, ಸದ್ಯಕ್ಕೆ ಹಿಂಜರಿತ ತಡೆಯುವಷ್ಟು ಇವು ಪರಿಣಾಮಕಾರಿ ಎನಿಸಿಲ್ಲ. ಈ ಪಾಸಿಟಿವ್ ಸಿಗ್ನಲ್​ಗಳು ಮುಂದಿನ ತಿಂಗಳಲ್ಲೂ ಮುಂದುವರಿದರೆ ಜರ್ಮನಿ ಆರ್ಥಿಕ ಹಿಂಜರಿತದ ಸುಳಿಯಿಂದ ಪಾರಾಗಲು ಸಾಧ್ಯವಾಗಬಹುದು.

ಇದನ್ನೂ ಓದಿElon Musk: ನಾನು ಮಾಡಿದಂತೆ ಮಾಡಿ; ನಾಲಾಯಕ್ಕರು ಬಹಳ ಮಂದಿ ಇದ್ದಾರೆ, ಕಿತ್ತುಹಾಕಿ: ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಚುಚ್ಚುಮಾತು

ಜರ್ಮನಿಗಾದ ರಿಸಿಶನ್ ತೊಂದರೆ ಭಾರತಕ್ಕೂ ಆಗುತ್ತಾ?

ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಲು ಪ್ರಮುಖ ಕಾರಣವಾಗಿರುವುದು ಅದರ ಜಿಡಿಪಿ ಬೆಳವಣಿಗೆ ಕುಸಿತ ಹಾಗೂ ಪೆಟ್ರೋಲ್ ಅಭಾವ ಎಂಬೆರಡು ಅಂಶಗಳು. ಭಾರತ ಈ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಅಗ್ಗದ ಬೆಲೆಗೆ ತೈಲಗಳು ಸಿಗುತ್ತಿವೆ. ಇದರಿಂದ ದೇಶದ ಬೊಕ್ಕಸಕ್ಕೆ ಒಳ್ಳೆಯ ಲಾಭವಾಗುತ್ತಿದೆ. ಭಾರತದ ಜಿಡಿಪಿ ಕೂಡ ಬೇರೆ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ವೇಗದಲ್ಲಿದೆ.

ಇನ್ನು, ಅಮೆರಿಕಕ್ಕೆ ತೊಂದರೆ ಆದರೆ ಭಾರತಕ್ಕೆ ಪರಿಣಾಮಗಳುಂಟು. ಯಾಕೆಂದರೆ ಭಾರತದ ಬಹುತೇಕ ಐಟಿ ಕಂಪನಿಗಳಿಗೆ ಆದಾಯ ಮೂಲವೇ ಅಮೆರಿಕಾ. ಆದರೆ, ಜರ್ಮನಿಯೊಂದಿಗೆ ಭಾರತದ ತೀರಾ ದೊಡ್ಡ ವ್ಯಾವಹಾರಿಕ ಸಂಬಂಧವಿಲ್ಲ. ಭಾರತದಲ್ಲಿ ಹೂಡಿಕೆ ಮಾಡಿರುವ ವಿದೇಶಗಳ ಪೈಕಿ ಜರ್ಮನಿ 9ನೇ ಸ್ಥಾನದಲ್ಲಿದೆ. 2021ರಲ್ಲಿ ಜರ್ಮನಿ ಭಾರತಕ್ಕೆ ರೂ 1 ಲಕ್ಷ ಕೋಟಿಯಷ್ಟು ರಫ್ತು ಮಾಡಿತ್ತು. ಆ ವರ್ಷ ಜರ್ಮನಿಗೆ ಭಾರತದಿಂದ ಹೋದ ರಫ್ತು 72,000 ಕೋಟಿ ರೂ. ಇವೇನೂ ಸಾಧಾರಣ ಮೊತ್ತವಲ್ಲವಾದರೂ ಭಾರತಕ್ಕೆ ಸದ್ಯಕ್ಕೆ ದೊಡ್ಡ ಪರಿಣಾಮವಾಗುವ ಸಾಧ್ಯತೆ ಕಡಿಮೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್