Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ

Bank holidays in 2026 August: ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಓಣಂ, ಈದ್ ಮಿಲಾದ್ ಇತ್ಯಾದಿ ವಿಶೇಷ ಹಬ್ಬಗಳಿವೆ. ಬ್ಯಾಂಕುಗಳಿಗೆ ಆಗಸ್ಟ್​ನಲ್ಲಿ 15 ದಿನಗಳವರೆಗೆ ರಜೆ ಇದೆ. ಕರ್ನಾಟಕದಲ್ಲಿ 9 ದಿನಗಳು ಬ್ಯಾಂಕ್ ರಜೆ ಇದೆ. ಆರ್​ಬಿಐ ಪ್ರಕಟಿಸಿರುವ ರಜಾದಿನಗಳ ಕ್ಯಾಲಂಡರ್​ನಲ್ಲಿ ವಿಶೇಷ ಪ್ರಾದೇಶಿಕ ರಜೆಗಳು ಸೇರಿವೆ.

Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ
ಎಸ್​ಬಿಐ ಬ್ಯಾಂಕ್​ನ ಚಿತ್ರ
Image Credit source: Getty Images

Updated on: Jul 31, 2026 | 11:11 AM

ಮುಖ್ಯಾಂಶಗಳು

  • ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಓಣಂ, ಈದ್ ಮಿಲಾದ್ ಇತ್ಯಾದಿ ವಿಶೇಷ ಹಬ್ಬಗಳಿವೆ.
  • ಬ್ಯಾಂಕುಗಳಿಗೆ ಆಗಸ್ಟ್​ನಲ್ಲಿ 15 ದಿನಗಳವರೆಗೆ ರಜೆ ಇದೆ. ಕರ್ನಾಟಕದಲ್ಲಿ 9 ದಿನ ಬ್ಯಾಂಕ್ ರಜೆ ಇದೆ.
  • ಆರ್​ಬಿಐ ಪ್ರಕಟಿಸಿರುವ ರಜಾದಿನಗಳ ಕ್ಯಾಲಂಡರ್​ನಲ್ಲಿ ವಿಶೇಷ ಪ್ರಾದೇಶಿಕ ರಜೆಗಳು ಸೇರಿವೆ.

ನವದೆಹಲಿ, ಜುಲೈ 31: ಆರ್​ಬಿಐ (RBI) ಕ್ಯಾಲೆಂಡರ್ ಪ್ರಕಾರ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ (Bank Holidays) ಇರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಈದ್ ಮಿಲಾದ್, ಓಣಂ ಇತ್ಯಾದಿ ಪ್ರಮುಖ ರಜಾದಿನಗಳಿವೆ. ಹಾಗೆಯೇ, ಕೇರ್ ಪೂಜಾ ಇತ್ಯಾದಿ ಪ್ರಾದೇಶಿಕ ವಿಶೇಷ ರಜೆಗಳೂ ಇವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆಗಳು ಇದರಲ್ಲಿ ಒಳಗೊಂಡಿವೆ. ಕರ್ನಾಟಕದಲ್ಲಿ ಒಂಬತ್ತು ದಿನಗಳು ಬ್ಯಾಂಕುಗಳ ಕಚೇರಿ ಬಂದ್ ಆಗಿರುತ್ತದೆ.

2026ರ ಆಗಸ್ಟ್​ನಲ್ಲಿ ಬ್ಯಾಂಕುಗಳಿಗೆ ಇರುವ ರಜೆಗಳ ಪಟ್ಟಿ

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 4, ಮಂಗಳವಾರ: ಕೇರ್ ಪೂಜಾ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 8: ಎರಡನೇ ಶನಿವಾರದ ರಜೆ ಹಾಗೂ ಸಿಕ್ಕಿಂನಲ್ಲಿ ಟೆಂಡೋಂಗ್ ಲಹೋ ರುಮ್ ಫಾಟ್ ಹಬ್ಬ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 13, ಗುರುವಾರ: ಪೇಟ್ರಿಯಾಟ್ಸ್ ಡೇ (ಮಣಿಪುರದಲ್ಲಿ ರಜೆ)
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ (ಎಲ್ಲೆಡೆ ರಜೆ)
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 19, ಬುಧವಾರ: ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದೂರ್ ಜಯಂತಿ (ತ್ರಿಪುರಾದಲ್ಲಿ ರಜೆ)
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 25, ಮಂಗಳವಾರ: ಮಿಲಾದ್ ಉನ್ ನವಬಿ, ಮಿಲಾದ್ ಇ ಶೆರಿಫ್, ಪ್ರಥಮ ಓಣಂ (ಕೇರಳ, ಆಂಧ್ರ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್, ಮಿಲಾದ್ ಉನ್ ನಬಿ, ಬರಾವಾಫತ್, ತಿರುಓಣಂ (ಕರ್ನಾಟಕ, ಮಹಾರಾಷ್ಟ್ರ, ಕೇರಳ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 27, ಗುರುವಾರ: ಝುಲನ್ ಯಾತ್ರಾ, ಓಣಂ (ಒಡಿಶಾ, ಕೇರಳ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 28, ಶುಕ್ರವಾರ: ರಕ್ಷಾಬಂಧನ (ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಕೆರಳ, ಹಿಮಾಚಲಪ್ರದೇಶ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಆಗಸ್ಟ್ 30: ಭಾನುವಾರದ ರಜೆ

ಇದನ್ನೂ ಓದಿ: ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ

ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ಇರುವ ಬ್ಯಾಂಕ್ ರಜೆಗಳು

  • ಆಗಸ್ಟ್ 2: ಭಾನುವಾರದ ರಜೆ
  • ಆಗಸ್ಟ್ 8: ಎರಡನೇ ಶನಿವಾರದ ರಜೆ
  • ಆಗಸ್ಟ್ 9: ಭಾನುವಾರದ ರಜೆ
  • ಆಗಸ್ಟ್ 15, ಶನಿವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 16: ಭಾನುವಾರದ ರಜೆ
  • ಆಗಸ್ಟ್ 22: ನಾಲ್ಕನೇ ಶನಿವಾರದ ರಜೆ
  • ಆಗಸ್ಟ್ 23: ಭಾನುವಾರದ ರಜೆ
  • ಆಗಸ್ಟ್ 26, ಬುಧವಾರ: ಈದ್ ಮಿಲಾದ್
  • ಆಗಸ್ಟ್ 30: ಭಾನುವಾರದ ರಜೆ

ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್​ಡ್ರಾಯಲ್​ಗೆ ಎಟಿಎಂಗಳು ದಿನದ 24 ಗಂಟೆ ಲಭ್ಯ ಇರುತ್ತವೆ. ಆರ್​ಟಿಜಿಎಸ್, ನೆಫ್ಟ್ ಇತ್ಯಾದಿ ಹಣ ವರ್ಗಾವಣೆಗೆ ನೆಟ್ ಬ್ಯಾಂಕಿಂಗ್ ಇದ್ದೇ ಇರುತ್ತದೆ. ಸಾಮಾನ್ಯ ಹಣ ವರ್ಗಾವಣೆಗಳಿಗೆ ಯುಪಿಐ ಕೂಡ ಇರುತ್ತದೆ. ಆದರೆ, ಚೆಕ್ ಹಾಕಲು, ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಲು, ದೊಡ್ಡ ಮೊತ್ತದ ಹಣ ಡೆಪಾಸಿಟ್ ಮಾಡಲು ಬ್ಯಾಂಕ್ ಕಚೇರಿಗಳಿಗೆ ಹೋಗುವ ಅವಶ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:04 am, Fri, 31 July 26

Loading...
Unable to load recommendations.
Follow Us