Elon Musk: ನಾನು ಮಾಡಿದಂತೆ ಮಾಡಿ; ನಾಲಾಯಕ್ಕರು ಬಹಳ ಮಂದಿ ಇದ್ದಾರೆ, ಕಿತ್ತುಹಾಕಿ: ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಚುಚ್ಚುಮಾತು

Elon Musk Advise To Tech Companies: ಒಂದಿಷ್ಟು ತಾಳ್ಮೆ ಸಮಾಧಾನದಿಂದ ಉದ್ಯೋಗಕಡಿತ ಮಾಡುತ್ತಿರುವ ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಭಯಂಕರ ಸಲಹೆಯೊಂದನ್ನು ನೀಡಿದ್ದಾರೆ. ಬಹಳ ಮಂದಿರುವ ಅಪ್ರಯೋಜಕ ಉದ್ಯೋಗಿಗಳನ್ನು ಕಿತ್ತುಹಾಕುವಂತೆ ಅವರು ಕರೆ ನೀಡಿದ್ದಾರೆ.

Elon Musk: ನಾನು ಮಾಡಿದಂತೆ ಮಾಡಿ; ನಾಲಾಯಕ್ಕರು ಬಹಳ ಮಂದಿ ಇದ್ದಾರೆ, ಕಿತ್ತುಹಾಕಿ: ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಚುಚ್ಚುಮಾತು
ಎಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 25, 2023 | 6:06 PM

ಲಂಡನ್: ಟೆಕ್ಕೀ ಜಗತ್ತಿನಲ್ಲಿ ಬಹಳ ಸಂಚಲನಗಳಾಗಿವೆ. ಒಂದೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಯಾಂತ್ರಿಕ ಬುದ್ಧಿಮತ್ತೆ (AI) ನಮ್ಮ ನಮ್ಮ ತಂತ್ರಜ್ಞಾನದಲ್ಲಿ ಮಿಳಿತಗೊಳ್ಳುತ್ತಾ ಹೋಗುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನ ಕಂಪನಿಗಳು ಎಗ್ಗಿಲ್ಲದೇ ಜನರನ್ನು ಉದ್ಯೋಗದಿಂದ ಕಿತ್ತುಬಿಸಾಡುತ್ತಿವೆ. ಈ ಯಾಂತ್ರಿಕ ಬುದ್ಧಿಮತ್ತೆ ಉಚ್ಛ್ರಾಯ ಸ್ಥಿತಿಗೆ ಹೋಗುವ ಹಾದಿಯಲ್ಲಿ ಅದೆಷ್ಟು ಉದ್ಯೋಗಿಗಳು ನಿರುಪಯುಕ್ತರ ಸಾಲಿಗೆ ಸೇರಿ ಕೆಲಸ ಕಳೆದುಕೊಳ್ಳುತ್ತಾರೋ ಆ ದೇವರೇ ಬಲ್ಲ. ಈಗೇನೋ ಒಂದಿಷ್ಟು ತಾಳ್ಮೆ ಸಮಾಧಾನದಿಂದ ಉದ್ಯೋಗಕಡಿತ ಮಾಡುತ್ತಿರುವ ಟೆಕ್ಕಿ ಕಂಪನಿಗಳಿಗೆ ಎಲಾನ್ ಮಸ್ಕ್ ಭಯಂಕರ ಸಲಹೆಯೊಂದನ್ನು ನೀಡಿದ್ದಾರೆ. ಟ್ವಿಟ್ಟರ್​ನಲ್ಲಿ ನೋಡನೋಡುತ್ತಿದ್ದಂತೆಯೇ ಶೇ. 80ರಷ್ಟು ಉದ್ಯೋಗಿಗಳಿಗೆ ಗೇಟ್ ಪಾಸ್ ಕೊಟ್ಟಿದ್ದ ಎಲಾನ್ ಮಸ್ಕ್ ಈಗ ಅಂಥದ್ದೇ ಕೆಲಸ ಮಾಡುವಂತೆ ಸಿಲಿಕಾನ್ ವ್ಯಾಲಿ ಕಂಪನಿಗಳಿಗೆ ಸಲಹೆ ನೀಡಿದ್ದಾರಂತೆ.

ಸಿಲಿಕಾನ್ ವ್ಯಾಲಿ ಎಂಬುದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಒಂದು ಪ್ರದೇಶ. ಬಹುತೇಕ ಅಮೆರಿಕನ್ ಟೆಕ್ ಕಂಪನಿಗಳು ಇಲ್ಲಿಯೇ ನೆಲಸಿರುವುದು. ಇನ್ನು, ಎಲಾನ್ ಮಸ್ಕ್ ವಿಚಾರಕ್ಕೆ ಮರಳುವುದಾದರೆ, ಅವರು ಲಂಡನ್​ನಲ್ಲಿ ನಡೆದ ಸಿಇಒ ಕೌನ್ಸೆಲ್ ಸಮಿಟ್​ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ನೀಡಿದ ಆನ್​ಲೈನ್ ಸಂದರ್ಶನದಲ್ಲಿ ಜಾಬ್ ಕಟ್ ವಿಚಾರದ ಬಗ್ಗೆ ಮಾತನಾಡಿದರು. ಟ್ವಿಟ್ಟರ್​ನಲ್ಲಿ ತಾನು ಉದ್ಯೋಗಿಗಳನ್ನು ವಜಾಗೊಳಿಸಿದ ರೀತಿಯಲ್ಲೇ ಬೇರೆ ಕಂಪನಿಗಳೂ ಅನುಸರಿಸಲಿ ಎಂದು ಅವರು ಕರೆ ನೀಡಿದ್ದಾರೆ.

ತಾನು ಟ್ವಿಟ್ಟರ್ ಅನ್ನು ಖರೀದಿಸುವ ಮುನ್ನ ಬಹಳ ಮಂದಿ ಪ್ರಯೋಜನಕ್ಕೆ ಬರುವಂತಿರಲಿಲ್ಲ. ಆದ್ದರಿಂದ ತಾನು ಉದ್ಯೋಗಕಡಿತ ಮಾಡಿದ್ದರಿಂದ ಕಂಪನಿಯ ಪ್ರೊಡಕ್ಟಿವಿಟಿ ಉತ್ತಮಗೊಂಡಿತು ಎಂದು ಎಲಾನ್ ಮಸ್ಕ್ ವಿವರ ನೀಡಿದ್ದಾರೆ.

ಇದನ್ನೂ ಓದಿWipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ

ಟ್ವಿಟ್ಟರ್​ನಲ್ಲಿದ್ದಂತೆ ಬೇರೆ ಸಿಲಿಕಾನ್ ವ್ಯಾಲಿ ಕಂಪನಿಗಳಲ್ಲೂ ಪ್ರಯೋಜನಕ್ಕೆ ಬಾರದವರು ಬಹಳ ಮಂದಿ ಇದ್ದಾರೆ. ಕಂಪನಿಯ ಉತ್ಪನ್ನಶೀಲತೆಗೆ ತೊಂದರೆ ಆಗದ ರೀತಿಯಲ್ಲಿ ಬಹಳ ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿದೆ. ಇದರಿಂದ ಉತ್ಪಾದನೆಗೆ ಧಕ್ಕೆ ಆಗುವುದಿರಲಿ, ಬದಲಾಗಿ ಅದು ಇನ್ನಷ್ಟು ಹೆಚ್ಚುತ್ತದೆ ಎಂದು ಇಲಾನ್ ಮಸ್ಕ್ ತಿಳಿಹೇಳಿದ್ದಾರೆ.

ಎತ್ತು ಏರಿಗೆ ಎಳೆದರೆ, ಎಮ್ಮೆ ನೀರಿಗೆ ಎಳೆಯಿತು….

ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸುವ ಮುನ್ನ ಸುಮಾರು 7,500ರಿಂದ 8,000 ಮಂದಿ ಉದ್ಯೋಗಿಗಳಿದ್ದರು. ಮಸ್ಕ್ ಎಂಟ್ರಿ ಕೊಡುತ್ತಲೇ ಮೊದಲು ಮಾಡಿದ್ದು ಜಾಬ್ ಕಟ್. ಶೇ. 80ರಷ್ಟು ಮಂದಿ ಕೆಲಸ ಕಳೆದುಕೊಂಡರು. ಉಳಿದಿರುವುದು ಕೇವಲ 1,500 ಮಂದಿ ಉದ್ಯೋಗಿಗಳು ಮಾತ್ರ. ಇಷ್ಟೊಂದು ಮಂದಿಯನ್ನು ಯಾಕೆ ತೆಗೆಯಲಾಯಿತು ಎಂಬುದಕ್ಕೆ ಮಸ್ಕ್ ಒಂದು ಇಂಟರೆಸ್ಟಿಂಗ್ ಕಾರಣ ಕೊಟ್ಟಿದ್ದಾರೆ.

‘ಟ್ವಿಟ್ಟರ್​ನಲ್ಲಿ ಹೇಗಿತ್ತು ಸ್ಥಿತಿ ಎಂದರೆ 10 ಜನರ ಒಂದು ಮೀಟಿಂಗ್ ನಡೆಯುತ್ತಿರುತ್ತದೆ. ಅಲ್ಲಿ ಒಬ್ಬ ವ್ಯಕ್ತಿ ವೇಗ ಹೆಚ್ಚಿಸುತ್ತಿರುತ್ತಾನೆ. 9 ಮಂದಿ ಬ್ರೇಕ್ ಹಾಕುತ್ತಿರುತ್ತಾರೆ,’ ಎಂದು ವಾಲ್ ಸ್ಟ್ರೀಟ್ ಜರ್ನಲ್​ಗೆ ನೀಡಿದ ಸಂದರ್ಶನದಲ್ಲಿ ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿMeta Layoffs: ಫೇಸ್​ಬುಕ್​ನ ಟೀಮ್ ಇಂಡಿಯಾದಲ್ಲಿ ಹಲವರ ಲೇ ಆಫ್; ನಿರ್ದೇಶಕ ಹಂತದ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಸ್ ಕೂಡ ಮನೆಗೆ

ತೀರಾ ಕಷ್ಟಪಡುವುದಾದರೆ ಕೆಲಸ ಉಳಿಯುತ್ತೆ ಎಂದಿದ್ದ ಮಸ್ಕ್

ಎಲಾನ್ ಮಸ್ಕ್ ಪ್ರವೇಶವಾದ ಮೇಲೆ ಟ್ವಿಟ್ಟರ್ ಕಚೇರಿಯಲ್ಲಿ ಹಲವರು ತಡರಾತ್ರಿ ಕೆಲಸ ಮಾಡಿ ಮನೆಗೆ ಹೋಗದೇ ಆಫೀಸ್​ನಲ್ಲೇ ರಾತ್ರಿ ಮಲಗಿದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆಗೆ ಆಸ್ಪದ ಕೊಟ್ಟಿದ್ದವು. ಅದಕ್ಕೆ ಕಾರಣ ಆಗ ಮಸ್ಕ್ ವಿಧಿಸಿದ್ದ ಕಟ್ಟಳೆ.

‘ನಾವು ಅತಿಯಾಗಿ ಕಷ್ಟಪಟ್ಟು ಕೆಲಸ ಮಾಡಬೇಕು. ಹೆಚ್ಚು ಹೊತ್ತು ಶ್ರಮಪಡಬೇಕು. ಬಹಳ ಉತ್ತಮವಾಗಿ ಕೆಲಸ ಮಾಡಿದರೆ ಮಾತ್ರ ಪಾಸಿಂಗ್ ಗ್ರೇಡ್ ಸಿಗುತ್ತದೆ’ ಎಂದು ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಮೆಮೋ ಕೂಡ ಹಾಕಿದ್ದರು. ಇದರಿಂದ ಸಾವಿರಾರ ಉದ್ಯೋಗಿಗಳು ವಿಲವಿಲ ಒದ್ದಾಡಿ, ರಾತ್ರಿಯಿಡೀ ಕೆಲಸ ಮಾಡಿದರೂ ಮಸ್ಕ್​ಗೆ ತೃಪ್ತಿ ತರಲಿಲ್ಲ. ಶೇ. 80 ಮಂದಿಯನ್ನು ಅವರು ಮುಲಾಜಿಲ್ಲದೇ ಕಿತ್ತುಬಿಸುಟಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್