AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wistron: ಐಫೋನ್ ಸಹವಾಸ ಬಿಟ್ಟ ವಿಸ್ಟ್ರಾನ್; ಕೋಲಾರದಲ್ಲಿ ಘಟಕ ಹೊಂದಿದ್ದ ತೈವಾನೀ ಕಂಪನಿ ದೇಶ ಬಿಟ್ಟು ಹೋಗಿದ್ಯಾಕೆ?

Taiwanese Company Exit From iPhone Business In India: ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಕಾರ್ಮಿಕರ ಗಲಾಟೆ ನಡೆದದ್ದಕ್ಕೂ ವಿಸ್ಟ್ರಾನ್ ದೇಶಬಿಟ್ಟು ಹೋಗುತ್ತಿರುವುದಕ್ಕೂ ಸಂಬಂಧ ಇದೆಯಾ? ನೇರ ಸಂಬಂಧ ಇಲ್ಲದಿದ್ದರೂ ಪರೋಕ್ಷವಾಗಿ ಈ ಘಟನೆಯು ವಿಸ್ಟ್ರಾನ್ ಹೊರಬೀಳಲು ಇರುವ ಕಾರಣಗಳಲ್ಲಿ ಒಂದಾಗಿದೆ.

Wistron: ಐಫೋನ್ ಸಹವಾಸ ಬಿಟ್ಟ ವಿಸ್ಟ್ರಾನ್; ಕೋಲಾರದಲ್ಲಿ ಘಟಕ ಹೊಂದಿದ್ದ ತೈವಾನೀ ಕಂಪನಿ ದೇಶ ಬಿಟ್ಟು ಹೋಗಿದ್ಯಾಕೆ?
ವಿಸ್ಟ್ರಾನ್
TV9 Web
| Edited By: |

Updated on: May 23, 2023 | 4:35 PM

Share

ಬೆಂಗಳೂರು: ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಘಟಕ (Wistron) ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿತ್ತು. ಅಲ್ಲಿನ ಕಾರ್ಮಿಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಸುದ್ದಿ ರಾಚಿ ಬಂದಿತ್ತು. 2020ರಲ್ಲೂ ಇಲ್ಲಿ ಕಾರ್ಮಿಕ ಗಲಾಟೆಯಿಂದ ಕೋಟ್ಯಂತರ ರೂ ಹಾನಿಯಾಗಿತ್ತು. ಇದೀಗ ವಿಸ್ಟ್ರಾನ್ ಘಟಕವನ್ನು ಟಾಟಾ ಸಂಸ್ಥೆ ಖರೀದಿಸಿ, ಆಡಳಿತ ವ್ಯವಹಾರವನ್ನು ಸುಪರ್ದಿಗೆ ತೆಗೆದುಕೊಂಡಿದೆ. ಇದೇ ಹೊತ್ತಲ್ಲಿ, ಆ್ಯಪಲ್ ಕಂಪನಿಯ ಮೂರು ಸರಬರಾಜುದಾರರಲ್ಲಿ ಒಂದೆನಿಸಿದ ವಿಸ್ಟ್ರಾನ್ ಇದೀಗ ಭಾರತದಲ್ಲಿನ ತನ್ನ ಎಲ್ಲಾ ಚಟುವಟಿಕೆಯನ್ನು ಬಂದ್ ಮಾಡಿದೆ. ಐಫೋನ್ ತಯಾರಿಕೆಯನ್ನು (iPhone Manufacturing) ನಿಲ್ಲಿಸಿದೆ. ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಕಾರ್ಮಿಕರ ಗಲಾಟೆ ನಡೆದದ್ದಕ್ಕೂ ವಿಸ್ಟ್ರಾನ್ ದೇಶಬಿಟ್ಟು ಹೋಗುತ್ತಿರುವುದಕ್ಕೂ ಸಂಬಂಧ ಇದೆಯಾ? ನೇರ ಸಂಬಂಧ ಇಲ್ಲದಿದ್ದರೂ ಪರೋಕ್ಷವಾಗಿ ಈ ಘಟನೆಯು ವಿಸ್ಟ್ರಾನ್ ಹೊರಬೀಳಲು ಇರುವ ಕಾರಣಗಳಲ್ಲಿ ಒಂದಾಗಿದೆ.

ವಿಸ್ಟ್ರಾನ್ ಐಫೋನ್ ವ್ಯವಹಾರದಿಂದ ಕಾಲ್ತೆಗೆಯಲು ಏನೇನು ಕಾರಣ?

ಮೇಲೆ ಹೇಳಿದ ಹಾಗೆ ಕಾರ್ಮಿಕರ ಗಲಾಟೆಯು ಪರೋಕ್ಷವಾಗಿ ವಿಸ್ಟ್ರಾನ್ ಎಕ್ಸಿಟ್​ಗೆ ಒಂದು ಕಾರಣವಾಗಿದೆ. ಚೀನಾ ಮತ್ತು ಭಾರತದಲ್ಲಿನ ಕೆಲಸದ ವಾತಾವರಣ ಭಿನ್ನವಾಗಿದೆ. ಚೀನಾದಲ್ಲಿ ಐಫೋನ್ ಘಟಕಗಳನ್ನು ಹೊಂದಿರುವ ವಿಸ್ಟ್ರಾನ್ ಅದೇ ರೀತಿಯ ಕೆಲಸದ ನಿಯಮಗಳನ್ನು ಕೋಲಾರದ ಘಟಕದಲ್ಲಿ ತರಲು ಯತ್ನಿಸಿತೆನ್ನಲಾಗಿದೆ. ಇದು ಇಲ್ಲಿ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಯಿತು. ಹೆಚ್ಚು ವೇತನ ಕೊಡದೆ ಹೆಚ್ಚು ಅವಧಿ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ವಿಸ್ಟ್ರಾನ್ ಆಡಳಿತದ ಮೇಲಿತ್ತು.

ಇದನ್ನೂ ಓದಿJioMart layoffs: ಲೇ ಆಫ್ ಭರಾಟೆಗೆ ಜಿಯೋ; ಮಾರ್ಟ್​ನಿಂದ 1,000 ಉದ್ಯೋಗಿಗಳು ಔಟ್; ಇನ್ನಷ್ಟು ಬಲಿ ನಿರೀಕ್ಷೆ; ಬಲಿಪೀಠದಲ್ಲಿ ಮತ್ತಷ್ಟು; ಸಂಬಳಕಡಿತಕ್ಕೊಳಗಾದವರು ಇನ್ನೂ ಹಲವರು

ಇದರ ಜೊತೆಗೆ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಹಿಡಿದಿಟ್ಟುಕೊಳ್ಳಲು ವಿಸ್ಟ್ರಾನ್ ಮ್ಯಾನೇಜ್ಮೆಂಟ್ ವಿಫಲವಾಗಿತ್ತು. ಬಹಳ ಮಂದಿ ಉದ್ಯೋಗಿಗಳು ಕೆಲಸ ಬಿಟ್ಟುಹೋಗುತ್ತಿದ್ದರು. ಇದರಿಂದ ಐಫೋನ್ ತಯಾರಿಕೆ ಕಾರ್ಯ ವಿಳಂಬವಾಗುತ್ತಿತ್ತು ಎನ್ನಲಾಗುತ್ತಿದೆ.

ಐಫೋನ್​ಗಳ ಇತರೆ ತಯಾರಕರಾದ ಫಾಕ್ಸ್​ಕಾನ್, ಪೆಗಾಟ್ರಾನ್​ಗೆ ಹೋಲಿಸಿದರೆ ವಿಸ್ಟ್ರಾನ್ ಸಣ್ಣ ಕಂಪನಿ. ಇದು ವಿಸ್ಟ್ರಾನ್​ಗೆ ಹಿನ್ನಡೆ ತಂದಿತ್ತು. ಮೇಲಾಗಿ ಭಾರತದಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆಯಿಂದ ವಿಸ್ಟ್ರಾನ್​ಗೆ ಯಾವ ಲಾಭವೂ ಆಗುತ್ತಿರಲಿಲ್ಲ. ಉತ್ಪನ್ನಗಳಿಗೆ ಹೆಚ್ಚಿನ ಮಾರ್ಜಿನ್ ಕೊಡುವಂತೆ ಅದು ಮಾಡಿಕೊಂಡ ಮನವಿಗೆ ಯಾವ ಪುರಸ್ಕಾರವೂ ಸಿಕ್ಕಲಿಲ್ಲ.

ಬೇಡಿಕೆ ಗ್ರಹಿಸುವ ಸಮರ್ಪಕ ವ್ಯವಸ್ಥೆ ವಿಸ್ಟ್ರಾನ್ ಬಳಿ ಇರಲಿಲ್ಲ. ಉತ್ಪನ್ನಗಳನ್ನು ವಿವಿಧ ಘಟಕಗಳಿಗೆ ಕಳುಹಿಸುವ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ.

ಇದನ್ನೂ ಓದಿMutual Fund: ನಷ್ಟ ತಂದರೆ ಪೇಮೆಂಟ್ ಇಲ್ಲ; ಸಾಮಾನ್ಯರಿಗೆ ಸಿಹಿ, ಮ್ಯೂಚುವಲ್ ಫಂಡ್​ಗಳಿಗೆ ಕಹಿ ಸುದ್ದಿ; ಚರ್ಚೆಗೀಡು ಮಾಡಿದೆ ಸೆಬಿ ಪ್ರಸ್ತಾವ

2008ರಲ್ಲೇ ಭಾರತಕ್ಕೆ ಬಂದಿದ್ದ ವಿಸ್ಟ್ರಾನ್

ತೈವಾನ್ ಮೂಲದ ವಿಸ್ಟ್ರಾನ್ ಸಂಸ್ಥೆ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು 2008ರಲ್ಲೇ. ಅದು ತಯಾರಿಸುವ ಕಂಪ್ಯೂಟರ್, ಲ್ಯಾಪ್​ಟಾಪ್, ಸರ್ವರ್ ಇತ್ಯಾದಿ ಸಾಧನಗಳ ದುರಸ್ತಿ ಘಟಕವನ್ನು ಮೊದಲು ತೆರೆಯಿತು. 2017ರಲ್ಲಿ ಅದು ಆ್ಯಪಲ್​ನ ಐಫೋನ್​ಗಳ ಉತ್ಪಾದನೆ ಕಾರ್ಯಗಳಿಗೆ ಕೈಹಾಕಿತು. ಆದರೆ, ಕೋಲಾರದಲ್ಲಿ ಅದರ ಇರುವಿಕೆಯ ಅಷ್ಟೂ ದಿನ ಸುಗಮವಾಗಂತೂ ಇರಲಿಲ್ಲ.

ಈಗ ಟಾಟಾ ಕಂಪನಿ ವಿಸ್ಟ್ರಾನ್​ನ ಭಾರತೀಯ ವ್ಯವಹಾರಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದೆ. ಕೋಲಾರದ ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಂಪನಿ ಐಫೋನ್15, ಐಫೋನ್15 ಪ್ಲಸ್ ಮಾಡೆಲ್​ಗಳ ಅಸೆಂಬ್ಲಿ ಮಾಡಿ ಅದನ್ನು ಆ್ಯಪಲ್​ಗೆ ಪೂರೈಸಲಿದೆ. ಆದರೆ ಹಿಂದಿನ ವಿಸ್ಟ್ರಾನ್ ಕಂಪನಿಯ ಆಡಳಿತದ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು ಟಾಟಾ ವಿಚಾರದಲ್ಲೂ ಮಾರ್ದನಿಸಿದೆ. ಟಾಟಾ ಈಗಲೇ ಈ ಕಾರ್ಮಿಕರ ಸಮಸ್ಯೆಗೆ ಪರಿಹಾರ ಹುಡುಕದಿದ್ದರೆ ವಿಸ್ಟ್ರಾನ್​ಗೆ ಆದ ಗತಿ ಟಾಟಾಗೂ ಬಂದೀತು..!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್