Curved Display: ಮಾರುಕಟ್ಟೆಯಲ್ಲಿ ಕಣ್ಮರೆಯಾಗುತ್ತಿವೆ ಕರ್ವ್ಡ್ ಡಿಸ್‌ಪ್ಲೇ ಫೋನ್‌ಗಳು: ಈ ಟ್ರೆಂಡ್‌ ಕಡಿಮೆಯಾಗುತ್ತಿರುವುದೇಕೆ?

ಒಂದು ಕಾಲದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಆಕರ್ಷಣೆಯಾಗಿದ್ದ ಕರ್ವ್ಡ್ ಡಿಸ್‌ಪ್ಲೇ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಆ್ಯಪ್‌ಗಳ ಬಟನ್‌ ಬಳಸುವಾಗ ಟಚ್‌ ಸಮಸ್ಯೆ, ಸ್ಕ್ರೀನ್‌ ಗಾರ್ಡ್‌ ಅಳವಡಿಸುವ ತೊಂದರೆ ಮತ್ತು ವೀಡಿಯೊ ವೀಕ್ಷಿಸುವಾಗ ಅಂಚಿನ ದೃಶ್ಯದಲ್ಲಿ ವ್ಯತ್ಯಾಸ ಸೇರಿದಂತೆ ಕೆಲವು ಕಾರಣಗಳಿಂದ ಫ್ಲ್ಯಾಟ್ ಡಿಸ್‌ಪ್ಲೇಗೆ ಬೇಡಿಕೆ ಹೆಚ್ಚುತ್ತಿದೆ.

Curved Display: ಮಾರುಕಟ್ಟೆಯಲ್ಲಿ ಕಣ್ಮರೆಯಾಗುತ್ತಿವೆ ಕರ್ವ್ಡ್ ಡಿಸ್‌ಪ್ಲೇ ಫೋನ್‌ಗಳು: ಈ ಟ್ರೆಂಡ್‌ ಕಡಿಮೆಯಾಗುತ್ತಿರುವುದೇಕೆ?
Curved Display Smartphone
Edited By:

Updated on: Oct 02, 2026 | 11:14 AM

ಮುಖ್ಯಾಂಶಗಳು

  • ಕರ್ವ್ಡ್ ಡಿಸ್‌ಪ್ಲೇ ಫೋನ್‌ಗಳ ಟ್ರೆಂಡ್‌ ಏಕೆ ಕಡಿಮೆಯಾಗುತ್ತಿದೆ?
  • ಆಕರ್ಷಕವಾದ ಕರ್ವ್ಡ್ ಸ್ಕ್ರೀನ್‌ನಲ್ಲಿರುವ ಈ ಸಮಸ್ಯೆಗಳು ನಿಮಗೆ ಗೊತ್ತೇ?
  • ಫ್ಲ್ಯಾಟ್ ಸ್ಕ್ರೀನ್‌ಗಿಂತ ಕರ್ವ್ಡ್ ಡಿಸ್‌ಪ್ಲೇ ಏಕೆ ಹಿಂದೆ ಬೀಳುತ್ತಿದೆ?

ಒಂದು ಕಾಲದಲ್ಲಿ ದುಬಾರಿ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ (Smartphones) ಪ್ರಮುಖ ಗುರುತಾಗಿದ್ದ ಕರ್ವ್ಡ್ ಡಿಸ್‌ಪ್ಲೇ ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಡಿಸ್​ಪ್ಲೇಯ ಅಂಚುಗಳು ಬದಿಗೆ ಬಾಗಿರುವ ಈ ವಿನ್ಯಾಸ ನೋಡಲು ಆಕರ್ಷಕವಾಗಿರಬಹುದು. ಆದರೆ ದಿನನಿತ್ಯದ ಬಳಕೆಯಲ್ಲಿ ಕೆಲವು ತೊಂದರೆಗಳು ಎದುರಾಗುವುದರಿಂದ ಹಲವು ಸ್ಮಾರ್ಟ್‌ಫೋನ್‌ ಕಂಪನಿಗಳು ಮತ್ತೆ ಫ್ಲ್ಯಾಟ್ ಡಿಸ್‌ಪ್ಲೇಯತ್ತ ಗಮನ ಹರಿಸುತ್ತಿವೆ.

ಆ್ಯಪ್ ಬಳಸುವಾಗ ಸಮಸ್ಯೆಯಾಗಬಹುದು

ಕರ್ವ್ಡ್ ಡಿಸ್‌ಪ್ಲೇಯಲ್ಲಿ ಪರದೆಯ ಅಂಚುಗಳು ಬಾಗಿರುವುದರಿಂದ ಕೆಲವು ಆ್ಯಪ್‌ಗಳ ಬಳಕೆಯಲ್ಲಿ ತೊಂದರೆ ಎದುರಾಗಬಹುದು. ಕೆಲವು ಆ್ಯಪ್‌ಗಳ ಬಟನ್‌ಗಳು ಅಥವಾ ಆಯ್ಕೆಗಳು ಪರದೆಯ ಅಂಚಿನಲ್ಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಬಾಗಿದ ಭಾಗದಲ್ಲಿರುವ ಬಟನ್‌ ಅನ್ನು ಸ್ಪರ್ಶಿಸಿದಾಗ ಟಚ್‌ ಸರಿಯಾಗಿ ದಾಖಲಾಗದ ಸಾಧ್ಯತೆ ಇದೆ.

ಅದೇ ರೀತಿ, ಪರದೆಯ ಅಂಚಿನಿಂದ ಸ್ವೈಪ್‌ ಮಾಡುವಾಗಲೂ ಕೆಲವೊಮ್ಮೆ ತೊಂದರೆ ಎದುರಾಗಬಹುದು. ಫೋನ್‌ ಹಿಡಿದಿರುವಾಗ ಬೆರಳು ಅಥವಾ ಅಂಗೈ ಪರದೆಯ ಬಾಗಿದ ಭಾಗವನ್ನು ಸ್ಪರ್ಶಿಸುವುದರಿಂದ ನೀವು ಒತ್ತಲು ಉದ್ದೇಶಿಸದ ಬಟನ್‌ ಅಥವಾ ಆಯ್ಕೆಯ ಮೇಲೆ ತಪ್ಪಾಗಿ ಸ್ಪರ್ಶವಾಗುವ ಸಾಧ್ಯತೆಯೂ ಇರುತ್ತದೆ.

ಸ್ಕ್ರೀನ್‌ ಗಾರ್ಡ್‌ ಹಾಕುವುದು ಸುಲಭವಲ್ಲ

ಕರ್ವ್ಡ್ ಡಿಸ್‌ಪ್ಲೇ ಇರುವ ಫೋನ್‌ಗಳಿಗೆ ಸರಿಯಾದ ಸ್ಕ್ರೀನ್‌ ಗಾರ್ಡ್‌ ಆಯ್ಕೆ ಮಾಡುವುದು ಮತ್ತೊಂದು ಸವಾಲು. ಸಾಮಾನ್ಯ ಫ್ಲ್ಯಾಟ್ ಸ್ಕ್ರೀನ್‌ಗಳಿಗೆ ಬಳಸುವ ಸ್ಕ್ರೀನ್‌ ಗಾರ್ಡ್‌ ಕರ್ವ್ಡ್ ಅಂಚುಗಳನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಕರ್ವ್ಡ್ ಸ್ಕ್ರೀನ್‌ಗಾಗಿ ವಿಶೇಷವಾಗಿ ತಯಾರಿಸಿದ ಗಾರ್ಡ್‌ಗಳು ಲಭ್ಯವಿದ್ದರೂ, ಅವುಗಳನ್ನು ಸರಿಯಾಗಿ ಅಳವಡಿಸುವುದು ಅಥವಾ ಅಂಚುಗಳಲ್ಲಿ ಗಟ್ಟಿಯಾಗಿ ಅಂಟಿಸುವುದು ಕೆಲವೊಮ್ಮೆ ಕಷ್ಟವಾಗಬಹುದು. ಫೋನ್‌ ಕೆಳಗೆ ಬಿದ್ದಾಗಲೂ ಕರ್ವ್ಡ್ ಅಂಚುಗಳು ಹೆಚ್ಚು ತೆರೆದಿರುವುದರಿಂದ ಹಾನಿಯಾಗುವ ಸಾಧ್ಯತೆ ಹೆಚ್ಚಿರಬಹುದು. ಅದರಲ್ಲೂ ಡಿಸ್‌ಪ್ಲೇ ಒಡೆದರೆ ಕರ್ವ್ಡ್ ಪ್ಯಾನೆಲ್‌ ಬದಲಿಸುವ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ.

ವೀಡಿಯೊ ನೋಡುವಾಗ ಅಂಚಿನ ಚಿತ್ರದಲ್ಲಿ ವ್ಯತ್ಯಾಸ

ಕರ್ವ್ಡ್ ಡಿಸ್‌ಪ್ಲೇಯ ಮತ್ತೊಂದು ಸಮಸ್ಯೆ ವೀಡಿಯೊ ಅಥವಾ ಇತರ ದೃಶ್ಯಗಳನ್ನು ವೀಕ್ಷಿಸುವಾಗ ಕಾಣಿಸಬಹುದು. ಪರದೆಯ ಅಂಚು ಬಾಗಿರುವ ಕಾರಣ ಆ ಭಾಗದಲ್ಲಿರುವ ದೃಶ್ಯ ಸ್ವಲ್ಪ ಬಾಗಿದಂತೆ ಅಥವಾ ಸರಿಯಾದ ರೀತಿಯಲ್ಲಿ ಕಾಣದಿರುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಅಂಚಿನಲ್ಲಿರುವ ದೃಶ್ಯಭಾಗ ವೀಕ್ಷಣೆಗೆ ಅಷ್ಟು ಸ್ಪಷ್ಟವಾಗಿರದಿರಬಹುದು.

Redmi 17C 5G: 6000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ರೆಡ್ಮಿ 17C 5G ಬಿಡುಗಡೆ; ಬೆಲೆ ಕೇವಲ 20,999

ಹಾಗಾದರೆ ಕರ್ವ್ಡ್ ಡಿಸ್‌ಪ್ಲೇ ಏಕೆ ಜನಪ್ರಿಯವಾಗಿತ್ತು?

ಕರ್ವ್ಡ್ ಡಿಸ್‌ಪ್ಲೇಗೆ ಕೆಲವು ಅನುಕೂಲಗಳೂ ಇದ್ದವು. ಪರದೆಯ ಅಂಚುಗಳು ಬದಿಗೆ ವಿಸ್ತರಿಸಿರುವುದರಿಂದ ಫೋನ್‌ ಹೆಚ್ಚು ಆಕರ್ಷಕವಾಗಿ ಮತ್ತು ತೆಳುವಾಗಿ ಕಾಣುತ್ತಿತ್ತು. ಜೊತೆಗೆ, ಸ್ಕ್ರೀನ್‌ ಮತ್ತು ಫೋನ್‌ನ ಅಂಚಿನ ನಡುವಿನ ಗಡಿ ಕಡಿಮೆಯಾದಂತೆ ಕಾಣುವುದರಿಂದ ದೊಡ್ಡ ಡಿಸ್‌ಪ್ಲೇ ಇರುವ ಅನುಭವ ಸಿಗುತ್ತಿತ್ತು. ಕೆಲವು ಕಂಪನಿಗಳು ಬಾಗಿದ ಅಂಚುಗಳನ್ನು ಶಾರ್ಟ್‌ಕಟ್‌ಗಳು, ಸಂಪರ್ಕಗಳು ಮತ್ತು ಇತರ ಮಾಹಿತಿಯನ್ನು ತ್ವರಿತವಾಗಿ ತೆರೆಯಲು ಬಳಸಿಕೊಂಡಿದ್ದವು.

ಆದರೆ ದಿನನಿತ್ಯದ ಬಳಕೆಯಲ್ಲಿ ಟಚ್‌ ಸಮಸ್ಯೆ, ಸ್ಕ್ರೀನ್‌ ಗಾರ್ಡ್‌ ಅಳವಡಿಸುವ ತೊಂದರೆ, ಹಾನಿಯಾಗುವ ಸಾಧ್ಯತೆ ಮತ್ತು ದೃಶ್ಯಗಳ ಅಂಚಿನಲ್ಲಿ ಉಂಟಾಗುವ ವ್ಯತ್ಯಾಸದಂತಹ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫ್ಲ್ಯಾಟ್ ಡಿಸ್‌ಪ್ಲೇ ಹೆಚ್ಚು ಪ್ರಾಯೋಗಿಕ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ. ಕರ್ವ್ಡ್ ಡಿಸ್‌ಪ್ಲೇ ಸಂಪೂರ್ಣವಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗಿಲ್ಲವಾದರೂ, ಅದರ ಬಳಕೆ ಹಿಂದಿನಷ್ಟು ವ್ಯಾಪಕವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us