ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಅಗ್ನಿಕುಲ್ ಕಾಸ್ಮೋಸ್ ಕಂಪನಿಯು ಭೂಮಿಯ ಸುತ್ತ ಸುತ್ತುವ ಡಾಟಾ ಸೆಂಟರ್​ಗಳನ್ನು ನಿರ್ಮಿಸುತ್ತಿದೆ. ಮರುಬಳಕೆ ಮಾಡಬಹುದಾದ ರಾಕೆಟ್​ಗಳನ್ನೂ ಸಂಸ್ಥೆ ಅಭಿವೃದ್ಧಿಪಡಿಸಲಿದೆ. ಈ ಡಾಟಾ ಸೆಂಟರ್ ಮತ್ತು ರೀಯೂಸಬಲ್ ರಾಕೆಟ್ ನಿರ್ಮಿಸಲು ಆಂಧ್ರದಲ್ಲಿ ಒಂದು ಘಟಕ ಸ್ಥಾಪಿಸುತ್ತದೆ. ಅದಕ್ಕಾಗಿ ಆಂಧ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ಹೊಸ ಇತಿಹಾಸ ನಿರ್ಮಿಸಹೊರಟ ಅಗ್ನಿಕುಲ್ ಕಾಸ್ಮೋಸ್; ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್, ಮರುಬಳಕೆ ರಾಕೆಟ್ ಉಡಾವಣೆಗೆ ಪ್ಲಾನ್
ಅಗ್ನಿಕುಲ್​ನ ಅಗ್ನಿಬನ್ ರಾಕೆಟ್
Image Credit source: PTI

Updated on: Nov 16, 2026 | 4:16 PM

ಹೈದರಾಬಾದ್, ನವೆಂಬರ್ 16: ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್​ಗಳನ್ನು ಸ್ಥಾಪಿಸುವ ಕುರಿತು ಚರ್ಚೆಗಳು ಹೆಚ್ಚುತ್ತಿರುವ ಮಧ್ಯೆ ಭಾರತದ ಅಗ್ನಿಕುಲ್ ಕಾಸ್ಮೋಸ್ ಕಂಪನಿ, ಅಂಥದ್ದೊಂದು ಪ್ರಯತ್ನಕ್ಕೆ ಸ್ವತಃ ಕೈಹಾಕಲು ಯೋಜಿಸಿದೆ. ಭೂಕಕ್ಷೆಯಲ್ಲಿ ಸುತ್ತಬಲ್ಲಂತಹ ಡಾಟಾ ಸೆಂಟರ್​ಗಳನ್ನು ಆಗಸಕ್ಕೆ ಕಳುಹಿಸಲಿದೆ ಈ ಕಂಪನಿ. ಅಷ್ಟೇ ಅಲ್ಲ, ಮುಂದಿನ ವರ್ಷ ಪುನರ್ಬಳಸಬಹುದಾದ ರಾಕೆಟ್ ಉಡಾವಣೆ ಯೋಜನೆಯ ಪ್ರಯೋಗ ಕೂಡ ಮಾಡಲಿದೆ. ಇದು ಭಾರತದ ಮೊದಲ ಮರುಬಳಕೆ ರಾಕೆಟ್ ಮಿಷನ್ ಆಗಲಿದೆ.

ತಿರುಪತಿಯಲ್ಲಿರುವ ಬಾಹ್ಯಾಕಾಶ ನಗರಿಯಲ್ಲಿ ಆರ್ಬಿಟಲ್ ಡಾಟಾ ಸೆಂಟರ್​ಗಳು ಮತ್ತು ಮರುಬಳಕೆ ರಾಕೆಟ್​ಗಳನ್ನು ತಯಾರಿಸುವ ಘಟಕ ಸ್ಥಾಪಿಸಲು ಅಗ್ನಿಕುಲ್ ಕಾಸ್ಮೋಸ್ ಯೋಜಿಸಿದೆ. ಇದಕ್ಕಾಗಿ ಆಂಧ್ರಪ್ರದೇಶ ಸರ್ಕಾರದೊಂದಿಗೆ ಎಂಒಯು ಒಡಂಬಡಿಕೆ ಮಾಡಿಕೊಂಡಿದೆ.

Loading...

ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್​​ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್​ಎಕ್ಸ್

‘ಎರಡು ಉದ್ದೇಶದಿಂದ ಘಟಕ ಸ್ಥಾಪಿಸಲು ಎಂಒಯುಗೆ ಸಹಿ ಹಾಕಿದ್ದೇವೆ. ಅದರಲ್ಲಿ ಆರ್ಬಿಟಲ್ ಡಾಟಾ ಸೆಂಟರ್ ಒಂದು. ರಾಕೆಟ್​ನ ಮೇಲ್ಭಾಗವನ್ನು ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್​ಗಳನ್ನು ಕೂರಿಸಲು ಸಾಧ್ಯವಾಗುವಂತೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದೇವೆ’ ಎಂದು ಅಗ್ನಿಕುಲ್ ಕಾಸ್ಮೋಸ್​ನ ಸಿಇಒ ಶ್ರೀನಾಥ್ ರವಿಚಂದ್ರನ್ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಅಗ್ನಿಕುಲ್ ಸಂಸ್ಥೆಯು ಒಂದು ರಾಕೆಟ್ ಉಡಾವಣೆ ಮಾಡಿ ಸುದ್ದಿಯಾಗಿತ್ತು. ಅದು 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ತಯಾರಾದ ಎಂಜಿನ್ ಹೊಂದಿದ ವಿಶ್ವದ ಮೊದಲ ರಾಕೆಟ್ ಅದಾಗಿತ್ತು. ರಾಕೆಟ್ ಅನ್ನು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾಗಿತ್ತು.

ಸ್ಪೇಸ್​ಎಕ್ಸ್ ಹಾದಿಯಲ್ಲಿ ಅಗ್ನಿಕುಲ್

ಅಗ್ನಿಕುಲ್ ಈಗ ಮರುಬಳಕೆಯ ರಾಕೆಟ್​ನ ಪ್ರಯೋಗ ಮಾಡುತ್ತಿದೆ. ಇದರಲ್ಲಿ ಉಡಾವಣೆಗೊಂಡ ರಾಕೆಟ್​ನ ಕೆಳಗಿನ ಭಾಗವನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವ ಪ್ರಯೋಗ. ಇಲಾನ್ ಮಸ್ಕ್ ಅವರ ಸ್ಪೇಸ್​ಎಕ್ಸ್ ಸಂಸ್ಥೆ ಇಂಥ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ. ಮೊನ್ನೆಮೊನ್ನೆ ಸ್ಪೇಸ್​ಎಕ್ಸ್ ತನ್ನ ಸ್ಟಾರ್​ಶಿಪ್ ಅನ್ನು ಸಂಪೂರ್ಣವಾಗಿ ಕೆಳಗಿಳಿಸಲು ಯಶಸ್ವಿಯಾಗಿ ವಿಸ್ಮಯಗೊಳಿಸಿತ್ತು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಟ್ಟದಷ್ಟು ಸಾಲ; ಬೆಟ್ಟದಷ್ಟು ಕನಸು; ವಿಶ್ವದ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿ

ರಾಕೆಟ್ ಮೇಲ್ಭಾಗವು ಡಾಟಾ ಸೆಂಟರ್​ಗಳಿಗೆ ಬಳಕೆ

ಅಗ್ನಿಕುಲ್ ಕಾಸ್ಮೋಸ್ ತನ್ನ ರಾಕೆಟ್​ನ ಮೇಲ್ಭಾಗವನ್ನು ಆಗಸದಲ್ಲೇ ಬಿಡಲಿದೆ. ಆ ಭಾಗವನ್ನು ಡಾಟಾ ಸೆಂಟರ್​ಗಳನ್ನು ಕೂರಿಸುವ ಸ್ಥಳವನ್ನಾಗಿ ಬಳಸಲು ಯೋಜಿಸುತ್ತಿದೆ. ಇದರಿಂದ ರಾಕೆಟ್​ನ ಮೇಲ್ಭಾಗವು ವ್ಯರ್ಥವಾಗುವುದಿಲ್ಲ. ಅಗ್ನಿಕುಲ್​ನ ಈ ಯೋಜನೆಗಳು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರಮುಖ ಮೈಲಿಗಲ್ಲುಗಳಾಗಬಹುದು. ಜಾಗತಿಕ ಬಾಹ್ಯಾಕಾಶ ನಕ್ಷೆಯಲ್ಲಿ ಭಾರತದ ಸ್ಥಾನಮಾನವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us