
ನವದೆಹಲಿ, ಜುಲೈ 31: ಬ್ಯಾಂಕುಗಳ ಬಡ್ಡಿದರ ವಿಚಾರದಲ್ಲಿ ಆರ್ಬಿಐನ ಕಟ್ಟುಪಾಡುಗಳು ಬಿಗಿಯಾಗಿವೆ. ಬ್ಯಾಂಕುಗಳು ಈ ಕಟ್ಟುಪಾಡುಗಳ ಒಳಗೆ ಬಡ್ಡಿ ನಿಗದಿ ಮಾಡಬೇಕು. ಆದರೆ, ಬಲ್ಕ್ ಡೆಪಾಸಿಟ್ (Bulk Deposits) ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ವಲ್ಪ ನಿಯಮ ಸಡಿಲಿಸಿದೆ. ಬ್ಯಾಂಕುಗಳಿಗೆ ಬಲ್ಕ್ ಡೆಪಾಸಿಟ್‌ಗಳ (ಬೃಹತ್ ಠೇವಣಿಗಳು) ಮೇಲಿನ ಬಡ್ಡಿದರಗಳ ನಿಯಮದಲ್ಲಿ ಪ್ರಮುಖ ಬದಲಾವಣೆ ತಂದಿದೆ. ಬಲ್ಕ್ ಡೆಪಾಸಿಟ್‌ಗಳಿಗೆ ಲಿಕಿಡಿಟಿ ಕವರೇಜ್ ರೇಶಿಯೋ (LCR) ಚೌಕಟ್ಟಿನಡಿಯಲ್ಲಿ ವಿಭಿನ್ನ ಬಡ್ಡಿದರಗಳನ್ನು (Differential Rates) ನೀಡಲು ಅವಕಾಶ ಮಾಡಿಕೊಟ್ಟಿದೆ. ಠೇವಣಿದಾರರ ವರ್ಗಗಳು (Retail vs Non-Retail / Wholesale) ಮತ್ತು ಆ ಠೇವಣಿಗಳಲ್ಲಿ ಇರುವ ಲಿಕ್ವಿಡಿಟಿ ರಿಸ್ಕ್ ಅನ್ನು (Liquidity Risk / Run-off rate) ಆಧರಿಸಿ ಬ್ಯಾಂಕುಗಳು ಬೇರೆ ಬೇರೆ ಬಡ್ಡಿದರಗಳನ್ನು ನಿರ್ಧರಿಸಬಹುದು.
ಈ ಹೊಸ ತಿದ್ದುಪಡಿ ನಿರ್ದೇಶನಗಳು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಸ್ವದೇಶಿ ರೂಪಾಯಿ ಬಲ್ಕ್ ಡೆಪಾಸಿಟ್ಗಳು ಹಾಗೂ ಅನಿವಾಸಿ ಭಾರತೀಯರ (Non-Resident) ರೂಪಾಯಿ ಠೇವಣಿಗಳೆರಡಕ್ಕೂ ಇದು ಅನ್ವಯಿಸುತ್ತದೆ.
ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ
ಬ್ಯಾಂಕುಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನ ಬೆಳಗ್ಗೆ 10:00ರಿಂದ 10:10ರೊಳಗೆ ಬಲ್ಕ್ ಠೇವಣಿಗಳ ಬಡ್ಡಿದರಗಳ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸುವುದು ಕಡ್ಡಾಯವಾಗಿದೆ.
ಒಮ್ಮೆ ವೇಳಾಪಟ್ಟಿ ಪ್ರಕಟಿಸಿದ ನಂತರ, ಅದೇ ದಿನಾಂಕ ಮತ್ತು ಅದೇ ಮೊತ್ತದ ಠೇವಣಿಗಳಿಗೆ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಯಾವುದೇ ತಾರತಮ್ಯವಿಲ್ಲದೆ ಒಂದೇ ರೀತಿಯ ಬಡ್ಡಿದರ ನೀಡಬೇಕಾಗುತ್ತದೆ.
ಇದನ್ನೂ ಓದಿ: Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ
ಬ್ಯಾಂಕುಗಳಲ್ಲಿ ಸಾಲದ ಬೆಳವಣಿಗೆಗೆ (Credit growth) ಹೋಲಿಸಿದರೆ ಠೇವಣಿ ಸಂಗ್ರಹಣೆಯ ವೇಗ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕುಗಳಿಗೆ ಲಿಕ್ವಿಡಿಟಿ ಆಧಾರಿತವಾಗಿ ಠೇವಣಿ ಆಕರ್ಷಿಸಲು ಹೆಚ್ಚಿನ ಅವಕಾಶ (Flexibility) ನೀಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ