ಬ್ರಿಕ್ಸ್ ಶೃಂಗಸಭೆ 2026: ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆಯಲ್ಲಿ ಚರ್ಚೆಯಾಗುವ ವಿಷಯಗಳು

ದೆಹಲಿಯಲ್ಲಿ ಸೆಪ್ಟೆಂಬರ್ 12ರಿಂದ ಬ್ರಿಕ್ಸ್ 2026 ಶೃಂಗಸಭೆ ನಡೆಯುತ್ತದೆ. ಇದಕ್ಕೆ ಮುನ್ನ ಭಾರತ ಮತ್ತು ರಷ್ಯಾದ ನಾಯಕರಾದ ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಮಧ್ಯೆ ದ್ವಿಪಕ್ಷೀಯ ಮಾತುಕತೆ ಆಗುತ್ತಿದೆ. ಈ ಇಬ್ಬರು ನೇತಾರರು ಕೆಲ ಪ್ರಮುಖ ವಿಚಾರಗಳನ್ನು ಚರ್ಚಿಸಲಿದ್ದಾರೆ. ವ್ಯಾಪಾರ ವೃದ್ಧಿ, ತಂತ್ರಜ್ಞಾನ ಸಹಕಾರ, ನಾಗರಿಕ ಪರಮಾಣು ಸಹಕಾರ ಇತ್ಯಾದಿ ಕುರಿತು ಮಾತುಕತೆಯಾಗುವ ನಿರೀಕ್ಷೆ ಇದೆ.

ಬ್ರಿಕ್ಸ್ ಶೃಂಗಸಭೆ 2026: ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆಯಲ್ಲಿ ಚರ್ಚೆಯಾಗುವ ವಿಷಯಗಳು
ನರೇಂದ್ರ ಮೋದಿ ವ್ಲಾಡಿಮಿರ್ ಪುಟಿನ್
Image Credit source: PTI

Updated on: Sep 11, 2026 | 5:56 PM

ನವದೆಹಲಿ, ಸೆಪ್ಟೆಂಬರ್ 11: ಬ್ರಿಕ್ಸ್ (BRICS) ಶೃಂಗಸಭೆ ಶುರುವಾಗುವ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ. ಶೃಂಗಸಭೆ ನಾಳೆ ಶನಿವಾರ ಆರಂಭವಾಗುತ್ತದೆ. ಒಂದು ದಿನದ ಮುನ್ನ ಎರಡು ದಿಗ್ಗಜ ರಾಷ್ಟ್ರಗಳ ನೇತಾರರು ಮಾತುಕತೆ ಮಾಡುತ್ತಿದ್ದಾರೆ. ಅಮೆರಿಕದ ಟ್ಯಾರಿಫ್, ಇರಾನ್ ಯುದ್ಧ ಇತ್ಯಾದಿ ಗುರುತರ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಎರಡು ದಿಗ್ಗಜರ ನಡುವಿನ ಸಭೆ ಕುತೂಹಲ ಮೂಡಿಸಿದೆ. ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಚರ್ಚೆಯಾಗಬಹುದಾದ ಸಂಭವನೀಯ ವಿಷಯಗಳ ವಿವರ ಇಲ್ಲಿದೆ:

  • ಬೃಹತ್ ದ್ವಿಪಕ್ಷೀಯ ವ್ಯಾಪಾರ ಗುರಿ: 2030ರ ವೇಳೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ (ಸುಮಾರು ₹9.6 ಲಕ್ಷ ಕೋಟಿ) ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿ.
  • ‘ಇನ್ನೋಪ್ರೊಮ್’ (INNOPROM) ಮತ್ತು ಕೈಗಾರಿಕಾ ಸಹಕಾರ: ರಷ್ಯಾದೊಂದಿಗೆ ಕೈಗಾರಿಕಾ ಸಹಯೋಗ ವಿಸ್ತರಣೆ; ರೈಲ್ವೆ ವಲಯ ಹಾಗೂ ಸುರಂಗ ಮಾರ್ಗ ನಿರ್ಮಾಣದಲ್ಲಿ ಸಹಭಾಗಿತ್ವ; ಉಕ್ಕು ಮೌಲ್ಯವರ್ಧನೆ (Steel value chain) ಅಭಿವೃದ್ಧಿ; ಬಿ2ಬಿ (B2B) ಉದ್ಯಮ ಅವಕಾಶಗಳ ಹೆಚ್ಚಳ ಮತ್ತು ರಷ್ಯಾದ ಮಾರುಕಟ್ಟೆಗೆ ಭಾರತೀಯ ಉತ್ಪನ್ನಗಳ ಪ್ರವೇಶಾವಕಾಶ ವಿಸ್ತರಣೆ.
  • ನಾಗರಿಕ ಪರಮಾಣು ವಲಯದ ಸಹಕಾರ: ಇಂಧನ ಚಕ್ರ (Fuel cycle) ಮತ್ತು ಜೀವಿತಾವಧಿ ಬೆಂಬಲ (Life cycle support) ಸೇರಿದಂತೆ ನಾಗರಿಕ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು.
  • ಕುಶಲ ಕಾರ್ಮಿಕರ ಸಂಚಾರ (Mobility): ಭಾರತದಿಂದ ರಷ್ಯಾಕ್ಕೆ ಅಗತ್ಯವಿರುವ ನುರಿತ/ಕುಶಲ ಮಾನವಸಂಪನ್ಮೂಲ ರವಾನಿಸಲು ಸಂಚಾರ ಒಪ್ಪಂದ ಹಾಗೂ ಸಹಕಾರ ವೃದ್ಧಿ.
  • ಕ್ಲಿಷ್ಟಕರ ಖನಿಜಗಳು (Critical Minerals): ತಂತ್ರಜ್ಞಾನ ಹಾಗೂ ಕೈಗಾರಿಕೆಗೆ ಅಗತ್ಯವಿರುವ ಪ್ರಮುಖ ಖನಿಜಗಳ ಪೂರೈಕೆ ಮತ್ತು ಸಂಶೋಧನೆಯಲ್ಲಿ ಪಾಲುದಾರಿಕೆ.
  • ರಸಗೊಬ್ಬರ ವಲಯ: ಜಂಟಿ ನಿರ್ವಹಣೆಯ (Strategic JV) ಯೋಜನೆಗಳ ಮೂಲಕ ರಸಗೊಬ್ಬರ ಪೂರೈಕೆ ಹಾಗೂ ಉತ್ಪಾದನಾ ಸಹಕಾರವನ್ನು ನಿರಂತರವಾಗಿ ಕಾಯ್ದುಕೊಳ್ಳುವುದು.

ಇದನ್ನೂ ಓದಿ: ಬ್ರಿಕ್ಸ್ ಹಣಕಾಸು ಸಚಿವರ ಜಂಟಿ ಹೇಳಿಕೆ; ಪರಸ್ಪರ ಹಣಕಾಸು ಮತ್ತು ಆರ್ಥಿಕ ಸಹಕಾರಕ್ಕೆ ಕರೆ

ಈ ಮೇಲಿನವು ಸೇರಿದಂತೆ ಪ್ರಮುಖ ವಿಷಯಗಳನ್ನು ಕುರಿತು ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಮಾತುಕತೆ ನಡೆಸಬಹುದು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us