AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್​ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?

Sugar prices spike by 15pc in one month: ಹಬ್ಬದ ಸೀಸನ್ ಶುರುವಾಗುವ ಮುನ್ನವೇ ಸಕ್ಕರೆ ಬೆಲೆ ಗಗನಕ್ಕೇರತೊಡಗಿದೆ. ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ಇದರ ಬೆಲೆ 5-7 ರೂ ಏರಿದೆ. ಅಂತಾರಾಷ್ಟ್ರೀಯವಾಗಿಯೂ ಎರಡು ತಿಂಗಳಲ್ಲಿ ಸಕ್ಕರೆ ದರ ಶೇ. 16ರಷ್ಟು ಹೆಚ್ಚಿದೆ. ಈ ಆಹಾರವಸ್ತುವಿನ ಬೆಲೆ ಇಷ್ಟು ಏರಲು ಏನು ಕಾರಣ?

ಹಬ್ಬದ ಸೀಸನ್​ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?
ಸಕ್ಕರೆ ಬೆಲೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 23, 2026 | 3:20 PM

Share

ಮುಖ್ಯಾಂಶಗಳು

  • ಹಬ್ಬದ ಸೀಸನ್ ಶುರುವಾಗುವ ಮುನ್ನವೇ ಸಕ್ಕರೆ ಬೆಲೆ ಗಗನಕ್ಕೇರತೊಡಗಿದೆ.
  • ಕಳೆದ ಒಂದು ತಿಂಗಳಲ್ಲಿ ಭಾರತದಲ್ಲಿ ಇದರ ಬೆಲೆ 5-7 ರೂ ಏರಿದೆ.
  • ಅಂತಾರಾಷ್ಟ್ರೀಯವಾಗಿಯೂ ಎರಡು ತಿಂಗಳಲ್ಲಿ ಸಕ್ಕರೆ ದರ ಶೇ. 16ರಷ್ಟು ಹೆಚ್ಚಿದೆ.

ನವದೆಹಲಿ, ಆಗಸ್ಟ್ 23: ಸಮೀಪಿಸುತ್ತಿರುವ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ಕರೆ ಬೆಲೆಯಲ್ಲಿ (Sugar Prices) ತೀವ್ರ ಏರಿಕೆಯಾಗಿದೆ. ಕೇವಲ ಒಂದೇ ತಿಂಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ ಸುಮಾರು ₹5 ರಿಂದ ₹7 (ಅಥವಾ ಶೇ. 20 ರಷ್ಟು) ವರೆಗೆ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ದರವು ಗರಿಷ್ಠ ಮಟ್ಟಕ್ಕೆ ತಲುಪಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಜುಲೈ 20ರಂದು ಸಕ್ಕರೆಯ ಸರಾಸರಿ ಬೆಲೆ ಕಿಲೋಗೆ ₹48.18 ಇತ್ತು. ಒಂದು ತಿಂಗಳ ನಂತರ (ಆಗಸ್ಟ್ 20) ಇದರ ಸರಾಸರಿ ಬೆಲೆ ₹55.70 ಆಗಿದೆ. ಒಂದೇ ತಿಂಗಳಲ್ಲಿ ಶೇ. 15ರಷ್ಟು ಬೆಲೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆ; ಅದಾನಿ ಗ್ರೂಪ್ ಎಲ್1 ಆಗಿ ಆಯ್ಕೆ; ಕುತೂಹಲ ಮೂಡಿಸಿದ ಅದಾನಿ-ಸಿಎಂ ಭೇಟಿ

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು

  • ಉತ್ಪಾದನೆಯಲ್ಲಿ ಇಳಿಕೆ: ಈ ಹಂಗಾಮಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಕ್ಕರೆ ಉತ್ಪಾದನೆ ಆಗದಿರುವುದು ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
  • ಹಬ್ಬದ ಬೇಡಿಕೆ: ಮುಂಬರುವ ಹಬ್ಬಗಳ ಸಾಲಿನಲ್ಲಿ ಸಕ್ಕರೆ ಹಾಗೂ ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ.
  • ಇಥೆನಾಲ್ ಉತ್ಪಾದನೆಗೆ ಬಳಕೆ: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಉತ್ಪನ್ನಗಳನ್ನು ಇಥೆನಾಲ್ ತಯಾರಿಕೆಗೆ ತಿರುಗಿಸಿರುವುದು ಕೂಡ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆಯ ಮೇಲೆ ಕೊಂಚ ವ್ಯತಿರಿಕ್ತ ಪರಿಣಾಮ ಬೀರಿದೆ.
  • ದಾಸ್ತಾನು ಕೊರತೆ ಹಾಗೂ ಊಹಾಪೋಹಗಳು: ದಾಸ್ತಾನು ಕಡಿಮೆಯಾಗಲಿದೆ ಎಂಬ ಆತಂಕದಿಂದ ಮಾರುಕಟ್ಟೆಯಲ್ಲಿ ಊಹಾಪೋಹಗಳು ಹೆಚ್ಚಾಗಿವೆ.

ಜಾಗತಿಕವಾಗಿಯೂ ಸಕ್ಕರೆ ಬೆಲೆಗಳು ಏರಿಕೆ

ಅಂತಾರಾಷ್ಟ್ರೀಯ ಸಕ್ಕರೆ ಬೆಲೆಗಳೂ ಇದೇ ವೇಳೆ ಹೆಚ್ಚಿವೆ. ಸರ್ಕಾರದ ದತ್ತಾಂಶದ ಪ್ರಕಾರ, ಜೂನ್ 30ರಂದು ಅಂತಾರಾಷ್ಟ್ರೀಯ ಸಕ್ಕರೆ ಬೆಲೆ ಟನ್​ಗೆ 474 ಡಾಲರ್ ಇತ್ತು. ಆಗಸ್ಟ್ 20ಕ್ಕೆ ಅದರ ಬೆಲೆ 552 ಡಾಲರ್​ಗೆ ಹೋಗಿದೆ. ಎರಡು ತಿಂಗಳಲ್ಲಿ ಬೆಲೆ ಶೇ. 16ರಷ್ಟು ಏರಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಕ್ಕರೆ ಲಭ್ಯತೆ ಖಚಿತಪಡಿಸಲು ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕೈಗೊಂಡ ವಿವಿಧ ಕ್ರಮಗಳೇನು?

ಸರ್ಕಾರದ ತುರ್ತು ಕ್ರಮಗಳು

ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸರಬರಾಜನ್ನು ಸುಧಾರಿಸಲು ಕೇಂದ್ರ ಸರ್ಕಾರವು ಸಕ್ಕರೆ ದಾಸ್ತಾನು ಮಿತಿ (Stockholding limits) ಸೇರಿದಂತೆ ಅಗತ್ಯ ನಿಯಂತ್ರಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Sun, 23 August 26

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ