Meta Layoffs: ಫೇಸ್​ಬುಕ್​ನ ಟೀಮ್ ಇಂಡಿಯಾದಲ್ಲಿ ಹಲವರ ಲೇ ಆಫ್; ನಿರ್ದೇಶಕ ಹಂತದ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಸ್ ಕೂಡ ಮನೆಗೆ

Top Facebook India Executives Lost Job: ಫೇಸ್​ಬುಕ್ ಮಾಲೀಕ ಮೆಟಾ 3 ಬ್ಯಾಚ್​ಗಳಲ್ಲಿ 10,000 ಮಂದಿಯನ್ನು ಕೆಲಸದಿಂದ ತೆಗೆದಿದೆ. ಈ ಮೂರನೇ ಬ್ಯಾಚ್​ನಲ್ಲಿ ಮೆಟಾದ ಭಾರತ ವಿಭಾಗದ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅದರ ವಿವರ ಇಲ್ಲಿದೆ...

Meta Layoffs: ಫೇಸ್​ಬುಕ್​ನ ಟೀಮ್ ಇಂಡಿಯಾದಲ್ಲಿ ಹಲವರ ಲೇ ಆಫ್; ನಿರ್ದೇಶಕ ಹಂತದ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಸ್ ಕೂಡ ಮನೆಗೆ
ಮೆಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 25, 2023 | 2:03 PM

ನವದೆಹಲಿ: 10,000 ಮಂದಿ ಲೇ ಆಫ್ ಮಾಡುವುದಾಗಿ ಘೋಷಿಸಿದ್ದ ಮೆಟಾ ಪ್ಲಾಟ್​ಫಾರ್ಮ್ಸ್ (Meta Platforms Inc) ಈ ಸಂಬಂಧ ಅಂತಿಮ ಹಂತದ ಉದ್ಯೋಗಕಡಿತ ನಡೆಸಿದೆ. ಅದರ ಭಾರತ ವಿಭಾಗದ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿರುವುದು ತಿಳಿದುಬಂದಿದೆ. ಮೂರು ಹಂತಗಳಲ್ಲಿ 10,000 ಮಂದಿಯನ್ನು ಕೆಲಸದಿಂದ ಬಿಡಿಸಲು ಕಂಪನಿ ಯೋಜಿಸಿತ್ತು. ಅದರಂತೆ ಈ ಹಿಂದೆ ಎರಡು ಬ್ಯಾಚ್​ಗಳಲ್ಲಿ ಜನರನ್ನು ಮನೆಗೆ ಕಳುಹಿಸಲಾಗಿತ್ತು. ಈಗ ನಡೆದಿರುವುದು ಮೂರನೇ ಹಾಗೂ ಕೊನೆಯ ಬ್ಯಾಚ್​ನ ಸ್ಯಾಕಿಂಗ್. 10,000 ಮಂದಿಯ ಲೇ ಆಫ್ ಪ್ಲಾನ್​ಗೂ ಮುನ್ನ ಮೆಟಾ ಕಳೆದ ವರ್ಷ 11,000 ಮಂದಿಯನ್ನು ಕೆಲಸದಿಂದ ಕಿತ್ತುಹಾಕಿತ್ತು. ಒಟ್ಟು ಒಂದು ವರ್ಷದ ಅಂತರದಲ್ಲಿ 21,000 ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಂತಾಗಿದೆ.

ಈಗ ಕೊನೆಯ ಬ್ಯಾಚ್​ನಲ್ಲಿ ಭಾರತದ ಎಷ್ಟು ಮಂದಿ ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯ ಇಲ್ಲ. ಆದರೆ, ಉನ್ನತ ಹಂತದ ಅಧಿಕಾರಿಗಳಿಂದ ಹಿಡಿದು, ಮಾರ್ಕೆಟಿಂಗ್, ಸೈಟ್ ಸೆಕ್ಯೂರಿಟಿ, ಎಂಟರ್ಪ್ರೈಸ್ ಎಂಜಿನಿಯರಿಂಗ್, ಪ್ರೋಗ್ರಾಂ ಮ್ಯಾನೇಜ್ಮೆಂಟ್, ಕಂಟೆಂಟ್ ಸ್ಟ್ರಾಟಿಜಿ ಇತ್ಯಾದಿ ಬಹುತೇಕ ಎಲ್ಲಾ ವಿಭಾಗಗಳವರೆಗೆ ಉದ್ಯೋಗಿಗಳನ್ನು ಲೇ ಆಫ್ ಮಾಡಿರುವುದು ತಿಳಿದುಬಂದಿದೆ. ಇವರಲ್ಲಿ ಹತ್ತಾರು ಉದ್ಯೋಗಿಗಳು ಲಿಂಕ್ಡ್​ಇನ್​ನಲ್ಲಿ ಈ ವಿಚಾರ ತಿಳಿಸಿದ್ದು, ಬೇರೆ ಕೆಲಸಕ್ಕೆ ಅರ್ಜಿ ಗುಜರಾಯಿಸುತ್ತಿದ್ದಾರೆ.

ಇದನ್ನೂ ಓದಿJioMart layoffs: ಲೇ ಆಫ್ ಭರಾಟೆಗೆ ಜಿಯೋ; ಮಾರ್ಟ್​ನಿಂದ 1,000 ಉದ್ಯೋಗಿಗಳು ಔಟ್; ಇನ್ನಷ್ಟು ಬಲಿ ನಿರೀಕ್ಷೆ; ಬಲಿಪೀಠದಲ್ಲಿ ಮತ್ತಷ್ಟು; ಸಂಬಳಕಡಿತಕ್ಕೊಳಗಾದವರು ಇನ್ನೂ ಹಲವರು

ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಮೆಟಾದ ಭಾರತ ವಿಭಾಗದ ಉನ್ನತ ಹಂತದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ತೆಗೆಯಲಾಗಿದೆ. ಮೆಟಾದ ಇಂಡಿಯಾ ಮಾರ್ಕೆಟಿಂಗ್ ಡೈರೆಕ್ಟರ್ ಅವಿನಾಶ್ ಪಂತ್, ಹಾಗೂ ಮೀಡಿಯಾ ಪಾರ್ಟ್ನರ್​ಶಿಪ್ ವಿಭಾಗದ ಮುಖ್ಯಸ್ಥ ಸಾಕೇಜ್ ಝಾ ಸೌರಭ್ ಅವರಿಬ್ಬರು ವಜಾಗೊಂಡ ಪ್ರಮುಖರು.

ಇನ್ನಷ್ಟು ಲೇ ಆಫ್ ಆಗುತ್ತವಾ ಮೇ ನಂತರ?

ಮೆಟಾ ಪ್ಲಾಟ್​ಫಾರ್ಮ್ಸ್ ಅಡಿಯಲ್ಲಿ ಫೇಸ್​ಬುಕ್, ಇನ್ಸ್​ಟಾಗ್ರಾಂ, ವಾಟ್ಸಾಪ್​ಗಳು ಕಾರ್ಯನಿರ್ವಹಿಸುತ್ತವೆ. ಮಾರ್ಕ್ ಜುಕರ್ಬರ್ಗ್ ಅವರು ಮೆಟಾದ ಸಿಇಒ ಆಗಿದ್ದಾರೆ. 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ 10,000 ಮಂದಿಯನ್ನು 3 ಬ್ಯಾಚ್​ಗಳಲ್ಲಿ ಮನೆಗೆ ಕಳುಹಿಸಲಾಗುವುದು ಎಂದು ಮಾರ್ಕ್ ಜುಕರ್ಬರ್ಗ್ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದ್ದರು. 3 ಬ್ಯಾಂಚ್ ಲೇ ಆಫ್ ಮೇ ತಿಂಗಳೊಳಗೆ ಆಗುತ್ತದೆ. ಅದಾದ ಬಳಿಕ ಸಣ್ಣ ಸಣ್ಣದಾಗಿ ಲೇ ಆಫ್​ಗಳು ಮುಂದುವರಿಯುತ್ತವೆ ಎಂದೂ ಅವರು ಹೇಳಿದ್ದರು. ಅಂದರೆ, ಮುಂಬರುವ ದಿನಗಳಲ್ಲೂ ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿMeta Layoffs: ಅವರ ಬಗ್ಗೆ ಅಭಿಮಾನ ಹೆಚ್ಚಾಯ್ತು; ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಬಗ್ಗೆ ಮೆಟಾ ಅಧಿಕಾರಿ ಹೇಳಿದ್ದಿದು

ಮೆಟಾದಲ್ಲಿ ಎಂಜಿನಿಯರುಗಳು ಬಚಾವ್?

ಈಗ ಎರಡು ಸುತ್ತುಗಳಲ್ಲಿ ಕೆಲಸ ಕಳೆದುಕೊಂಡಿರುವ 21,000 ಉದ್ಯೋಗಿಗಳಲ್ಲಿ ಹೆಚ್ಚಿನವರದ್ದು ನಾನ್ಎಂಜಿನಿಯರಿಂಗ್ ಕೆಲಸಗಳಾಗಿದ್ದವು. ಮಾರ್ಕೆಟಿಂಗ್, ಸೇಲ್ಸ್, ಕಂಟೆಂಟ್ ಡಿಸೈನ್, ರಿಸರ್ಚ್, ಯೂಸರ್ ಎಕ್ಸ್​ಪೀರಿಯನ್ಸ್ ಇತ್ಯಾದಿ ಕೆಲಸಗಳು ಹೆಚ್ಚಾಗಿ ಬಾಧಿತವಾಗಿವೆ. ಕೋಡಿಂಗ್ ಇತ್ಯಾದಿ ಮಾಡುವ ಸಾಫ್ಟ್​ವೇರ್ ಎಂಜಿನಿಯರುಗಳಿಗೆ ಲೇ ಆಫ್ ಬಿಸಿ ತಾಕಿರುವುದು ಕಡಿಮೆ. ಅಂದರೆ, ಮೆಟಾ ನಿರ್ದಿಷ್ಟ ತಂತ್ರಗಳನ್ನು ಇಟ್ಟುಕೊಂಡು ಲೇ ಆಫ್ ಹೆಜ್ಜೆ ಇರಿಸಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ