ಐಎಸ್‌ಒ 55001:2024 ಪ್ರಮಾಣೀಕರಣ ಪಡೆದ ಭಾರತದ ಮೊದಲ ಮೆಟ್ರೋ ಸಂಸ್ಥೆ ಡಿಎಂಆರ್​ಸಿ

DMRC gets ISO 55001-2024 certification: ಇನ್​ಫ್ರಾಸ್ಟ್ರಕ್ಚರ್ ಆಸ್ತಿಗಳ ನಿರ್ವಹಣೆಯಲ್ಲಿ ಕ್ಷಮತೆ ತೋರುವುದಕ್ಕೆ ಗುರುತಾಗಿ ನೀಡುವ ಐಎಸ್​ಒ 5501:2024 ಸರ್ಟಿಫಿಕೇಶನ್ ಅನ್ನು ಡಿಎಂಆರ್​ಸಿ ಪಡೆದಿದೆ. ಮುಂಬೈನ ಮೆಟ್ರೋ ಲೈನ್-3 ನಿರ್ವಹಣೆಗಾಗಿ ಡೆಲ್ಲಿ ಮೆಟ್ರೋ ರೈಲ್ ಕಾರ್ಪೊರೇಶನ್​ಗೆ ಈ ಪ್ರಮಾಣೀಕರಣ ಸಿಕ್ಕಿದೆ. ಕೊಲಾಬದಿಂದ ಎಸ್​ಇಇಪಿಝಡ್ ಸಂಪರ್ಕಿಸುವ ಈ ಮೆಟ್ರೋ ಲೈನ್ 33.5 ಕಿಮೀ ಉದ್ದವಿದೆ.

ಐಎಸ್‌ಒ 55001:2024 ಪ್ರಮಾಣೀಕರಣ ಪಡೆದ ಭಾರತದ ಮೊದಲ ಮೆಟ್ರೋ ಸಂಸ್ಥೆ ಡಿಎಂಆರ್​ಸಿ
ಪುಣೆ ಮೆಟ್ರೋ ನಿಲ್ದಾಣವೊಂದರ ಚಿತ್ರ
Image Credit source: PTI

Updated on: Aug 23, 2026 | 4:33 PM

ನವದೆಹಲಿ, ಆಗಸ್ಟ್ 23: ದೆಹಲಿ ಮೆಟ್ರೋ ರೈಲು ನಿಗಮ(DMRC) ಪ್ರತಿಷ್ಠಿತ ISO 55001:2024 ಪ್ರಮಾಣೀಕರಣವನ್ನು ಪಡೆದ ಭಾರತದ ಪ್ರಥಮ ಮೆಟ್ರೋ ಸಂಸ್ಥೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಮುಂಬೈ ಮೆಟ್ರೋ ಲೈನ್-3 ನಿರ್ವಹಣೆಗಾಗಿ ಡಿಎಂಆರ್​ಸಿಗೆ ಈ ಶಹಬ್ಬಾಸ್​ಗಿರಿ ಸಿಕ್ಕಿದೆ. ಈ ಅಂತರರಾಷ್ಟ್ರೀಯ ಪ್ರಮಾಣೀಕರಣವು ಆಸ್ತಿ ನಿರ್ವಹಣಾ ವ್ಯವಸ್ಥೆಗಳಲ್ಲಿ (Asset Management System) ಅತ್ಯುತ್ತಮ ಕಾರ್ಯಕ್ಷಮತೆ, ರಿಸ್ಕ್ ಆಧಾರಿತ ನಿರ್ವಹಣೆ ಮತ್ತು ದೀರ್ಘಕಾಲೀನ ಮೌಲ್ಯವನ್ನು ಬಿಂಬಿಸುತ್ತದೆ.

ಮುಂಬೈ ಮೆಟ್ರೋ ಲೈನ್-3: ಡಿಎಂಆರ್‌ಸಿ ಸದ್ಯ ಮುಂಬೈನ ಕೊಲಾಬಾ, ಬಾಂದ್ರಾ ಮತ್ತು ಎಸ್‌ಇಇಪಿಝಡ್ (SEEPZ) ಸಂಪರ್ಕಿಸುವ 33.5 ಕಿ.ಮೀ. ಉದ್ದದ ಮುಂಬೈ ಮೆಟ್ರೋ ಲೈನ್-3 ಕಾರಿಡಾರ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಮಾರ್ಗದಲ್ಲಿ ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್, ಸಿಗ್ನಲಿಂಗ್, ಟೆಲಿಕಮ್ಯೂನಿಕೇಶನ್ಸ್, ರೈಲ್ವೆ ಸ್ಟೇಷನ್, ಲಿಫ್ಟ್, ಎಸ್ಕಲೇಟರ್, ಟ್ರ್ಯಾಕ್ ಹಾಗೂ ನಾಗರಿಕ ಸೌಕರ್ಯಗಳನ್ನು ನಿರ್ಮಿಸಿ, ಸಮರ್ಪಕವಾಗಿ ನಿರ್ವಹಿಸಿದರೆ ಈ ಸರ್ಟಿಫಿಕೇಶನ್ ಸಿಗುತ್ತದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?

ದೆಹಲಿ ಹೊರತುಪಡಿಸಿ ಇತರೆ ನಗರಗಳ ಮೆಟ್ರೋ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿಯೂ ಡಿಎಂಆರ್‌ಸಿ ತನ್ನ ಪರಿಣತಿಯನ್ನು ವಿಸ್ತರಿಸುತ್ತಿರುವುದಕ್ಕೆ ಈ ಪ್ರಮಾಣೀಕರಣ ಮತ್ತಷ್ಟು ಬಲ ತುಂಬಿದೆ.

ಬೃಹತ್ ಪ್ರಮಾಣದ ಭೌತಿಕ ಮೂಲಸೌಕರ್ಯ ಆಸ್ತಿಗಳ ನಿರ್ವಹಣೆಗೆ ನೀಡುವ ISO 55001 ಪ್ರಮಾಣೀಕರಣಗಳನ್ನು ಉತ್ತರಪ್ರದೆಶ ಮೆಟ್ರೋಲ್ ರೈಲ್ ಕಾರ್ಪೊರೇಶನ್ ಕೂಡ ಪಡೆದಿದೆ. ಆದರೆ, ISO 55001:2024 ಪಡೆದ ಮೊದಲ ಮೆಟ್ರೋ ನಿಗಮ ಡಿಎಂಆರ್​ಸಿಯಾಗಿದೆ.

ಇದನ್ನೂ ಓದಿ: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆ; ಅದಾನಿ ಗ್ರೂಪ್ ಎಲ್1 ಆಗಿ ಆಯ್ಕೆ; ಕುತೂಹಲ ಮೂಡಿಸಿದ ಅದಾನಿ-ಸಿಎಂ ಭೇಟಿ

ಜಪಾನ್​ನ ಸಾಟೊ ಕೋಗ್ಯೋ, ಸುಮಿಟೊಮೊ ಮಿಟ್ಸುಯ್ ಕನ್ಸ್​ಟ್ರಕ್ಷನ್ ಕಂಪನಿ, ಟೋಕ್ಯು ಕನ್ಸ್​ಟ್ರಕ್ಷನ್ ಕಂಪನಿ, ನಿಪ್ಪೋನ್ ಕೋಯಿ ಇತ್ಯಾದಿ ಜಾಗತಿಕ ಸಂಸ್ಥೆಗಳು ಈ ಪ್ರಮಾಣಪತ್ರ ಪಡೆದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us