AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 26 May: ಚಿನ್ನ ಪ್ರಿಯರು ಮತ್ತೆ ನಿರಾಳ; ಬೆಳ್ಳಿಯ ಇಳಿಕೆಯ ಓಟಕ್ಕೆ ಇಲ್ಲ ತಡೆ; ಇಲ್ಲಿ ನೋಡಿ ಇತ್ತೀಚಿನ ಚಿನ್ನ, ಬೆಳ್ಳಿ ದರ

Bullion Market 2023, May 26th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,870 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 73.05 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 26 May: ಚಿನ್ನ ಪ್ರಿಯರು ಮತ್ತೆ ನಿರಾಳ; ಬೆಳ್ಳಿಯ ಇಳಿಕೆಯ ಓಟಕ್ಕೆ ಇಲ್ಲ ತಡೆ; ಇಲ್ಲಿ ನೋಡಿ ಇತ್ತೀಚಿನ ಚಿನ್ನ, ಬೆಳ್ಳಿ ದರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2023 | 5:00 AM

Share

ಮುಖ್ಯಾಂಶಗಳು

  • ಭಾರತದಲ್ಲಿ ಮೇ 26ರಂದು 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 55,800 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 7,305 ರೂ ಇದೆ.
  • ದುಬೈನಲ್ಲಿ ಚಿನ್ನದ ಬೆಲೆ ಮತ್ತೆ 50,000 ರೂ ಒಳಗೆ ಬಂದಿದೆ. ಅಮೆರಿಕ ಮೊದಲಾದೆಡೆಯೂ ಬೆಲೆ ಕಡಿಮೆ ಆಗಿದೆ.
  • ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 55,850 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರೂ ಇದೆ.

ಬೆಂಗಳೂರು: ಕಳೆದ ವಾರದಂತೆ ಚಿನ್ನದ ಬೆಲೆ (Gold and Silver Prices) ತೂಗುಯ್ಯಾಲೆ ಆಡುತ್ತಾ ಕೆಳಗೆ ಕುಸಿಯುವಂತೆ ತೋರುತ್ತಿದೆ. ಬಹುತೇಕ ವಿದೇಶ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿದಿದೆ. ಬೆಳ್ಳಿ ಬೆಲೆಯ ಸತತ ಇಳಿಕೆಯ ಓಟ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,305 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿArecanut Price: 25 ಮೇ ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 26ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,870 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 730.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,850 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,920 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,850 ರೂ
  • ಚೆನ್ನೈ: 56,250 ರೂ
  • ಮುಂಬೈ: 55,800 ರೂ
  • ದೆಹಲಿ: 55,950 ರೂ
  • ಕೋಲ್ಕತಾ: 55,800 ರೂ
  • ಕೇರಳ: 55,800 ರೂ
  • ಅಹ್ಮದಾಬಾದ್: 55,850 ರೂ
  • ಜೈಪುರ್: 55,950 ರೂ
  • ಲಕ್ನೋ: 55,950 ರೂ
  • ಭುವನೇಶ್ವರ್: 55,800 ರೂ

ಇದನ್ನೂ ಓದಿFD Rates: ಬಡ್ಡಿ ಮೇಲೆ ಟಿಡಿಎಸ್; ನಿಮ್ಮ ಎಫ್​ಡಿ ಹಣಕ್ಕೆ ನೀವಂದುಕೊಂಡಷ್ಟು ಸಿಗಲ್ಲ ರಿಟರ್ನ್ಸ್; ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (51,018 ರುಪಾಯಿ)
  • ದುಬೈ: 2200 ಡಿರಾಮ್ (49,593 ರುಪಾಯಿ)
  • ಅಮೆರಿಕ: 605 ಡಾಲರ್ (50,065 ರುಪಾಯಿ)
  • ಸಿಂಗಾಪುರ: 823 ಸಿಂಗಾಪುರ್ ಡಾಲರ್ (50,335 ರುಪಾಯಿ)
  • ಕತಾರ್: 2,260 ಕತಾರಿ ರಿಯಾಲ್ (51,409 ರೂ)
  • ಓಮನ್: 239 ಒಮಾನಿ ರಿಯಾಲ್ (51,472 ರುಪಾಯಿ)
  • ಕುವೇತ್: 189 ಕುವೇತಿ ದಿನಾರ್ (50,889 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,650 ರೂ
  • ಚೆನ್ನೈ: 7,650 ರೂ
  • ಮುಂಬೈ: 7,305 ರೂ
  • ದೆಹಲಿ: 7,305 ರೂ
  • ಕೋಲ್ಕತಾ: 7,305 ರೂ
  • ಕೇರಳ: 7,650 ರೂ
  • ಅಹ್ಮದಾಬಾದ್: 7,305 ರೂ
  • ಜೈಪುರ್: 7,350 ರೂ
  • ಲಕ್ನೋ: 7,350 ರೂ
  • ಭುವನೇಶ್ವರ್: 7,650 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?