Fertilizer Subsidy: ಮುಂಗಾರು ಬೆಳೆಗೆ ಒಂದು ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿ: ಕೇಂದ್ರ ಸಮಿತಿ ಅನುಮೋದನೆ; 12ಕೋಟಿ ರೈತರಿಗೆ ಪ್ರಯೋಜನ

Central Cabinet Approves Fertilizer Subsidy: ಮುಂಗಾರು ಸೀಸನ್​ಗೆ 1.08 ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ ಕೊಟ್ಟಿರುವ ಸಂಗತಿಯನ್ನು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಖ್ ಮಾಂಡವೀಯ ತಿಳಿಸಿದ್ದಾರೆ.

Fertilizer Subsidy: ಮುಂಗಾರು ಬೆಳೆಗೆ ಒಂದು ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿ: ಕೇಂದ್ರ ಸಮಿತಿ ಅನುಮೋದನೆ; 12ಕೋಟಿ ರೈತರಿಗೆ ಪ್ರಯೋಜನ
ರೈತ
Follow us
|

Updated on:May 17, 2023 | 6:26 PM

ನವದೆಹಲಿ: ಈ ವರ್ಷದ ಮುಂಗಾರು ಬೆಳೆಗೆ (Kharif Crop) ರೈತರಿಗೆ ಸಹಾಯವಾಗಿ ಕೇಂದ್ರ ಸರ್ಕಾರ 1.08 ಲಕ್ಷ ಕೋಟಿ ರೂ ಮೊತ್ತದಷ್ಟು ರಸಗೊಬ್ಬರ ಸಬ್ಸಿಡಿ ಹಣ ಬಿಡುಗಡೆ ಮಾಡಲಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (Economic Affairs Cabinet Committee) ಮೇ 17, ಮಂಗಳವಾರದಂದು ಅನುಮೋದನೆ ನೀಡಿರುವುದು ವರದಿಯಾಗಿದೆ. ಯೂರಿಯಾ ಮತ್ತು ಡಿಎಪಿ, ಎಂಒಪಿ ಮತ್ತಿತರ ರಸಗೊಬ್ಬರಗಳಿಗೆ (fertilizers) ಈ ಸಬ್ಸಿಡಿ ಸಿಗಲಿದೆ. ಮುಂಗಾರು ಸೀಸನ್​ಗೆ 1.08 ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ ಕೊಟ್ಟಿರುವ ಸಂಗತಿಯನ್ನು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಖ್ ಮಾಂಡವೀಯ ತಿಳಿಸಿದ್ದಾರೆ. ಕೇಂದ್ರದ ಈ ಸಬ್ಸಿಡಿಯು 12 ಕೋಟಿ ರೈತರಿಗೆ ಉಪಯೋಗವಾಗುವ ನಿರೀಕ್ಷೆ ಇದೆ.

ಯೂರಿಯಾ ರಸಗೊಬ್ಬರಕ್ಕೆ 70,000 ಕೋಟಿ ರೂ, ಡೈ ಅಮೋನಿಯಂ ಫಾಸ್​ಫೇಟ್ (ಡಿಎಪಿ) ಹಾಗೂ ಇತರ ರಸಗೊಬ್ಬರಗಳಿಗೆ 38,000 ಕೋಟಿ ರೂ ಸಬ್ಸಿಡಿ ಸಿಗಲಿದೆ. ಈ ಹೊಸ ದರ ಏಪ್ರಿಲ್​ನಿಂದಲೇ ಅನ್ವಯ ಆಗಲಿದ್ದು, 2023 ಸೆಪ್ಟಂಬರ್​ವರೆಗೂ ಇರಲಿದೆ. ರೈತರಿಗೆ ರಸಗೊಬ್ಬರ ಬೆಲೆಯಲ್ಲಿ ಹೆಚ್ಚಳ ಆಗದಿರಲೆಂದು ಸಬ್ಸಿಡಿ ನೀಡಲಾಗುತ್ತಿದೆ.

ಇದನ್ನೂ ಓದಿWistron Workers: ಕರ್ನಾಟಕದಲ್ಲಿ ಟಾಟಾಗೆ ವಿಸ್ಟ್ರಾನ್ ಭೂತ; ಐಫೋನ್ ಫ್ಯಾಕ್ಟರಿಯಲ್ಲಿ ಮತ್ತೆ ಕಾರ್ಮಿಕರ ಪ್ರತಿಭಟನೆ ಶುರು

ಕೇಂದ್ರದ ಈ ರಸಗೊಬ್ಬರ ಸಬ್ಸಿಡಿಯಿಂದಾಗಿ ಬಜೆಟ್​ನಲ್ಲಿ ನಿಗದಿ ಮಾಡಲಾಗಿದ್ದ ಮೊತ್ತ ದಾಟಿ ಹೋಗಲಾಗಿದೆ. ಕಳೆದ ಬಜೆಟ್​ನಲ್ಲಿ ರಸಗೊಬ್ಬರ ಸಬ್ಸಿಡಿಗೆ 1.75 ಲಕ್ಷ ಕೋಟಿ ರೂ ಔಟ್​ಲೇ ಹಾಕಲಾಗಿತ್ತು. 2023-24ರ ಹಣಕಾಸ ವರ್ಷದಲ್ಲಿ ಒಟ್ಟಾರೆ ಫರ್ಟಿಲೈಸರ್ ಸಬ್ಸಿಡಿ 2 ಲಕ್ಷ ಕೋಟಿ ರೂ ಮುಟ್ಟುವ ನಿರೀಕ್ಷೆ ಇದೆ. ಹಾಗೆಯೇ, ಅಂತಾರಾಷ್ಟ್ರೀಯ ದರಗಳು ಕಡಿಮೆಗೊಂಡಿರುವುದರಿಂದ ಎನ್​ಪಿಕೆ ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿಯನ್ನು ಕಡಿಮೆ ಮಾಡಲಾಗಿದೆ.

ಇದನ್ನೂ ಓದಿSubsidy Cut: ಅತ್ತ ರೈತ, ಇತ್ತ ಐಟಿ; ರಸಗೊಬ್ಬರ ಸಬ್ಸಿಡಿಗೆ ಖೋತಾ; ಐಟಿ ಹಾರ್ಡ್​ವೇರ್​ಗೆ ಜಿಗಿತ; ಕೇಂದ್ರ ಸಂಪುಟದಿಂದ ಸದ್ಯದಲ್ಲೇ ಅನುಮೋದನೆ?

ಸದ್ಯ ಒಂದು ಚೀಲ ಯೂರಿಯಾ ಗೊಬ್ಬರದ ಬೆಲೆ 276 ರೂ ಇದೆ. ಡೈ ಅಮೋನಿಯಮ್ ಫಾಸ್​ಫೇಟ್ ಅಥವಾ ಡಿಎಪಿ ರಸಗೊಬ್ಬರದ ಬೆಲೆ ಒಂದು ಚೀಲಕ್ಕೆ 1,350 ರೂ ಇದೆ. ರೈತರಿಗೆ ಈಗ ಬಹುತೇಕ ಇದೇ ಬೆಲೆಗೆ ರಸಗೊಬ್ಬರ ಸಿಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Wed, 17 May 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್