Foxconn: ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಫಿಕ್ಸ್; ತೆಲಂಗಾಣ ಸ್ಪೀಡ್​ಗೆ ಬೆರಗಾದ ಛೇರ್ಮನ್ ಲಿಯು; ಮೊದಲ ಹಂತದಲ್ಲಿ 4,100 ಕೋಟಿ ರೂ ಹೋಡಿಕೆ; 25,000 ಉದ್ಯೋಗಸೃಷ್ಟಿ

Kongara Kalan To Have Foxconn Unit: ಹೈದರಾಬಾದ್ ಸಮೀಪದ ರಂಗಾರೆಡ್ಡಿ ಜಿಲ್ಲೆಗೆ ಸೇರಿದ ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಸ್ಥಾಪನೆಯಾಗಲಿದೆ. ಮೊದಲ ಹಂತದಲ್ಲಿ 4,100 ಕೋಟಿ ರೂ ಹೂಡಿಕೆ ಆಗಲಿದ್ದು, 25,000 ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.

Foxconn: ಕೊಂಗರಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಫಿಕ್ಸ್; ತೆಲಂಗಾಣ ಸ್ಪೀಡ್​ಗೆ ಬೆರಗಾದ ಛೇರ್ಮನ್ ಲಿಯು; ಮೊದಲ ಹಂತದಲ್ಲಿ 4,100 ಕೋಟಿ ರೂ ಹೋಡಿಕೆ; 25,000 ಉದ್ಯೋಗಸೃಷ್ಟಿ
ಫಾಕ್ಸ್​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 15, 2023 | 1:21 PM

ಹೈದರಾಬಾದ್: ಆ್ಯಪಲ್ ಐಫೋನ್ ತಯಾರಕ ಫಾಕ್ಸ್​ಕಾನ್ ಸಂಸ್ಥೆ (Foxconn) ತೆಲಂಗಾಣ ಮತ್ತು ಕರ್ನಾಟಕದಲ್ಲಿ ಘಟಕಗಳನ್ನು ಸ್ಥಾಪಿಸುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಈಗಾಗಲ್ಲೇ ಏರ್​ಪೋರ್ಟ್ ಇರುವ ದೇವನಹಳ್ಳಿ ಬಳಿ ಒಂದು ದೊಡ್ಡ ಪ್ಲಾಟ್ ಖರೀದಿಸಿದೆ. ಇದೀಗ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೊಂಗರ್ ಕಲಾನ್ (Kongara Kalaan) ಎಂಬಲ್ಲಿ ಫಾಕ್ಸ್​ಕಾನ್​ನ ಘಟಕವೊಂದು ಆರಂಭವಾಗುವುದು ಖಚಿತವಾಗಿದೆ. ಹೈದರಾಬಾದ್​ಗೆ ಸಮೀಪ ಇರುವ ಕೊಂಗರ ಕಲಾನ್​ನಲ್ಲಿ ಫಾಕ್ಸ್​ಕಾನ್ ಘಟಕ ಸ್ಥಾಪನೆ ಆಗುತ್ತಿರುವ ವಿಚಾರವನ್ನು ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಫಾಕ್ಸ್​ಕಾನ್ ಘಟಕ ಸ್ಥಾಪನೆಗೆ ತೆಲಂಗಾಣ ಮತ್ತು ಫಾಕ್ಸ್​ಕಾನ್ ಮಧ್ಯೆ ಒಪ್ಪಂದಕ್ಕೆ ಸಹಿಬಿದ್ದಿದೆ.

ಈ ಘಟಕದಲ್ಲಿ ಫಾಕ್ಸ್​ಕಾನ್ ಮೊದಲ ಹಂತದಲ್ಲಿ 500 ಮಿಲಿಯನ್ ಡಾಲರ್ (ಸುಮಾರು 4,100 ಕೋಟಿ ರೂ) ಹಣ ಹೂಡಿಕೆ ಮಾಡಲಿದೆ. ಇದರಿಂದ 25,000 ದಷ್ಟು ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಮಗನೂ ಆಗಿರುವ ಕೆಟಿ ರಾಮರಾವ್ ಮಾಡಿರುವ ಟ್ವೀಟ್ ಪ್ರಕಾರ ತೆಲಂಗಾಣದಲ್ಲಿ ಫಾಕ್ಸ್​ಕಾನ್​ನ ಇನ್ನಷ್ಟು ಘಟಕಗಳು ಸ್ಥಾಪನೆ ಆಗಬಹುದು.

ಇದನ್ನೂ ಓದಿApple Phones: ಆ್ಯಪಲ್ ಫೋನ್ ಫ್ಯಾಕ್ಟರಿಗಾಗಿ ಬೆಂಗಳೂರಿನಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿಸಿದ ಫಾಕ್ಸ್​ಕಾನ್

ಇದೇ ವೇಳೆ ಫಾಕ್ಸ್​ಕಾನ್ ಘಟಕ ಸ್ಥಾಪನೆ ಆಗುತ್ತಿರುವ ಬಗ್ಗೆ ತೆಲಂಗಾಣ ಸರ್ಕಾರ ಮತ್ತು ಫಾಕ್ಸ್​ಕಾನ್ ಮಧ್ಯೆ ಜಂಟಿ ಹೇಳಿಕೆ ಬಿಡುಗಡೆ ಆಗಿದೆ. ವಿಶ್ವದರ್ಜೆ ಉತ್ಪನ್ನಗಳನ್ನು ಇಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದನ್ನು ತಿಳಿಸಲಾಗಿದೆ.

ಫಾಕ್ಸ್​ಕಾನ್​ನ ಛೇರ್ಮನ್ ಯಂಗ್ ಲಿಯು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ತೆಲಂಗಾಣ ಸರ್ಕಾರದ ಧೋರಣೆಯನ್ನು ಪ್ರಶಂಸಿಸಿದ್ದಾರೆ. ತೆಲಂಗಾಣ ತನಗೆ ವಿಶ್ವಾಸ ನೀಡಿದೆ. ಫಾಕ್ಸ್​ಕಾನ್​ನ ಆದಾಯ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ವೇಗ ಇಲ್ಲದೇ ಇದು ಸಾಧ್ಯವಿಲ್ಲ. ತೆಲಂಗಾಣದ ವೇಗದಿಂದ ಇದು ಸಾಧ್ಯವಾಗಿದೆ ಎಂದು ಯಂಗ್ ಲಿಯು ಈ ಸಂದರ್ಭದಲ್ಲಿ ಹೇಳಿದ್ದನ್ನು ಕೆಟಿ ರಾಮರಾವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿDoctors: ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ; ದೇಶದ ಎಲ್ಲಾ ವೈದ್ಯರ ಹೆಸರು ನ್ಯಾಷನಲ್ ಮೆಡಿಕಲ್ ರಿಜಿಸ್ಟರ್​ನಲ್ಲಿ

ಆ್ಯಪಲ್ ಕಂಪನಿಯ ಪ್ರಮುಖ ಮೂರ್ನಾಲ್ಕು ಸರಬರಾಜುದಾರ ಸಂಸ್ಥೆಗಳಲ್ಲಿ ಫಾಕ್ಸ್​ಕಾನ್ ಅತಿದೊಡ್ಡದು. ಚೈನೀಸ್ ಥೈಪೆ ಅಥವಾ ತೈವಾನ್ ಮೂಲದ ಕಂಪನಿ ಇದು. ಆ್ಯಪಲ್​ನ ಐಫೋನ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಇದು ತಯಾರಿಸಿ ಸರಬರಾಜು ಮಾಡುತ್ತದೆ. ಚೀನಾದಲ್ಲಿ ಇದರ ಹೆಚ್ಚಿನ ಘಟಕಗಳು ಇರುವುದು. ಕೋವಿಡ್ ಸಂದರ್ಭದಲ್ಲಿ ಚೀನಾದಲ್ಲಿ ಘಟಕಗಳು ಮುಚ್ಚಿದ್ದರಿಂದ ಸಾಕಷ್ಟು ಸರಬರಾಜು ಸಮಸ್ಯೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಇತರ ದೇಶಗಳಿಗೆ ಐಫೋನ್ ತಯಾರಕ ಘಟಕಗಳನ್ನು ವರ್ಗಾಯಿಸಲಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲೂ ಫಾಕ್ಸ್​ಕಾನ್ ವಿವಿಧ ಕಡೆ ಘಟಕಗಳನ್ನು ಸ್ಥಾಪಿಸುತ್ತಿದೆ.

ಬೆಂಗಳೂರು ಏರ್​ಪೋರ್ಟ್ ಇರುವ ದೇವನಹಳ್ಳಿ ಸಮೀಪವೂ ಫಾಕ್ಸ್​ಕಾನ್ ದೊಡ್ಡ ಜಮೀನು ಖರೀದಿಸಿದೆ. ಇಲ್ಲಿ ಐಫೋನ್ ತಯಾರಕ ಘಟಕ ಸ್ಥಾಪನೆ ಆಗುವ ಸಾಧ್ಯತೆ ಇದ್ದು, 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್