Cryptocurrency: ಭಾರತದಲ್ಲಿ ಕ್ರಿಪ್ಟೋ ನಿಷೇಧ ಅನುಮಾನ; ಆದರೆ ವಹಿವಾಟು ಮಾಡದಿರುವುದಕ್ಕೆ ಸರ್ಕಾರದ ಯೋಜನೆ

| Updated By: Srinivas Mata

Updated on: Nov 19, 2021 | 6:29 PM

ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳು ಸಂಪೂರ್ಣ ನಿಷೇಧ ಸಾಧ್ಯವಿಲ್ಲ. ಆದರೆ ವಹಿವಾಟು ನಡೆಸದಂತೆ ನಿರುತ್ತೇಜಿಸಲು ಸರ್ಕಾರವು ಯೋಜನೆ ರೂಪಿಸಿದೆ.

Cryptocurrency: ಭಾರತದಲ್ಲಿ ಕ್ರಿಪ್ಟೋ ನಿಷೇಧ ಅನುಮಾನ; ಆದರೆ ವಹಿವಾಟು ಮಾಡದಿರುವುದಕ್ಕೆ ಸರ್ಕಾರದ ಯೋಜನೆ
ಸಾಂದರ್ಭಿಕ ಚಿತ್ರ
Follow us on

ಕಳೆದ ಕೆಲವು ತಿಂಗಳಲ್ಲಿ ಭಾರತದಲ್ಲಿ ಸದ್ದಿಲ್ಲದೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಅರಳುತ್ತಾ ಇದೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಪದೇಪದೇ ಆತಂಕ ವ್ಯಕ್ತವಾದ ಮೇಲೆ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಗಂಭೀರವಾದ ಆಲೋಚನೆ ಶುರುವಾಗಿದೆ. ಯಾವುದೇ ಮಿತಿಯಿಲ್ಲದೆ ಕ್ರಿಪ್ಟೋಕರೆನ್ಸಿಯನ್ನು ಹೂಡಿಕೆದಾರರು ಇರಿಸಿಕೊಳ್ಳಲು ಸಾಧ್ಯವಾಗದಂತೆ ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ಮುಂದಾಗಿದೆ. ಆದರೆ ಸರ್ಕಾರವು ಈ ಹಿಂದೆ ಯೋಜನೆ ರೂಪಿಸಿದಂತೆ ಕ್ರಿಪ್ಟೋ ಕಾಯಿನ್​ಗಳನ್ನು ಸಂಪೂರ್ಣ ನಿಷೇಧಿಸುವುದು ಇಷ್ಟವಿಲ್ಲ. ಏಕೆಂದರೆ, ಪ್ರಪಂಚ ಹೇಗೆ ಬದಲಾಗುತ್ತಿದೆಯೋ ಅದಕ್ಕೆ ತಕ್ಕಂತೆ ಸಾಗುವುದಕ್ಕೆ ಸರ್ಕಾರ ಬಯಸುತ್ತದೆ. ಸಿಡ್ನಿಯಲ್ಲಿ ನಡೆದ ಮುಖ್ಯ ಭಾಷಣದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಆಗಿ ಮಾತನಾಡುತ್ತಿದ್ದಾಗ ದಿನಗಳ ಹಿಂದೆ ಸ್ಪಷ್ಟವಾಗಿ ಇದೇ ವಿಚಾರವನ್ನು ಹೇಳಿದ್ದರು.

ವರದಿಗಳ ಪ್ರಕಾರ, ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್​ ಆದ ಮತ್ತು ವಹಿವಾಟು ನಡೆಸುತ್ತಿರುವ ಹಾಗೂ ಅಧಿಕಾರಿಗಳಿಂದ ಪ್ರೀ- ಅಪ್ರೂವ್​ ಆದ ಕ್ರಿಪ್ಟೋಕರೆನ್ಸಿಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಈ ಪ್ರಕ್ರಿಯೆಯು ತೊಡಕಾಗಿದೆ, ಆದರೆ ಉದ್ದೇಶಪೂರ್ವಕವಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳು ಸುದ್ದಿ ಸಂಸ್ಥೆಗೆ ಬಹಿರಂಗಪಡಿಸಿವೆ. “ಸರ್ಕಾರದಿಂದ ಕಾಯಿನ್​ಗೆ ಮಂಜೂರಾತಿ ಸಿಕ್ಕಲ್ಲಿ ಮಾತ್ರ ವಹಿವಾಟು ನಡೆಸಲು ಸಾಧ್ಯ. ಇಲ್ಲದಿದ್ದಲ್ಲಿ ಕ್ರಿಪ್ಟೋಕರೆನ್ಸಿ ಇಟ್ಟುಕೊಳ್ಳುವುದು ಅಥವಾ ವಹಿವಾಟು ನಡೆಸುವುದಕ್ಕೆ ದಂಡ ಬೀಳುವುದು ಸಾಧ್ಯವಿದೆ,” ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ತಿಳಿಸಿದೆ.

ಸಂಪೂರ್ಣ ನಿಷೇಧದ ಬದಲಿಗೆ ನಿಯಂತ್ರಣ
ನವೆಂಬರ್​ 18ರ ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಕ್ರಿಪ್ಟೋಕರೆನ್ಸಿಗಳು “ತಪ್ಪಾದ ಕೈಗೆ ಸಿಕ್ಕಿಕೊಂಡು ನಮ್ಮ ಯುವಜನರನ್ನು ಹಾಳು ಮಾಡಬಾರದು,” ಎಲ್ಲ ಪ್ರಜಾಪ್ರಭುತ್ವ ದೇಶಗಳು ಒಟ್ಟಾಗಬೇಕು ಮತ್ತು ಇಂಥದ್ದು ಆಗದಂತೆ ಖಾತ್ರಿಪಡಿಸಬೇಕು ಎಂದಿದ್ದರು. ಸರ್ಕಾರ ಮತ್ತು ಆರ್​ಬಿಐ ಈಚೆಗೆ ಸುಳಿವು ನೀಡಿ, ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟುವ ಸಲುವಾಗಿ ಸಂಪೂರ್ಣವಾಗಿ ನಿಷೇಧ ಮಾಡುವ ಬದಲಿಗೆ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ಪ್ರಬಲ ನಿಯಂತ್ರಕರನ್ನು ನಿಯೋಜಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ವರದಿಗಳ ಪ್ರಕಾರ, ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಕಾನೂನು ಪರಿಚಯಿಸಲು ಮತ್ತು ಈ ತಿಂಗಳಿನಲ್ಲಿ ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಅನುಮೋದಿಸಲು ಸರ್ಕಾರ ಗುರಿ ಹಾಕಿಕೊಂಡಿದೆ. ಇಂಥ ಪೂರ್ವ ದೃಢೀಕರಣ ಧೋರಣೆಯು ಸಾವಿರಾರು ಕ್ರಿಪ್ಟೋಕರೆನ್ಸಿಗಳಿಗೆ ತಡೆಯನ್ನು ಸೃಷ್ಟಿಸುತ್ತದೆ. ಅವುಗಳು ಈಗ ನಿಯಂತ್ರಕ ಸಂಸ್ಥೆಯ ನಿಗಾ ವ್ಯವಸ್ಥೆಯ ಆಚೆಯಲ್ಲಿದೆ. ಕ್ರಿಪ್ಟೋ ಸ್ವತ್ತು ಇರಿಸಿಕೊಳ್ಳುವುದು, ವಿತರಣೆ, ಮೈನಿಂಗ್, ವಹಿವಾಟು ಮತ್ತು ವರ್ಗಾವಣೆ ಮಾಡಿದಲ್ಲಿ ಅದಕ್ಕೆ ಶಿಕ್ಷೆ ವಿಧಿಸುವ ಬಗ್ಗೆ ಹಾಗೂ ಈ ಸಂಬಂಧವಾಗಿ ಕಾನೂನು ತರುವ ಬಗ್ಗೆ ಆಲೋಚಿಸುತ್ತಿತ್ತು.

ಕ್ಯಾಪಿಟಲ್ ಗೇಯ್ನ್ಸ್​ ಜತೆಗೆ ಇತರ ತೆರಿಗೆ
ಆದರೆ ಈ ಕ್ರಿಪ್ಟೋ ಎಕೋಸಿಸ್ಟಮ್ ಉತ್ಕರ್ಷಕ್ಕೆ ಏರುತ್ತಿದ್ದಂತೆ ನಿರ್ಧಾರವು ಬದಲಾಗಿದೆ. ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಉತ್ತೇಜನ ನೀಡದಿರಲು ಕ್ಯಾಪಿಟಲ್​ ಗೇಯ್ನ್ಸ್​ ಮೇಲೆ ಇತರ ತೆರಿಗೆ ವಿಧಿಸುವ ಚಿಂತನೆ ಇದೆ. ಈ ತನಕ ಕ್ರಿಪ್ಟೋ ಗಳಿಕೆ ಮೇಲೆ ಶೇ 40ರಷ್ಟು ಪಾವತಿಸಬೇಕು. ಇದರ ಜತೆಗೆ ಜಿಎಸ್​ಟಿ, ಸೆಕ್ಯೂರಿಟೀಸ್​ ಟ್ರಾನ್ಸಾಕ್ಷನ್​ ತೆರಿಗೆಯನ್ನು ಕ್ಯಾಪಿಟಲ್​ ಗೇಯ್ನ್ಸ್​ ಮೇಲೆ ಪಾವತಿಸಬೇಕಾಗಬಹುದು ಎಂದು ಹೆಸರು ಹೇಳಲು ಇಚ್ಛಿಸದ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಮುಂಬರುವ ಕಾಯ್ದೆಯು ಕ್ರಿಪ್ಟೋಕರೆನ್ಸಿಗಳ ಮೇಲಿನ ತೆರಿಗೆಯ ಭಾಗವನ್ನು ನಿರ್ಧರಿಸಲು ಹೊಂದಿಸಲಾಗಿದೆ. ಇದು ಶೇಕಡಾ 1ರಷ್ಟಿದೆ. ಕ್ರಿಪ್ಟೋಕರೆನ್ಸಿಯೊಂದಿಗೆ ವ್ಯಾಪಾರ ಮಾಡುವ ಪ್ಲಾಟ್‌ಫಾರ್ಮ್‌ಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾಗಿ ವರ್ಗೀಕರಿಸಬಹುದು. ಕ್ರಿಪ್ಟೋಕರೆನ್ಸಿ ಕುರಿತ ಪ್ರಸ್ತಾವಿತ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ. ಕಳೆದ ವಾರ ಡಿಜಿಟಲ್ ಟೋಕನ್‌ಗಳ ನಿಯಂತ್ರಣದ ಕುರಿತು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಹಿನ್ನೆಲೆಯಲ್ಲಿ ಕ್ರಿಪ್ಟೋಕರೆನ್ಸಿ ಕುರಿತು ನರೇಂದ್ರ ಮೋದಿಯವರ ಮೊದಲ ಅಭಿಪ್ರಾಯ ಬಂದಿದೆ. ಕ್ರಿಪ್ಟೋಕರೆನ್ಸಿಗಳಿಗೆ ಭಾರತದಲ್ಲಿ ಇನ್ನೂ ತೆರಿಗೆ ವಿಧಿಸಲಾಗಿಲ್ಲ, ಆದರೆ ಅಧಿಕೃತ ಕರೆನ್ಸಿಯಾಗಿ ಗುರುತಿಸಿಲ್ಲ.

ಆದರೆ, ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಕ್ರಿಪ್ಟೋಕರೆನ್ಸಿಗಳನ್ನು ಭಾರತದಲ್ಲಿ ನಿಷೇಧಿಸುವ ಬದಲು ಆಸ್ತಿ ವರ್ಗವಾಗಿ ಅನುಮತಿಸಬಹುದು. ಇದರರ್ಥ ವಹಿವಾಟುಗಳನ್ನು ಇತ್ಯರ್ಥಗೊಳಿಸಲು ಮಾನ್ಯವಾದ ಕರೆನ್ಸಿ ಎಂದು ಗುರುತಿಸಲು ಆಗುವುದಿಲ್ಲ. ಆದರೆ ಚಿನ್ನ, ಷೇರು ಅಥವಾ ಬಾಂಡ್‌ನಂತಹ ಆಸ್ತಿಯಾಗಿ ಇರಿಸಬಹುದು.

ಇದನ್ನೂ ಓದಿ: Sydney Dialogue: ಕ್ರಿಪ್ಟೋಕರೆನ್ಸಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ ಮೋದಿ; ದುರ್ಬಳಕೆ ತಡೆಯಲು ಒಗ್ಗಟ್ಟಾಗುವಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಕರೆ