ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್: ಅಮೆರಿಕವನ್ನು ಹಿಂದಿಕ್ಕಿದ ಚೀನಾ

China overtakes US to become largest trading partner with India: ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ ಎಂದು ಚೀನಾ ರಾಯಭಾರ ಕಚೇರಿ ವಕ್ತಾರ ಶು ಫೇಹೂಂಗ್ ಹೇಳಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಫೆಬ್ರುವರೆಗೆ ಭಾರತದೊಂದಿಗೆ ಚೀನಾ ಮತ್ತು ಅಮೆರಿಕ ನಡೆಸಿದ ವ್ಯಾಪಾರ ವಹಿವಾಟುಗಳ ದತ್ತಾಂಶವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್: ಅಮೆರಿಕವನ್ನು ಹಿಂದಿಕ್ಕಿದ ಚೀನಾ
ಹಣ
Image Credit source: Shutterstock

Updated on: Apr 08, 2026 | 4:11 PM

ನವದೆಹಲಿ, ಏಪ್ರಿಲ್ 8: ಚೀನಾ (China) 2025-26ರ ಹಣಕಾಸು ವರ್ಷದಲ್ಲಿ ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಎನಿಸಿದೆ. ಈ ವಿಚಾರದಲ್ಲಿ ಅಮೆರಿಕವನ್ನು ಚೀನಾ ಹಿಂದಿಕ್ಕಿದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಶು ಫೇಹೋಂಗ್ ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷದ ಮೊದಲ 11 ತಿಂಗಳ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಅವರು ಈ ಟ್ವೀಟ್ ಮಾಡಿದ್ದಾರೆ.

2025ರ ಏಪ್ರಿಲ್​ನಿಂದ 2026ರ ಫೆಬ್ರುವರಿವರೆಗಿನ 11 ತಿಂಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ 127.8 ಬಿಲಿಯನ್ ಡಾಲರ್​ನಷ್ಟು ಇತ್ತು. ಅದೇ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವೆ 137 ಬಿಲಿಯನ್ ಡಾಲರ್ ವ್ಯಾಪಾರ ನಡೆದಿದೆ. ಸತತ 11 ತಿಂಗಳು ಭಾರತಕ್ಕೆ ಚೀನಾವೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆಗಿರುವುದು ಸಂತೋಷದ ಸಂಗತಿ ಎಂದು ಚೀನಾ ರಾಯಭಾರ ವಕ್ತಾರರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಎರಡು ತಿಂಗಳ ಹಿಂದೆ, ಇರಾನ್ ಯುದ್ಧಕ್ಕೆ ಮೊದಲು ಮುಂಬೈನಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಆದ ಖಿನ್ ಜೀ ಅವರು ಭಾರತ ಹಾಗೂ ಚೀನಾ ದೇಶಗಳ ಆರ್ಥಿಕ ಬೆಳವಣಿಗೆ ಕುರಿತ ಮಾತನಾಡಿದ್ದರು. ಈ ಎರಡು ದೇಶಗಳು ದೊಡ್ಡ ಆರ್ಥಿಕತೆ ಹೊಂದಿವೆ. ಬಹುಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ಬೆಂಬಲಿಸುತ್ತವೆ. ಹೀಗಾಗಿ, ಬಾಹ್ಯ ಪರಿಣಾಮಗಳಿಂದ ಭಾರತ ಮತ್ತು ಚೀನಾ ವ್ಯಾಪಾರ ಕುಂಠಿತಗೊಳ್ಳುವುದಿಲ್ಲ ಎಂದು ಹೇಳಿದ್ದರು.

ಶು ಫೆಹೋಂಗ್ ಅವರ ಟ್ವೀಟ್

ಚೀನಾ ಭಾರತದ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಎನಿಸಿದರೂ, ಎರಡು ದೇಶಗಳ ನಡುವಿನ ವ್ಯಾಪಾರ ಅಂತರ ಬಹಳ ಅಗಾಧವಾಗಿದೆ. ಚೀನಾ ಎದುರು ಭಾರತ ವಿಪರೀತ ಟ್ರೇಡ್ ಡೆಫಿಸಿಟ್ ಹೊಂದಿದೆ. ಆದರೆ, ಅಮೆರಿಕ ಎದುರು ಭಾರತ ಟ್ರೇಡ್ ಸರ್​ಪ್ಲಸ್ ಸ್ಥಿತಿ ಹೊಂದಿದೆ.

ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

2025-26ರ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜನವರಿವರೆಗೆ ಚೀನಾಗೆ ಭಾರತ ರಫ್ತು ಮಾಡಿದ್ದು 15.88 ಬಿಲಿಯನ್ ಡಾಲರ್. ಆದರೆ, ಆಮದು ಮಾಡಿಕೊಂಡಿದ್ದು 108.18 ಬಿಲಿಯನ್ ಡಾಲರ್. ಈ ಅವಧಿಯಲ್ಲಿ ಅಮೆರಿಕಕ್ಕೆ ಭಾರತ 73.7 ಬಿಲಿಯನ್ ಡಾಲರ್ ರಫ್ತು ಮಾಡಿದರೆ, 44.1 ಬಿಲಿಯನ್ ಡಾಲರ್ ಮಾತ್ರವೇ ಆಮದು ಮಾಡಿಕೊಂಡಿರುವುದು. ಹೀಗಾಗಿ, ಭಾರತಕ್ಕೆ ಅಮೆರಿಕ ಮುಖ್ಯವಾದ ಟ್ರೇಡಿಂಗ್ ಪಾರ್ಟ್ನರ್ ಮಾತ್ರವಲ್ಲ, ಅತಿದೊಡ್ಡ ರಫ್ತು ಮಾರುಕಟ್ಟೆಯೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Wed, 8 April 26

Follow Us