Wistron Workers: ಕರ್ನಾಟಕದಲ್ಲಿ ಟಾಟಾಗೆ ವಿಸ್ಟ್ರಾನ್ ಭೂತ; ಐಫೋನ್ ಫ್ಯಾಕ್ಟರಿಯಲ್ಲಿ ಮತ್ತೆ ಕಾರ್ಮಿಕರ ಪ್ರತಿಭಟನೆ ಶುರು

Workers Protest At Tata Wistron Plant In Kolar: ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ವಿಸ್ಟ್ರಾನ್ ಐಫೋನ್ ಘಟಕದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದು ವರದಿಯಾಗಿದೆ. 2022ರಲ್ಲಿ ಇಲ್ಲಿ ಕಾರ್ಮಿಕರ ಪ್ರತಿಭಟನೆ ವಿಕೋಪಕ್ಕೆ ಹೋಗಿತ್ತು.

Wistron Workers: ಕರ್ನಾಟಕದಲ್ಲಿ ಟಾಟಾಗೆ ವಿಸ್ಟ್ರಾನ್ ಭೂತ; ಐಫೋನ್ ಫ್ಯಾಕ್ಟರಿಯಲ್ಲಿ ಮತ್ತೆ ಕಾರ್ಮಿಕರ ಪ್ರತಿಭಟನೆ ಶುರು
ಕೋಲಾರ ವಿಸ್ಟ್ರಾನ್, ಫೈಲ್ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2023 | 5:12 PM

ಕೋಲಾರ: ಇಲ್ಲಿಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕದಲ್ಲಿ (Tata Wistron Unit) ಕಾರ್ಮಿಕರ ಪ್ರತಿಭಟನೆ ಮತ್ತೊಮ್ಮೆ ಭುಗಿಲೆದ್ದಿದೆ. ವಿಸ್ಟ್ರಾನ್ ಘಟಕವನ್ನು ಖರೀದಿಸಿದ ಬಳಿಕ ಟಾಟಾ ಕಂಪನಿಗೆ ಬಹಳ ಬೇಗ ಕಾರ್ಮಿಕರ ಪ್ರತಿಭಟನೆಯ (Workers Protest) ಬಿಸಿ ತಾಕಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾವಿರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಸದ್ಯ ಟಾಟಾ ವಿಸ್ಟ್ರಾನ್ ಘಟಕದ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

2020 ಡಿಸೆಂಬರ್ ತಿಂಗಳ ಕಾರ್ಮಿಕರ ಪ್ರತಿಭಟನೆಯ ಕರಾಳ ದಿನ

ಕೋಲಾರದಲ್ಲಿ ಐಫೋನ್ ಅಸೆಂಬಲ್ ಮಾಡಲಾಗುತ್ತಿದ್ದ ಬೃಹತ್ ವಿಸ್ಟ್ರಾನ್ ಘಟಕದಲ್ಲಿ ಮೊದಲಿಂದಲೂ ಕಾರ್ಮಿಕರ ಪ್ರತಿಭಟನೆಯ ಕಾವು ಇತ್ತು. ಇದೇ ವೇತನ ವಿಚಾರವಾಗಿ ಕಾರ್ಮಿಕರಿಗೆ ಕಂಪನಿಯ ಆಡಳಿತವರ್ಗದ ವಿರುದ್ಧ ಆಕ್ರೋಶ ಇತ್ತು. ಕಡಿಮೆ ವೇತನ, ಹೆಚ್ಚು ಅವಧಿ ಕೆಲಸ ಇತ್ಯಾದಿ ಮೂಲಕ ತಮ್ಮನ್ನು ಶೋಷಿಸಲಾಗುತ್ತಿದೆ ಎಂಬುದು ಕಾರ್ಮಿಕರ ಅಸಮಾಧಾನವಾಗಿತ್ತು. 2020 ಡಿಸೆಂಬರ್ ತಿಂಗಳಲ್ಲಿ ಕಾರ್ಮಿಕರ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಡಿಸೆಂಬರ್ 12ರಂದು ಕಾರ್ಮಿಕರ ದೊಡ್ಡ ಗುಂಪೊಂದು ಫ್ಯಾಕ್ಟರಿಯಲ್ಲಿ ಲೂಟಿಗೆ ನಿಂತರು.

ಘಟಕದ ಅಸೆಂಬ್ಲಿ ಲೈನ್​ಗೂ ಹಾನಿ ಮಾಡಲಾಯಿತು. ಸಾವಿರಾರು ಐಫೋನ್​ಗಳನ್ನು ದೋಚಲಾಯಿತು. ಇದರಿಂದ 437 ಕೋಟಿ ನಷ್ಟವಾಗಿರಬಹುದು ಎಂದು ವಿಸ್ಟ್ರಾನ್ ಕಂಪನಿ ಹೇಳಿತು.

ಇದನ್ನೂ ಓದಿTata Group: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನೆ ಆರಂಭಿಸಿದ ಟಾಟಾ ಗ್ರೂಪ್

ನಾಲ್ಕೈದು ತಿಂಗಳಿಂದ ಕಂಪನಿ ಸಂಬಳ ಕೊಟ್ಟಿಲ್ಲ ಎಂದು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ಅಂದು ಘಟಕದಲ್ಲಿ ಏಳೆಂಟು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಪೈಕಿ ಕೆಲವೇ ನೂರು ಮಂದಿ ಅತಿರೇಕವಾಗಿ ಪ್ರತಿಭಟನೆ ನಡೆಸಿದರೆನ್ನಲಾಗಿತ್ತು. ಆ ಬಳಿಕ ವಿಸ್ಟ್ರಾನ್ ಘಟಕವನ್ನು ಮುಚ್ಚಲಾಯಿತು.

ಕಾರ್ಮಿಕರ ಆ ಹಿಂಸಾಚಾರ ಘಟನೆ ಆ್ಯಪಲ್​ವರೆಗೂ ಹೋಗಿತ್ತು. ಕಾರ್ಮಿಕರ ವಿಚಾರದಲ್ಲಿ ಆ್ಯಪಲ್ ಕಂಪನಿ ಬಿಗಿನಿಯಮ ಹೊಂದಿದೆ. ತನಗೆ ಉತ್ಪನ್ನಗಳನ್ನು ತಯಾರಿಸಿ ಸರಬರಾಜು ಮಾಡುವ ಕಂಪನಿಗಳೂ ಇದೇ ನೀತಿ ಅನುಸರಿಸಬೇಕೆಂದು ಆ್ಯಪಲ್ ತಾಕೀತು ಮಾಡುತ್ತದೆ. ಅದರಂತೆ ಕಾರ್ಮಿಕರಿಗೆ ಕಡಿಮೆ ವೇತನ ನೀಡುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗುತ್ತದೆ. ವಿಸ್ಟ್ರಾನ್​ನ ಮ್ಯಾನೇಜ್ಮೆಂಟ್​ನ ತಪ್ಪಾಗಿರುವುದು ಬೆಳಕಿಗೆ ಬಂದ ಬಳಿಕ ಹಲವು ಮಂದಿ ಉನ್ನತ ಅಧಿಕಾರಿಗಳ ತಲೆದಂಡಗಳಾದವು.

ಇದನ್ನೂ ಓದಿFoxconn: ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಫಿಕ್ಸ್; ತೆಲಂಗಾಣ ಸ್ಪೀಡ್​ಗೆ ಬೆರಗಾದ ಛೇರ್ಮನ್ ಲಿಯು; ಮೊದಲ ಹಂತದಲ್ಲಿ 4,100 ಕೋಟಿ ರೂ ಹೋಡಿಕೆ; 25,000 ಉದ್ಯೋಗಸೃಷ್ಟಿ

ಕೆಲ ತಿಂಗಳವರೆಗೂ ಮುಚ್ಚಿದ್ದ ವಿಸ್ಟ್ರಾನ್ ಘಟಕ ಮತ್ತೆ ಆರಂಭವಾಯಿತು. ಅದಾದ ಬಳಿಕ ಟಾಟಾ ಗ್ರೂಪ್​ನ ಸಂಸ್ಥೆಯು ವಿಸ್ಟ್ರಾನ್ ಘಟಕ ಮತ್ತದರ ಉತ್ಪಾದನಾ ವ್ಯವಹಾರಗಳನ್ನು ಖರೀದಿ ಮಾಡಿದೆ. ಹೊಸೂರಿನಲ್ಲಿ ಒಂದು ಐಫೋನ್ ಅಸೆಂಬ್ಲಿ ಹೊಂದಿರುವ ಟಾಟಾಗೆ ಈಗ ವಿಸ್ಟ್ರಾನ್ ಒಂದು ದೊಡ್ಡ ಘಟಕವಾಗಿದೆ. ಇತ್ತೀಚೆಗಷ್ಟೇ ಟಾಟಾ ವಿಸ್ಟ್ರಾನ್​ನ ಆಡಳಿತ ವಹಿಸಿಕೊಂಡಿತ್ತು. ಈಗ ಆರಂಭದಲ್ಲೇ ಟಾಟಾ ಕಂಪನಿಗೆ ಕಾರ್ಮಿಕ ಪ್ರತಿಭಟನೆಯ ಕಾವು ರಾಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್