ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಸಿಎನ್​ಜಿ, ಪಿಎನ್​ಜಿ ಗ್ಯಾಸ್ ಬೆಲೆಗಳ ಏರಿಕೆ ಮಾಡದ ಅದಾನಿ ಕಂಪನಿ

Adani Total Gas keeps unchanged the prices of CNG and PNG: ಫ್ರಾನ್ಸ್​ನ ಟೋಟಲ್ ಎನರ್ಜೀಸ್ ಮತ್ತು ಅದಾನಿ ಗ್ರೂಪ್​ನ ಜಂಟಿ ಬ್ಯುಸಿನೆಸ್ ಆದ ಅದಾನಿ ಟೋಟಲ್ ಎನರ್ಜಿ ಲಿಮಿಟೆಡ್ ಕಂಪನಿ ತನ್ನ ವಿವಿಧ ಗ್ಯಾಸ್​​ಗಳ ಬೆಲೆಯಲ್ಲಿ ಏರಿಕೆ ಮಾಡಿಲ್ಲ. ಸಿಎನ್​ಜಿ ಮತ್ತು ಪಿಎನ್​ಜಿ ಗ್ಯಾಸ್​ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆದರೆ ಎಲ್​ಎನ್​ಜಿ ಗ್ಯಾಸ್​ಗೆ ಬಳಕೆಯಲ್ಲಿ ಮಿತಿ ಹೇರಲಾಗಿದೆ. ಸಿಎನ್​ಜಿ ಗ್ಯಾಸ್ ವಾಹನಗಳಿಗೆ ಬಳಸಲಾಗುತ್ತದೆ. ಪಿಎನ್​ಜಿ ಪೈಪ್ಡ್ ಗ್ಯಾಸ್ ಆಗಿದ್ದು ಇದು ಗೃಹಬಳಕೆದಾರರಿಗೆ ಲಭ್ಯ ಇರುತ್ತದೆ. ಎಲ್​ಎನ್​ಜಿ ಗ್ಯಾಸ್ ಅನ್ನು ಕೈಗಾರಿಕೆಗಳು ಬಳಸುತ್ತವೆ.

ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಭಾರತದಲ್ಲಿ ಸಿಎನ್​ಜಿ, ಪಿಎನ್​ಜಿ ಗ್ಯಾಸ್ ಬೆಲೆಗಳ ಏರಿಕೆ ಮಾಡದ ಅದಾನಿ ಕಂಪನಿ
ಅದಾನಿ ಟೋಟಲ್

Updated on: Mar 06, 2026 | 4:21 PM

ನವದೆಹಲಿ, ಮಾರ್ಚ್ 6: ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದರೂ ಭಾರತದಲ್ಲಿ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ (Adani Total Gas Ltd) ತನ್ನ ಸಿಎನ್​ಜಿ ಮತ್ತು ಪಿಎನ್​ಜಿ ಅನಿಲಗಳ ಬೆಲೆ ಏರಿಕೆ ಮಾಡಿಲ್ಲ. ಔದ್ಯಮಿಕ ಗ್ರಾಹಕರಿಗೆ ಅದಾನಿ ಕಂಪನಿ ಎಲ್​ಎನ್​ಜಿ ಪೂರೈಕೆಯನ್ನು ಮಿತಿಗೊಳಿಸಿದೆ. ಅದು ಬಿಟ್ಟರೆ ಗೃಹಬಳಕೆಗೆ ಎಟಿಜಿಎಲ್​ನಿಂದ ಸರಬರಾಜಾಗುವ ಕೊಳವೆ ಅಡುಗೆ ಅನಿಲ ಹಾಗೂ ವಾಹನಗಳಿಗೆ ಬಳಕೆಯಾಗುವ ಸಿಎನ್​ಜಿ ಗ್ಯಾಸ್​ನ ಪೂರೈಕೆಯಲ್ಲಿ ಯಾವ ನಿರ್ಬಂಧ ಇಲ್ಲ. ಬೆಲೆಯಲ್ಲೂ ವ್ಯತ್ಯಯವಾಗಿಲ್ಲ.

ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ತನ್ನ ಶೇ. 70ರಷ್ಟು ಗ್ಯಾಸ್ ಅನ್ನು ದೇಶೀಯವಾಗಿ ಪಡೆಯುತ್ತಿದೆ. ಸಿಎನ್​ಜಿ ಬಳಕೆದಾರರಿಗೆ ಮತ್ತು ಗೃಹ ಅಡುಗೆಮನೆಗಳಿಗೆ ಇವು ಸರಬರಾಜಾಗುತ್ತವೆ. ಕಂಪನಿಯ ಉಳಿದ ಶೇ. 30ರಷ್ಟು ಅನಿಲವು ಎಲ್​ಎನ್​ಜಿಯಾಗಿದ್ದು ಇದನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ. ಎಲ್​ಎನ್​ಜಿ ಗ್ಯಾಸ್ ಅನ್ನು ಕಮರ್ಷಿಯಲ್ ಮತ್ತು ಕೈಗಾರಿಕಾ ಬಳಕೆಗೆ ನೀಡಲಾಗುತ್ತದೆ.

ಇದನ್ನೂ ಓದಿ: ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ- ಸಿದ್ದರಾಮಯ್ಯ

ಎಲ್​ಎನ್​ಜಿಯನ್ನು ಭಾರತೀಯ ಕಂಪನಿಗಳು ಗಲ್ಫ್ ರಾಷ್ಟ್ರಗಳಿಂದ ಪಡೆಯುತ್ತವೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಕಚ್ಚಾ ತೈಲ ಮತ್ತು ಅನಿಲಗಳ ಸಾಗಣೆಗೆ ತಡೆ ಬಿದ್ದಿರುವುದರಿಂದ ಅದಾನಿ ಟೋಟಲ್ ಗ್ಯಾಸ್ ಕಂಪನಿಗೆ ಎಲ್​ಎಲ್​ಜಿ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

ಎಲ್​ಎನ್​ಜಿ ಗ್ಯಾಸ್ ಅನ್ನು ಬಳಸುವ ಕಮರ್ಷಿಯಲ್ ಹಾಗೂ ಕೈಗಾರಿಕಾ ಗ್ರಾಹಕರು, ಗ್ಯಾಸ್ ಬಳಕೆಯನ್ನು ಶೇ. 40ರಷ್ಟು ಕಡಿಮೆ ಮಾಡಬೇಕೆಂದು ಮನವಿ ಪಡೆದಿದ್ದಾರೆ. ಈ ಗ್ರಾಹಕರು ಈಗಾಗಲೆ ಒಪ್ಪಂದ ಮಾಡಿಕೊಂಡಿದ್ದಾರಾದರೂ ಕಾಂಟ್ರಾಕ್ಟ್​ನಲ್ಲಿರುವಷ್ಟು ಎಲ್​ಎನ್​ಜಿ ಗ್ಯಾಸ್ ಬಳಕೆಗೆ ಮುಕ್ತಾವಕಾಶ ಇರುವುದಿಲ್ಲ. ಕಾಂಟ್ರಾಕ್ಟ್ ದರವು ಪ್ರತೀ ಸ್ಟ್ಯಾಂಡರ್ಸ್ ಕ್ಯೂಬಿಕ್ ಮೀಟರ್​ಗೆ 40 ರೂ ಇದೆ. ಶೇ. 40ರಷ್ಟು ಎನ್​ಎನ್​ಜಿಯನ್ನು ಇದೇ ಬೆಲೆಯಲ್ಲಿ ಬಳಸಬಹುದು. ಇದಕ್ಕಿಂತ ಹೆಚ್ಚಿನ ಸಿಎನ್​ಜಿ ಗ್ಯಾಸ್ ಬಳಸಿದರೆ, ಹಾಲಿ ಮಾರುಕಟ್ಟೆ ದರ ಅಥವಾ ಸ್ಪಾಟ್ ಪ್ರೈಸ್ ಪಾವತಿಸಬೇಕಾಗುತ್ತದೆ. ಸ್ಪಾಟ್ ಪ್ರೈಸ್ ಸಾಮಾನ್ಯವಾಗಿ ಕಾಂಟ್ರಾಕ್ಟ್ ಪ್ರೈಸ್​ಗಿಂತ ಎರಡು ಪಟ್ಟು ಹೆಚ್ಚಿರುತ್ತದೆ.

ಇದನ್ನೂ ಓದಿ: ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು

ಔದ್ಯಮಿಕ ಗ್ರಾಹಕರು ಎಲ್​ಎನ್​ಜಿ ಬಿಟ್ಟು ಪರ್ಯಾಯ ಇಂಧನ ಮೂಲಗಳನ್ನು ಅವಲೋಕಿಸಲು ಸಲಹೆ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us