ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಕೊಡುತ್ತಾ ಆರ್​ಬಿಐ?; ಸ್ಟಡಿ ಲೋನ್ ನಿಯಮವೊಂದರ ಬದಲಾವಣೆಗೆ ಬ್ಯಾಂಕುಗಳ ಪ್ರಸ್ತಾಪಕ್ಕೆ ಸಮ್ಮತಿ ಸಿಗುತ್ತಾ?

|

Updated on: Oct 03, 2023 | 1:11 PM

Study Loan topup: ಪಾವತಿಯಾಗದ ವಿದ್ಯಾರ್ಥಿಗಳ ಮೊದಲ ಶಿಕ್ಷಣ ಸಾಲವನ್ನು ‘ಸ್ಟ್ಯಾಂಡರ್ಡ್’ ಎಂದು ಮರುವಿಂಗಡಣೆ ಮಾಡಬೇಕು, ಮತ್ತು ಮರುಪಾವತಿ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಬ್ಯಾಂಕುಗಳ ನಿಯೋಗವೊಂದು ಸೆಪ್ಟೆಂಬರ್ ತಿಂಗಳಲ್ಲಿ ಆರ್​ಬಿಐ ಬಳಿ ಮನವಿ ಮಾಡಿತ್ತು. ಇದಕ್ಕೆ ಸಮ್ಮತಿ ಸಿಕ್ಕಲ್ಲಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಟಾಪ್ ಅಪ್ ಲೋನ್​ ಪಡೆಯುವುದು, ಅಥವಾ ಅದೇ ಬಡ್ಡಿದರಲ್ಲಿ ಹೊಸ ಸಾಲ ಪಡೆಯುವುದು ಸುಲಭವಾಗುತ್ತದೆ.

ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಕೊಡುತ್ತಾ ಆರ್​ಬಿಐ?; ಸ್ಟಡಿ ಲೋನ್ ನಿಯಮವೊಂದರ ಬದಲಾವಣೆಗೆ ಬ್ಯಾಂಕುಗಳ ಪ್ರಸ್ತಾಪಕ್ಕೆ ಸಮ್ಮತಿ ಸಿಗುತ್ತಾ?
ಶಿಕ್ಷಣ ಸಾಲ
Follow us on

ನವದೆಹಲಿ, ಅಕ್ಟೋಬರ್ 3: ಈಗಾಗಲೇ ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳು ಅದೇ ದರದಲ್ಲಿ ಹೆಚ್ಚುವರಿ ಸಾಲ ಪಡೆಯಲು (loan topups) ಅನುವಾಗುವ ರೀತಿಯಲ್ಲಿ ನಿಯಮ ಬದಲಾವಣೆ ಮಾಡಲು ಆರ್​ಬಿಐ ಮುಂದೆ ಪ್ರಸ್ತಾಪವೊಂದು ಇದೆ. ವಿದ್ಯಾರ್ಥಿಗಳಿಗೆ ತುಸು ನಿರಾಳತೆ ತರುವ ಈ ಪ್ರಸ್ತಾಪವನ್ನು ಬ್ಯಾಂಕುಗಳು ಆರ್​ಬಿಐ ಮುಂದಿಟ್ಟಿವೆ. ಇನ್ನೂ ಪಾವತಿಯಾಗದ ವಿದ್ಯಾರ್ಥಿಗಳ ಮೊದಲ ಶಿಕ್ಷಣ ಸಾಲವನ್ನು ‘ಸ್ಟ್ಯಾಂಡರ್ಡ್’ ಎಂದು ಮರುವಿಂಗಡಣೆ (reclassify) ಮಾಡಬೇಕು, ಮತ್ತು ಮರುಪಾವತಿ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಬ್ಯಾಂಕುಗಳ ನಿಯೋಗವೊಂದು ಸೆಪ್ಟೆಂಬರ್ ತಿಂಗಳಲ್ಲಿ ಆರ್​ಬಿಐ ಬಳಿ ಮನವಿ ಮಾಡಿತ್ತು. ಅಕ್ಟೋಬರ್ 4ರಿಂದ ನಡೆಯುವ ಆರ್​ಬಿಐನ ಎಂಪಿಸಿ ಸಭೆಯಲ್ಲಿ ಈ ಬಗ್ಗೆ ನಿಷ್ಕರ್ಷೆಯಾಗುವ ಸಾಧ್ಯತೆ ಇದ್ದು, ಶುಕ್ರವಾರ ನಿರ್ಧಾರ ಪ್ರಕಟವಾಗಬಹುದು.

ಶಿಕ್ಷಣ ಸಾಲದಲ್ಲಿ ಈಗ ಹೇಗಿದೆ ನಿಯಮ?

ಶಿಕ್ಷಣ ವೆಚ್ಚಕ್ಕಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ವಿದ್ಯಾಭ್ಯಾಸ ಮುಗಿದು ಕೆಲ ತಿಂಗಳವರೆಗೂ ಅಥವಾ ಉದ್ಯೋಗ ಸಿಗುವವರೆಗೂ ಸಾಲ ಮರುಪಾವತಿಗೆ ವಿನಾಯಿತಿ (loan moratorium) ಇರುತ್ತದೆ. ಅದಾದ ಬಳಿಕ ಕಂತುಗಳನ್ನು ಕಟ್ಟುತ್ತಾ ಹೋಗಬೇಕಾಗುತ್ತದೆ.

ಒಂದು ವೇಳೆ ಸಾಲದ ಕಂತು ಕಟ್ಟಲು ತೊಡಗಿದ ಬಳಿಕ ಆ ಶಿಕ್ಷಣ ಸಾಲವನ್ನು ‘ಮರುರಚಿತ’ (restructured loan) ಎಂದು ವರ್ಗೀಕರಿಸಲಾಗುತ್ತದೆ. ಹೀಗಾದ ಬಳಿಕ ವಿದ್ಯಾರ್ಥಿಗಳು ಹೊಸ ಶಿಕ್ಷಣ ಸಾಲ ಪಡೆಯಲು ಬರುವುದಿಲ್ಲ. ಸಾಲ ಪಡೆದರೂ ಬಡ್ಡಿದರ ಹೆಚ್ಚಿರುತ್ತದೆ.

ಇದನ್ನೂ ಓದಿ: RBI MPC Meet October 2023: ಅಕ್ಟೋಬರ್ 4ರಿಂದ ಮೂರು ದಿನ ಆರ್​ಬಿಐ ಎಂಪಿಸಿ ಸಭೆ; ಬಡ್ಡಿದರ ನಿರ್ಧಾರ ಶುಕ್ರವಾರ ಪ್ರಕಟ

ಬ್ಯಾಂಕ್​ಗಳು ಮಾಡಿರುವ ಪ್ರಸ್ತಾವದಿಂದ ಏನು ಲಾಭ?

ವಿದ್ಯಾರ್ಥಿಗಳ ಸಾಲವನ್ನು ರೀಸ್ಟ್ರಕ್ಚರ್ಡ್ ಬದಲು ಸ್ಟ್ಯಾಂಡರ್ಡ್ ಎಂದು ವರ್ಗೀಕರಿಸಿದಾಗ ಅವರು ಹೆಚ್ಚುವರಿ ಸಾಲ ಪಡೆಯಲು ಅವಕಾಶ ಸಿಗುತ್ತದೆ. ಅದೇ ಕಡಿಮೆ ಬಡ್ಡಿದರಲ್ಲಿ ಲೋನ್ ಟಾಪ್ ಅಪ್ ಪಡೆಯಬಹುದು.

ಪದವಿ ಮುಗಿಸಿ, ಕೆಲಸಕ್ಕೆ ಸೇರಿಕೊಂಡು ಬಳಿಕ ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುವ ಮಂದಿಗೆ ಈ ನಿಯಮ ಅನುಕೂಲ ಮಾಡಿಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ