2021 ವರ್ಷ ಮುಗಿದು 2022 ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ವರ್ಷವಿಡಿ ಸಿಗಲಿರುವ ರಜಾ ದಿನಗಳ (Holidays in January 2022) ಪಟ್ಟಿ ಬಿಡುಗಡೆ ಆಗಿದೆ. ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಈ ಪೈಕಿ ಜನವರಿ ಮೊದಲ ತಿಂಗಳಲ್ಲೇ ಬ್ಯಾಂಕ್ಗಳು ಬರೋಬ್ಬರಿ 16 ದಿನಗಳ ಕಾಲ ಮುಚ್ಚಿರಲಿವೆ (Bank Holidays in January 2022). 2022ರ ಜನವರಿಯ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದೆ. ಆರ್ಬಿಐ ಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೆ (States) ಅನ್ವಯಿಸೋದಿಲ್ಲ ಎಂಬುದು ಗಮನಿಸಬೇಕು. ಹೀಗಾಗಿ ನಿಮ್ಮ ರಾಜ್ಯಕ್ಕೆ ಅನ್ವಯಿಸುವ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ.
ಆರ್ಬಿಐನ ಪಟ್ಟಿಯ ಪ್ರಕಾರ ಜನವರಿ 2022 ರಲ್ಲಿ ಒಟ್ಟು ಒಂಬತ್ತು ರಾಜ್ಯವಾರು ರಜೆಗಳು ಇದೆ. ಈ ವಾರದಿಂದಲೇ ಈ ರಜೆಗಳು ಇರಲಿದೆ. ಜನವರಿ ಒಂದರಂದೇ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಮುಚ್ಚರಲಿದೆ. ಇನ್ನು ಉಳಿದಂತೆ ಏಳು ರಜಾ ದಿನಗಳು ವಾರದ ರಜಾದ ದಿನಗಳು ಆಗಿದೆ. ಈ ವಾರದ ರಜಾ ದಿನಗಳ ಸಂದರ್ಭದಲ್ಲಿ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಿರಲಿದೆ. ಆದ್ದರಿಂದಾಗಿ ನಿಮಗೆ ಯಾವುದೇ ಬ್ಯಾಂಕಿನ ವಹಿವಾಟು ಇದ್ದರೆ ಈ ರಜಾ ದಿನಗಳ ಬಗ್ಗೆ ಮಾಹಿತಿ ತಿಳಿದು ಕೊಳ್ಳಿ.
ಆರ್ಬಿಐ ಮೂರು ಹಂತಗಳಲ್ಲಿ ಬ್ಯಾಂಕ್ ರಜೆಗಳನ್ನು ವಿಂಗಡನೆ ಮಾಡಲಿದೆ. ರಾಜ್ಯವಾರು ರಜೆಗಳು, ಧಾರ್ಮಿಕ ರಜೆಗಳು ಹಾಗೂ ಹಬ್ಬದ ಹಿನ್ನೆಲೆ ರಜೆಗಳು ಎಂದು ಆರ್ಬಿಐ ವಿಂಗಡನೆ ಮಾಡುತ್ತದೆ. ಜನವರಿಯಲ್ಲಿ ರಾಷ್ಟ್ರೀಯ ರಜೆಯೂ ಕೂಡಾ ಇರಲಿದೆ. ಜನವರಿ 26 ರಂದು ಗಣರಾಜ್ಯ ದಿನವಾದ ಹಿನ್ನೆಲೆಯಿಂದಾಗಿ ರಾಷ್ಟ್ರೀಯ ರಜೆ ಇರಲಿದೆ. ಆದರೆ ಇಂಫಾಲ್, ಜೈಪುರ, ಶ್ರೀನಗರ, ಭೋಪಾಲ್, ಭುವನೇಶ್ವರ, ಚಂಡೀಗಢ, ಅಗರ್ತಾಲದಲ್ಲಿ ಬ್ಯಾಂಕುಗಳು ತೆರೆದಿರಲಿದೆ. ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಕೋಲ್ಕತ್ತಾದಲ್ಲಿ ರಜೆ ಇರಲಿದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ದಿನ ಎಂದಿನಂತೆ ಕಾರ್ಯ ನಿರ್ವಹಣೆ ಆಗಲಿದೆ.
ಈ ಎಲ್ಲ ರಜಾದಿನಗಳಂದು ಆನ್ಲೈನ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಹೀಗಾಗಿ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರೋರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.
Petrol Rate: ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ; ಮಹಾನಗರಗಳಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
(Bank Holidays in January 2022 Here is the full list of holidays for the month of January 2022 as per RBI mandate)
Published On - 11:09 am, Tue, 28 December 21