AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioMart layoffs: ಲೇ ಆಫ್ ಭರಾಟೆಗೆ ಜಿಯೋ; ಮಾರ್ಟ್​ನಿಂದ 1,000 ಉದ್ಯೋಗಿಗಳು ಔಟ್; ಇನ್ನಷ್ಟು ಬಲಿ ನಿರೀಕ್ಷೆ; ಬಲಿಪೀಠದಲ್ಲಿ ಮತ್ತಷ್ಟು; ಸಂಬಳಕಡಿತಕ್ಕೊಳಗಾದವರು ಇನ್ನೂ ಹಲವರು

Reliance Industries Expenditure Cut: ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಖರೀದಿಸಿದ ಬಳಿಕ ವೆಚ್ಚ ತಗ್ಗಿಸುವ ದೃಷ್ಟಿಯಿಂದ ಆರ್​ಐಎಲ್​ನ ಜಿಯೋಮಾರ್ಟ್ ಸಂಸ್ಥೆ 1,000 ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಹೇಳಿರುವುದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲೇ ಆಫ್ ಆಗುವ ಸಾಧ್ಯತೆ ಇದೆ.

JioMart layoffs: ಲೇ ಆಫ್ ಭರಾಟೆಗೆ ಜಿಯೋ; ಮಾರ್ಟ್​ನಿಂದ 1,000 ಉದ್ಯೋಗಿಗಳು ಔಟ್; ಇನ್ನಷ್ಟು ಬಲಿ ನಿರೀಕ್ಷೆ; ಬಲಿಪೀಠದಲ್ಲಿ ಮತ್ತಷ್ಟು; ಸಂಬಳಕಡಿತಕ್ಕೊಳಗಾದವರು ಇನ್ನೂ ಹಲವರು
ಜಿಯೋಮಾರ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2023 | 1:13 PM

Share

ಮುಂಬೈ: ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋಮಾರ್ಟ್ ಸಂಸ್ಥೆ 1,000 ಉದ್ಯೋಗಿಗಳನ್ನು ಲೇ ಆಫ್ (JioMart Layoffs) ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದು ಸಣ್ಣ ಪೂರ್ವಭಾವಿ ಕ್ರಮ ಅಷ್ಟೇ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್​ನ ಹೋಲ್​ಸೇಲ್ ವಿಭಾಗದಲ್ಲಿ ಕೆಲಸ ಮಾಡುವ ಕಾಲುಭಾಗದಷ್ಟು ಮಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಬೆಲೆ ಇಳಿಕೆ ಸಮರ ಆರಂಭಿಸಿ ಈಗ ಅದನ್ನು ಉಳಿಸಿಕೊಳ್ಳುವ ಧಾವಂತದಲ್ಲಿರುವ ರಿಲಾಯನ್ಸ್​ಗೆ ಈಗ ತನ್ನ ವೆಚ್ಚಗಳನ್ನು ಕಡಿಮೆ ಮಾಡುವುದು ಅನಿವಾರ್ಯ. ಅದಕ್ಕೆ ಲೇ ಆಫ್ ಒಂದು ಪ್ರಮುಖ ದಾರಿ.

ಇದೀಗ ಜಿಯೋಮಾರ್ಟ್​ನಿಂದ 1,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದು ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ ಎಫೆಕ್ಟ್ ಎನ್ನಲಾಗಿದೆ. 3,500 ಉದ್ಯೋಗಿಗಳಿರುವ ಮೆಟ್ರೋ ಕಂಪನಿಯನ್ನು ರಿಲಾಯನ್ಸ್ ಇತ್ತೀಚೆಗೆ ಖರೀದಿಸಿತ್ತು. ಈಗ ತನ್ನ ಕಾರ್ಯಾಚರಣೆಗಳ ಮರುಜೋಡಣೆ ಮಾಡುವ ನಿಟ್ಟಿನಲ್ಲಿ ವಿವಿಧ ಉದ್ಯೋಗಕಡಿತಕ್ಕೆ ಕೈಹಾಕಿದೆ.

ಇದನ್ನೂ ಓದಿMeta Layoffs: ಅವರ ಬಗ್ಗೆ ಅಭಿಮಾನ ಹೆಚ್ಚಾಯ್ತು; ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಬಗ್ಗೆ ಮೆಟಾ ಅಧಿಕಾರಿ ಹೇಳಿದ್ದಿದು

ಜಿಯೋಮಾರ್ಟ್ ಈಗಾಗಲೇ 1,000 ಉದ್ಯೋಗಿಗಳನ್ನು ರಾಜೀನಾಮೆ ನೀಡುವಂತೆ ಆದೇಶಿಸಿದೆ. ಇದರಲ್ಲಿ ಮುಂಬೈನಲ್ಲಿರುವ ಅದರ ಕಾರ್ಪೊರೇಟ್ ಆಫೀಸ್​ನಲ್ಲಿ ಕೆಲಸ ಮಾಡುವ 500 ಮಂದಿಯೂ ಇದ್ದಾರೆ. ಇದಷ್ಟೇ ಅಲ್ಲ, ನೂರಾರು ಉದ್ಯೋಗಿಗಳನ್ನು ಪಿಐಪಿ (ಪರ್ಫಾರ್ಮೆನ್ಸ್ ಇಂಪ್ರೂವ್ಮೆಂಟ್ ಪ್ಲಾನ್) ಅಡಿಗೆ ಒಳಪಡಿಸಲಾಗಿದೆ. ಅಂದರೆ, ಈ ಉದ್ಯೋಗಿಗಳದ್ದು ಮಾಡು ಇಲ್ಲ ಮಡಿ ಪರಿಸ್ಥಿತಿ ಆಗಿರುತ್ತದೆ. ಇನ್ನುಳಿದ ಉದ್ಯೋಗಿಗಳ ಸಂಬಳಕಡಿತ ಮಾಡಲು ಜಿಯೋಮಾರ್ಟ್ ಮುಂದಾಗಿರುವ ವಿಚಾರ ಎಕನಾಮಿಕ್ ಟೈಮ್ಸ್ ವರದಿಯಿಂದ ತಿಳಿದುಬಂದಿದೆ.

ಇದನ್ನೂ ಓದಿAmazon Layoff: ಅಮೇಜಾನ್ 9,000 ಲೇ ಆಫ್; ಭಾರತದಲ್ಲಿ ಕೆಲಸ ಕಳೆದುಕೊಂಡ 500 ಮಂದಿ

ಅರ್ಧದಷ್ಟು ಮುಚ್ಚಲಿವೆ ಜಿಯೋಮಾರ್ಟ್ ಸ್ಟೋರ್ಸ್

ಇದೇ ವೇಳೆ, ಜಿಯೋಮಾರ್ಟ್​ನ 150ಕ್ಕೂ ಹೆಚ್ಚು ಫುಲ್​ಫಿಲ್ಮೆಂಟ್ ಸೆಂಟರ್​ಗಳ ಪೈಕಿ ಅರ್ಧದಷ್ಟು ಸ್ಟೋರ್​ಗಳನ್ನು ಬಂದ್ ಮಾಡುವ ಆಲೋಚನೆಯಲ್ಲಿ ಕಂಪನಿ ಇದೆ. ಈ ಫುಲ್​ಫಿಲ್ಮೆಂಟ್ ಸೆಂಟರ್​ಗಳು ರಿಲಾಯನ್ಸ್​ನ ಸ್ಟೋರ್​ಗಳಿಗೆ ವಿವಿಧ ವಸ್ತುಗಳ ಪೂರೈಕೆ ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್