ಚೀನಾದ ಡೀಪ್​ಸೀಕ್ ಎಐ ಮಾಡಲ್ ಬಳಸಿ ಸೈಬರ್ ದಾಳಿಗಳನ್ನು ನಡೆಸುತ್ತಿರುವ ಹ್ಯಾಕರ್​ಗಳು: ಆತಂಕ ಮೂಡಿಸಿದ ವರದಿಗಳು

Hackers are using China’s Deepseek AI model to increase cyberattacks: ಚೀನಾದ ಡೀಪ್​ಸೀಕ್ ಎಐ ಮಾಡಲ್​ನ ತಂತ್ರಜ್ಞಾನ ಶಕ್ತಿಯು ಹ್ಯಾಕರ್​ಗಳ ಪಾಲಿಗೆ ದೊಡ್ಡ ಅಸ್ತ್ರವಾಗಿ ಪರಿಗಣಮಿಸಿದೆ. ಡೀಪ್​ಸೀಕ್ ಬಳಸಿ ಹ್ಯಾಕರ್​ಗಳು ಸೈಬರ್ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಕೆಲ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳ ವರದಿಗಳು ಎಚ್ಚರಿಸಿವೆ. ಸೈಬರ್ ಭದ್ರತಾ ಲೋಪ ಇರುವ ಸಿಸ್ಟಂಗಳನ್ನು ಎಐ ಏಜೆಂಟ್​ಗಳು ಜಾಲಾಡಿ ಜರಡಿ ಹಿಡಿದು, ಹ್ಯಾಕ್ ಮಾಡಲು ನೆರವಾಗುತ್ತವೆ ಎನ್ನಲಾಗಿದೆ.

ಚೀನಾದ ಡೀಪ್​ಸೀಕ್ ಎಐ ಮಾಡಲ್ ಬಳಸಿ ಸೈಬರ್ ದಾಳಿಗಳನ್ನು ನಡೆಸುತ್ತಿರುವ ಹ್ಯಾಕರ್​ಗಳು: ಆತಂಕ ಮೂಡಿಸಿದ ವರದಿಗಳು
ಸೈಬರ್ ಕ್ರೈಮ್
Image Credit source: Getty Images

Updated on: Aug 25, 2026 | 12:58 PM

ನವದೆಹಲಿ, ಆಗಸ್ಟ್ 25: ಸೈಬರ್ ದಾಳಿಗಳನ್ನು ನಡೆಸಲು ಹ್ಯಾಕರ್‌ಗಳು ಚೀನಾದ ‘ಡೀಪ್‌ಸೀಕ್’ (DeepSeek) ಎಐ ಮಾದರಿಯನ್ನು ಬಳಸುತ್ತಿದ್ದಾರೆ ಎನ್ನುವಂತಹ ವರದಿ ಬಂದಿದೆ. ಚೀನಾದ ಹ್ಯಾಕರ್​ಗಳು ಸ್ವಯಂಚಾಲಿತ ಸೈಬರ್ ದಾಳಿಗಳನ್ನು (Autonomous Cyberattacks) ಆಯೋಜಿಸಿರುವುದು ಪತ್ತೆಯಾಗಿದೆ. ‘ನೈತ್’ (knaithe) ಮತ್ತು ‘ಕೆಎನ್‌ಯುವಾನ್’ (KnYuan) ಮುಖವಾಡ ಧರಿಸಿರುವ ಚೀನಾದ ಸೈಬರ್ ದಾಳಿಕೋರರು, ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಸರ್ವರ್‌ಗಳು ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಡೀಪ್‌ಸೀಕ್‌ನ ಎಐ ಮಾದರಿಗಳನ್ನು ಬಳಸಿರುವುದು ಸೈಬರ್ ಭದ್ರತಾ ಸಂಸ್ಥೆಯಾದ ‘ಪಾಲೋ ಆಲ್ಟೊ ನೆಟ್‌ವರ್ಕ್ಸ್’ನ (Unit 42) ತನಿಖೆಯಿಂದ ಬೆಳಕಿಗೆ ಬಂದಿದೆ. ತೈವಾನ್​ನ TeamT5 ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಹರ್ಮೆಸ್ ಏಜೆಂಟ್ ಬಳಕೆ: ಹ್ಯಾಕರ್‌ಗಳು ‘ಹರ್ಮೆಸ್ ಏಜೆಂಟ್’ (Hermes Agent) ಎಂಬ ಓಪನ್ ಸೋರ್ಸ್ ಎಐ ಫ್ರೇಮ್‌ವರ್ಕ್ ಅನ್ನು ಡೀಪ್‌ಸೀಕ್‌ನೊಂದಿಗೆ ಜೋಡಿಸಿ, ಟೆಲಿಗ್ರಾಮ್ ಮೂಲಕ ಸ್ವಯಂಚಾಲಿತ ದಾಳಿಗಳನ್ನು ಸಂಘಟಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

ದಾಳಿಯ ವೇಗ ಮತ್ತು ವ್ಯಾಪ್ತಿ ಹೆಚ್ಚಳ: ಈ ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದ ಹ್ಯಾಕರ್‌ಗಳು ಕಡಿಮೆ ಮಾನವ ಹಸ್ತಕ್ಷೇಪದೊಂದಿಗೆ ಅತ್ಯಂತ ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ದುರ್ಬಲ ಸರ್ವರ್‌ಗಳನ್ನು ಪತ್ತೆಹಚ್ಚಿ ದಾಳಿ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ ಈ ದಾಖಲೆ ಇದ್ರೆ ಸಾಕು, ಆಯುಷ್ಮಾನ್ ಕಾರ್ಡ್‌ಗೆ ಇ-ಕೆವೈಸಿ ಮಾಡೋದು ಸುಲಭ

ಎಐ ತಂತ್ರಜ್ಞಾನಗಳು ಸೈಬರ್ ಭದ್ರತೆಗೆ ಸಹಾಯ ಮಾಡುವುದರ ಜೊತೆಗೆ, ದುಷ್ಕರ್ಮಿಗಳು GitHub ನಿಂದ ಅಪಾಯಕಾರಿ ಎಕ್ಸ್‌ಪ್ಲಾಯಿಟ್ ಕೋಡ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ತಂತ್ರಜ್ಞಾನದ ಜ್ಞಾನವಿಲ್ಲದವರೂ ಸಹ ವಿನಾಶಕಾರಿ ದಾಳಿಗಳನ್ನು ರೂಪಿಸಲು ಈ ಮಾದರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಎಚ್ಚರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Tue, 25 August 26

Loading...
Unable to load recommendations.
Follow Us