ಜೂನ್ ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ; ಕರ್ನಾಟಕ ಹಾಗೂ ದೇಶವ್ಯಾಪಿ ಎಷ್ಟಿದೆ ರಜೆ?

Bank holidays of upto 12 days in 2026 June: ಆರ್​ಬಿಐ ವೇಳಾಪಟ್ಟಿ ಪ್ರಕಾರ 2026ರ ಜೂನ್ ತಿಂಗಳಲ್ಲಿ ಬ್ಯಾಂಕುಗಳು 12 ದಿನಗಳವರೆಗೆ ರಜೆ ಹೊಂದಿರುತ್ತವೆ. ಇದರಲ್ಲಿ ಆರು ವೀಕೆಂಡ್ ರಜೆಗಳೇ ಇವೆ. ಮೊಹರಂ, ಕಬೀರ್ ಜಯಂತಿ, ಮಹಾರಾಣ ಪ್ರತಾಪ್ ಜಯಂತಿ ಇತ್ಯಾದಿ ಕೆಲ ವಿಶೇಷ ಹಬ್ಬ ಹರಿದಿನಗಳು ಜೂನ್​ನಲ್ಲಿ ಇವೆ. ಕರ್ನಾಟಕದಲ್ಲಿ 7 ದಿನಗಳು ಬ್ಯಾಂಕ್ ರಜೆ ಇರುತ್ತದೆ.

ಜೂನ್ ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ; ಕರ್ನಾಟಕ ಹಾಗೂ ದೇಶವ್ಯಾಪಿ ಎಷ್ಟಿದೆ ರಜೆ?
ಬ್ಯಾಂಕ್ ರಜೆ
Image Credit source: Shutterstock

Updated on: May 29, 2026 | 6:05 PM

ನವದೆಹಲಿ, ಮೇ 29: ಮುಂದಿನ ತಿಂಗಳು (2026ರ ಜೂನ್) ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ (Bank Holidays) ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಯ ಇರುತ್ತದೆ. ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಗುರು ಅರ್ಜುನದೇವ ಬಲಿದಾನ ದಿನ, ಕಬೀರ್ ಜಯಂತಿ ಇತ್ಯಾದಿ ಕೆಲ ವಿಶೇಷ ದಿನಗಳು ಮತ್ತು ಆಚರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಇವೆ. ಈ 12 ರಜಾದಿನಗಳಲ್ಲಿ ಆರು ದಿನಗಳು ರೆಗ್ಯುಲರ್ ವೀಕೆಂಡ್ ರಜಾ ದಿನಗಳೇ ಆಗಿವೆ. ಮಿಝೋರಾಂ, ಹಿಮಾಚಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ. ಬೇರೆ ರಾಜ್ಯಗಳಿಗಿಂತ ಎರಡು ಹೆಚ್ಚು ರಜೆಗಳಿವೆ. ಮೊಹರಂ ಹಬ್ಬಕ್ಕೆ ಹೆಚ್ಚಿನ ರಾಜ್ಯಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ಏಳು ದಿನ ಬ್ಯಾಂಕುಗಳು ಜೂನ್​ನಲ್ಲಿ ಬಂದ್ ಆಗಿರುತ್ತವೆ.

2026ರ ಜೂನ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಜೂನ್ 7: ಭಾನುವಾರದ ರಜೆ
  • ಜೂನ್ 13: ಎರಡನೇ ಶನಿವಾರದ ರಜೆ
  • ಜೂನ್ 14: ಭಾನುವಾರದ ರಜೆ
  • ಜೂನ್ 15, ಸೋಮವಾರ: ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ, ಮಿಝೋರಾಂ ರಾಜ್ಯಗಳಲ್ಲಿ ರಜೆ)
  • ಜೂನ್ 17, ಬುಧವಾರ: ಮಹಾರಾಣ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ರಜೆ)
  • ಜೂನ್ 18, ಗುರುವಾರ: ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (ಪಂಜಾಬ್​ನಲ್ಲಿ ರಜೆ)
  • ಜೂನ್ 21: ಭಾನುವಾರದ ರಜೆ
  • ಜೂನ್ 26, ಶುಕ್ರವಾರ: ಮೊಹರಂ ಹಬ್ಬ (ಹೆಚ್ಚಿನ ಕಡೆ ರಜೆ)
  • ಜೂನ್ 27: ನಾಲ್ಕನೇ ಶನಿವಾರದ ರಜೆ
  • ಜೂನ್ 28: ಭಾನುವಾರದ ರಜೆ
  • ಜೂನ್ 29, ಸೋಮವಾರ: ಸಂತ ಗುರು ಕಬೀರ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
  • ಜೂನ್ 30, ಮಂಗಳವಾರ: ರೆಮ್ನಾ ನೀ (ಮಿಝೋರಾಂ ರಾಜ್ಯದಲ್ಲಿ ರಜೆ)

ಇದನ್ನೂ ಓದಿ: PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್​ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ

ಕರ್ನಾಟಕದಲ್ಲಿ ಜೂನ್​ನಲ್ಲಿರುವ ಬ್ಯಾಂಕ್ ರಜಾದಿನಗಳು

  • ಜೂನ್ 7: ಭಾನುವಾರದ ರಜೆ
  • ಜೂನ್ 13: ಎರಡನೇ ಶನಿವಾರದ ರಜೆ
  • ಜೂನ್ 14: ಭಾನುವಾರದ ರಜೆ
  • ಜೂನ್ 21: ಭಾನುವಾರದ ರಜೆ
  • ಜೂನ್ 26, ಶುಕ್ರವಾರ: ಮೊಹರಂ ಹಬ್ಬಕ್ಕೆ ರಜೆ
  • ಜೂನ್ 27: ನಾಲ್ಕನೇ ಶನಿವಾರದ ರಜೆ
  • ಜೂನ್ 28: ಭಾನುವಾರದ ರಜೆ

ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿ ಮಾತ್ರವೇ ಬಂದ್ ಆಗಿರುತ್ತದೆ. ಆದರೆ, ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಆರ್​ಟಿಜಿಎಸ್ ಪೇಮೆಂಟ್, ಹೊಸ ಬ್ಯಾಂಕ್ ಖಾತೆಗೆ ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಕ್ಕೆ ಭೌತಿಕ ಕಚೇರಿ ಬೇಕು. ಉಳಿದಂತೆ, ಹೆಚ್ಚಿನ ಪೇಮೆಂಟ್​ಗಳನ್ನು ಯುಪಿಐ, ನೆಟ್​ಬ್ಯಾಂಕಿಂಗ್ ಇತ್ಯಾದಿ ಮೂಲಕ ಮಾಡಬಹುದು. ಕ್ಯಾಷ್ ಪಡೆಯಲು ಎಟಿಎಂಗಳು ಕೂಡ 24 ಗಂಟೆ ಲಭ್ಯ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us