Tata Group: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನೆ ಆರಂಭಿಸಿದ ಟಾಟಾ ಗ್ರೂಪ್
ಬೆಂಗಳೂರು ಹೊರವಲಯದ ನರಸಾಪುರದಲ್ಲಿರುವ ಆ್ಯಪಲ್ ಐಫೋನ್ ತಯಾರಿಯಲ್ಲಿ ತೊಡಗಿರುವ ವಿಸ್ಟ್ರಾನ್ ಕಂಪನಿಯ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸುವ ಮೂಲಕ ಟಾಟಾ ಗ್ರೂಪ್ ದೇಶದಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭಿಸಿದೆ ಎಂದು ವರದಿಯಾಗಿದೆ.
ಬೆಂಗಳೂರು: ನಗರದ ಹೊರವಲಯದ ನರಸಾಪುರದಲ್ಲಿರುವ ಆ್ಯಪಲ್ ಐಫೋನ್ ತಯಾರಿಯಲ್ಲಿ ತೊಡಗಿರುವ ವಿಸ್ಟ್ರಾನ್ ಕಂಪನಿಯ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಬಹುತೇಕ ಪೂರ್ಣಗೊಳಿಸುವ ಮೂಲಕ ಟಾಟಾ ಗ್ರೂಪ್ ದೇಶದಲ್ಲಿ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭಿಸಿದೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಬಲ್ಲ ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಕಳೆದ ತಿಂಗಳು ಆ್ಯಪಲ್ ಸಿಇಒ ಟಿಮ್ ಕುಕ್ ಮುಂಬೈನಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮುಂಬೈ ಮತ್ತು ದೆಹಲಿಯಲ್ಲಿ ಕಂಪನಿಯ ಪ್ರಮುಖ ಮಳಿಗೆಗಳನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ ಕುಕ್ ಭಾರತಕ್ಕೆ ಭೇಟಿ ನೀಡಿದ್ದರು.
ಟಿಮ್ ಕುಕ್ ಮುಂಬೈ ಭೇಟಿ ವೇಳೆ, ಭಾರತದಲ್ಲಿ ಉತ್ಪಾದನೆಗೆ ಸಬಂಧಿಸಿದ ಟಾಟಾ ಗ್ರೂಪ್ ಯೋಜನೆಗಳ ಬಗ್ಗೆಯೂ ಚರ್ಚೆ ನಡೆದಿತ್ತು. ಇಷ್ಟೇ ಅಲ್ಲದೆ, ಸಾಲ್ಟ್-ಟು-ಕಾರ್ಸ್ ಸಮೂಹದೊಂದಿಗೆ ಸಹಭಾಗಿತ್ವ ಹೊಂದುವ ಬಗ್ಗೆಯೂ ಆ್ಯಪಲ್ ಮುಖ್ಯಸ್ಥರು ಮಾತುಕತೆ ನಡೆಸಿದ್ದರು.
ಇತರ ಉದ್ಯಮ ಅವಕಾಶಗಳನ್ನು ವಿಸ್ತರಿಸುವ ಗುರಿಯೊಂದಿಗೆ ಕಾರ್ಯಾಚರಣೆಗಳನ್ನು ಕಡಿತಗೊಳಿಸಲು ವಿಸ್ಟ್ರಾನ್ ಬಯಸಿದೆ ಎಂದು ಮೂಲಗಳು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಆದರೆ, ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಕಾರ್ಯಾಚರಣೆಯಿಂದ ವಿಸ್ಟ್ರಾನ್ ನಿರ್ಗಮಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಇದನ್ನೂ ಓದಿ: Business Ideas: 70 ಸಾವಿರ ಖರ್ಚು ಮಾಡಿ 3-4 ಲಕ್ಷ ರೂ. ಆದಾಯ ಗಳಿಸಿ!
ಚಂದ್ರಶೇಖರನ್ ಅವರ ಮೇಲ್ವಿಚಾರಣೆಯಲ್ಲಿ, ಕೆಲವು ಟಾಟಾ ಅಧಿಕಾರಿಗಳು ವಿಸ್ಟ್ರಾನ್ ಘಟಕದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ವಿಸ್ಟ್ರಾನ್ ಮತ್ತು ಆ್ಯಪಲ್ ಸಹ ಸಂಭಾವ್ಯ ಪರಿವರ್ತನೆಯ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ