Shein Comeback: ರಿಲಾಯನ್ಸ್ ಗವಾಕ್ಷಿಲಿ ಶೀನ್; ಬ್ಯಾನ್ ಆಗಿದ್ದ ಚೀನಾದ ಫ್ಯಾಷನ್ ದೈತ್ಯ ಮತ್ತೆ ಅಖಾಡಕ್ಕೆ; ಶೀನ್​ಗೆ ವೇದಿಕೆಯಾಗಲಿದೆ ರಿಲಾಯನ್ಸ್ ರೀಟೇಲ್

Banned Chinese Shein Partnership with Reliance Retail: ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ ಚೀನಾದ ಫ್ಯಾಷನ್ ಕಂಪನಿ ಶೀನ್ ಈಗ ರಿಲಾಯನ್ಸ್ ರೀಟೇಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕೇಂದ್ರದಿಂದಲೂ ಅನುಮೋದನೆ ಸಿಕ್ಕಿರುವುದು ತಿಳಿದುಬಂದಿದೆ. ಭಾರತದಲ್ಲಿ ತನ್ನ ಆ್ಯಪ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎರಡು ವರ್ಷದ ಹಿಂದೆ ಭಾರತ ಸರ್ಕಾರ ಶೀನ್​ಗೆ ನಿಷೇಧ ಹೇರಿತ್ತು.

Shein Comeback: ರಿಲಾಯನ್ಸ್ ಗವಾಕ್ಷಿಲಿ ಶೀನ್; ಬ್ಯಾನ್ ಆಗಿದ್ದ ಚೀನಾದ ಫ್ಯಾಷನ್ ದೈತ್ಯ ಮತ್ತೆ ಅಖಾಡಕ್ಕೆ; ಶೀನ್​ಗೆ ವೇದಿಕೆಯಾಗಲಿದೆ ರಿಲಾಯನ್ಸ್ ರೀಟೇಲ್
ಶೀನ್ ಫ್ಯಾಷನ್
Edited By:

Updated on: Oct 08, 2026 | 12:41 PM

ನವದೆಹಲಿ: ಚೀನಾದ ಶೀನ್ (Shein) ವಿಶ್ವದ ಅತಿದೊಡ್ಡ ಫ್ಯಾಷನ್ ಸಂಸ್ಥೆಗಳಲ್ಲೊಂದಾಗಿದ್ದು, ರಿಲಾಯನ್ಸ್ ರೀಟೇಲ್ ಜೊತೆ ಸಹಭಾಗಿತ್ವ (Partnership) ಒಪ್ಪಂದ ಮಾಡಿಕೊಂಡಿದೆ. ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನಿಷೇಧಿಸಿದ ವಿವಿಧ ಚೀನಾ ಆ್ಯಪ್​ಗಳಲ್ಲಿ ಶೀನ್​ನದ್ದೂ ಒಂದು. ಆದರೆ, ರಿಲಾಯನ್ಸ್ ರೀಟೇಲ್ (Reliance Retail) ಮೂಲಕ ಪರೋಕ್ಷವಾಗಿ ಶೀನ್ ಭಾರತದ ಅಖಾಡಕ್ಕೆ ಧುಮುಕಲು ಸಿದ್ಧವಾಗಿದೆ. ಅಮೆರಿಕದಲ್ಲೂ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಫ್ಯಾಷನ್ ದೈತ್ಯ ಸಂಸ್ಥೆಗೆ ಈಗ ರಿಲಾಯನ್ಸ್ ರೀಟೇಲ್ ಒಳ್ಳೆಯ ವಾಹಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ರಿಲಾಯನ್ಸ್ ರೀಟೇಲ್ ಮೂಲಕ ಶೀನ್ ಭಾರತದಿಂದ ತನ್ನ ವಸ್ತುಗಳನ್ನು ಇತರ ದೇಶಗಳಿಗೆ ಸರಬರಾಜು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲಿ ತನ್ನ ಆ್ಯಪ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎರಡು ವರ್ಷದ ಹಿಂದೆ ಭಾರತ ಸರ್ಕಾರ ಶೀನ್​ಗೆ ನಿಷೇಧ ಹೇರಿತ್ತು. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ, ರಿಲಾಯನ್ಸ್ ರೀಟೇಲ್ ಮತ್ತು ಶೀನ್ ನಡುವಿನ ಒಪ್ಪಂದಕ್ಕೆ ಸರ್ಕಾರವೇ ಒಪ್ಪಿಗೆ ಮುದ್ರೆ ಹಾಕಿದೆ.

ಭಾರತದ ಮಾರುಕಟ್ಟೆ ಮತ್ತು ರಿಲಾಯನ್ಸ್ ರೀಟೇಲ್ ವೇದಿಕೆಯನ್ನು ಶೀನ್ ಹೇಗೆ ಉಪಯೋಗಿಸುತ್ತದೆ?

ಚೀನಾದ ಶೀನ್ ಸಂಸ್ಥೆ ಬಹಳ ಟ್ರೆಂಡಿಯಾಗಿರುವ ಮತ್ತು ಕಡಿಮೆ ಬೆಲೆಯಲ್ಲಿರುವ ಉಡುಪುಗಳಿಗೆ ಹೆಸರುವಾಸಿಯಾಗಿದೆ. ವಿಶ್ವದ ಅಗ್ರ ಫ್ಯಾಷನ್ ಸಂಸ್ಥೆಗಳಲ್ಲಿ ಅದೂ ಒಂದು. ರಿಲಾಯನ್ಸ್ ರೀಟೇಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಶೀನ್ ಭಾರತದ ವಿವಿಧೆಡೆ ಮಳಿಗೆಗಳನ್ನು ಸ್ಥಾಪಿಸಬಹುದು. ರಿಲಾಯನ್ಸ್​ನ ಆಜಿಯೋದ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲೂ ಶೀನ್ ಉಡುಪುಗಳು ಪ್ರದರ್ಶನಗೊಳ್ಳಬಹುದು.

ಇದಕ್ಕಿಂತ ಹೆಚ್ಚಾಗಿ, ಜಾಗತಿಕವಾಗಿ ಉಡುಪುಗಳ ಸರಬರಾಜಿಗಾಗಿ ಶೀನ್ ಕಂಪನಿ ಭಾರತದಿಂದ ಬಟ್ಟೆಯನ್ನು ಪಡೆಯಬಹುದು. ಶೀನ್ ಕಂಪನಿ ತನ್ನ ಫ್ಯಾಷನ್ ಉಡುಪುಗಳನ್ನು ಭಾರತದಲ್ಲೇ ತಯಾರಿಸಬಹುದು. ಇಲ್ಲಿ ತಯಾರಾಗುವ ಉಡುಪುಗಳನ್ನು ಭಾರತ ಹಾಗೂ ಬೇರೆ ದೇಶಗಳ ಮಾರುಕಟ್ಟೆಗೆ ಸರಬರಾಜು ಮಾಡಬಹುದು.

ಚೀನಾದ ಶೀನ್ ಸಂಸ್ಥೆ ಕಳೆದ ಬಾರಿಯ ಹಣಕಾಸು ವರ್ಷದಲ್ಲಿ 23 ಬಿಲಿಯನ್ ಡಾಲರ್​ನಷ್ಟು (ಸುಮಾರು 1.9 ಲಕ್ಷ ಕೋಟಿ ರೂ) ಆದಾಯ ಗಳಿಸಿತ್ತು ಎಂದು ವರದಿಗಳು ಹೇಳುತ್ತವೆ.

Published On - 5:10 pm, Fri, 19 May 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us