Devi Shetty: ಕಡಿಮೆ ಬೆಲೆಗೆ ವೈದ್ಯಕೀಯ ಚಿಕಿತ್ಸೆ ಕೊಡುವ ಡಾ. ದೇವಿಶೆಟ್ಟಿ ಆಸ್ತಿ ರೂ 11,000 ಕೋಟಿಗೂ ಹೆಚ್ಚು; ಅಷ್ಟು ಸಂಪಾದನೆ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ

|

Updated on: May 26, 2023 | 11:13 AM

Net Asset of Dr. Devi Shetty of Narayana Health: ಫೋರ್ಬ್ಸ್ ಪಟ್ಟಿ ಪ್ರಕಾರ ಡಾ. ದೇವಿಶೆಟ್ಟಿ ಅವರ ಆಸ್ತಿ 1.4 ಬಿಲಿಯನ್ ಡಾಲರ್ ಇದೆ. ಅಂದರೆ ರೂ 11,000 ಕೋಟಿಗೂ ಹೆಚ್ಚು. ಬಹಳ ಕಡಿಮೆ ಶುಲ್ಕಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಇವರು ಇಷ್ಟೊಂದು ಆಸ್ತಿ ಹೇಗೆ ಸಂಪಾದಿಸಿದರೆಂಬುದು ಯಾರಿಗಾದರೂ ಆಶ್ಚರ್ಯ ಎನಿಸಬಹುದು.

Devi Shetty: ಕಡಿಮೆ ಬೆಲೆಗೆ ವೈದ್ಯಕೀಯ ಚಿಕಿತ್ಸೆ ಕೊಡುವ ಡಾ. ದೇವಿಶೆಟ್ಟಿ ಆಸ್ತಿ ರೂ 11,000 ಕೋಟಿಗೂ ಹೆಚ್ಚು; ಅಷ್ಟು ಸಂಪಾದನೆ ಸಾಧ್ಯವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ
ಡಾ. ದೇವಿಪ್ರಸಾದ್ ಶೆಟ್ಟಿ
Follow us on

ಡಾಕ್ಟರ್ ದೇವಿಶೆಟ್ಟಿ ಹೆಸರು ಕೇಳದ ಕನ್ನಡಿಗರು ಬಹಳ ಕಡಿಮೆ. ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ ಮಹಾನ್ ಸೇವಾ ಕರ್ಮಿ. 23 ವರ್ಷಗಳ ಹಿಂದೆ ಇವರು ಸ್ಥಾಪಿಸಿದ ನಾರಾಯಣ ಹೃದಯಾಲಯ (Narayana Hrudayalaya) ಇವತ್ತು ದೇಶ ವಿದೇಶಗಳಲ್ಲಿ 47 ಆಸ್ಪತ್ರೆಗಳಾಗಿ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಆಲಯಗಳಾಗಿವೆ. ಬಡವರು, ಕೆಳಮಧ್ಯಮ ವರ್ಗದ ಜನರೂ ಇವರ ಆಸ್ಪತ್ರೆಗೆ ಹೋಗಿ ಹೆಚ್ಚು ವೆಚ್ಚವಿಲ್ಲದೇ ಚಿಕಿತ್ಸೆ ಪಡೆಯಲು ಸಾಧ್ಯ. ಮಂಗಳೂರಿನ ಹೊರವಲಯದ ಕಿನ್ನಿಗೋಳಿಯಲ್ಲಿ ಹುಟ್ಟಿದ ಡಾ. ದೇವಿಶೆಟ್ಟಿ (Dr. Devi Prasad Shetty) ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಟೈಮ್ ಮ್ಯಾಗಝೀನ್​ನಲ್ಲಿ ಆರೋಗ್ಯ ಕ್ಷೇತ್ರದ 50 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ದೇವಿಶೆಟ್ಟಿ ಹೆಸರು ಮೂಡಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ದೇವಿಶೆಟ್ಟಿಯನ್ನು ದೇವರ ಸ್ವರೂಪದಲ್ಲಿ ಕಾಣುವುದುಂಟು. ಹೃದಯಸ್ತಂಭನವಾಗಿ ಉಸಿರೇ ನಿಂತುಹೋಗುವ ಸ್ಥಿತಿಯಲ್ಲಿದ್ದ ಅನೇಕರಿಗೆ ಜೀವ ಉಳಿಸಿದ್ದಾರೆ ದೇವಿಶೆಟ್ಟಿ.

ಡಾ. ದೇವಿಶೆಟ್ಟಿ ಒಟ್ಟು ಆಸ್ತಿ 11,000 ಕೋಟಿಗೂ ಹೆಚ್ಚು; ಹೇಗೆ ಸಾಧ್ಯವಾಯ್ತು ಸಂಪಾದನೆ?

ಫೋರ್ಬ್ಸ್ ಪಟ್ಟಿ ಪ್ರಕಾರ ಡಾ. ದೇವಿಶೆಟ್ಟಿ ಅವರ ಆಸ್ತಿ 1.4 ಬಿಲಿಯನ್ ಡಾಲರ್ ಇದೆ. ಅಂದರೆ ರೂ 11,000 ಕೋಟಿಗೂ ಹೆಚ್ಚು. ಬಹಳ ಕಡಿಮೆ ಶುಲ್ಕಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಇವರು ಇಷ್ಟೊಂದು ಆಸ್ತಿ ಹೇಗೆ ಸಂಪಾದಿಸಿದರೆಂಬುದು ಯಾರಿಗಾದರೂ ಆಶ್ಚರ್ಯ ಎನಿಸಬಹುದು. ಇದಕ್ಕೆ ಕಾರಣ ಷೇರುಪೇಟೆ.

ಇದನ್ನೂ ಓದಿWipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ

ನಾರಾಯಣ ಹೃದಯಾಲಯ, ಅಥವಾ ನಾರಾಯಣ ಹೆಲ್ತ್ ಸಂಸ್ಥೆ 2015ರಲ್ಲಿ ಐಪಿಒಗೆ ತೆರೆದುಕೊಂಡು ಆ ಬಳಿಕ ಷೇರುಪೇಟೆಯಲ್ಲಿ ಲಿಸ್ಟ್ ಆಯಿತು. ಐಪಿಒ ವೇಳೆ ಇದ್ದ ಷೇರು ಬೆಲೆ 250 ರೂ. ಈಗ ಇದರ ಬೆಲೆ 867 ರುಪಾಯಿ ಆಗಿದೆ. ಅಂದರೆ ಮೂರಕ್ಕೂ ಹೆಚ್ಚು ಪಟ್ಟು ಇದರ ಬೆಲೆವೃದ್ಧಿಯಾಗಿದೆ. ಒಟ್ಟು ಸುಮಾರು 20 ಕೋಟಿಯಷ್ಟು ಷೇರುಗಳಿವೆ. ಇದರಲ್ಲಿ ಶೇ. 60ಕ್ಕಿಂತ ಹೆಚ್ಚು ಷೇರುಗಳು ದೇವಿಶೆಟ್ಟಿ ಕುಟುಂಬದವರ ಬಳಿ ಇವೆ. ಇವೆಲ್ಲದರ ಮೌಲ್ಯ ಸುಮಾರು 11,000 ಕೋಟಿ ರೂ ಆಗುತ್ತದೆ.

ಇದರಲ್ಲಿ ದೇವಿಶೆಟ್ಟಿ ಅವರ ಪತ್ನಿ ಶಕುಂತಲಾ ಶೆಟ್ಟಿ ಅವರ ಪಾಲು ಹೆಚ್ಚು. ದೇವಿಪ್ರಸಾದ್ ಶೆಟ್ಟಿ ಅವರ ವೈಯಕ್ತಿಕ ಷೇರುಪಾಲು ಪರಿಗಣಿಸಿದರೆ ಅವರ ಆಸ್ತಿಮೌಲ್ಯ 2,100 ಕೋಟಿ ರೂ ಆಸುಪಾಸಿಗೆ ಬರುತ್ತದೆ.

ಡಾ. ದೇವಿಶೆಟ್ಟಿಗೆ ಸ್ಫೂರ್ತಿ ಮದರ್ ಥೆರೆಸಾ

ಯಾರಾದರೂ ಸರಿ, ಒಂದು ಅದ್ಭುತ ಕೈಂಕರ್ಯಕ್ಕೆ ಕೈಗೊಳ್ಳುತ್ತಾರೆಂದರೆ ಯಾವುದಾದರೂ ಸ್ಫೂರ್ತಿ ಇದ್ದೇ ಇರಬೇಕು. ಡಾ. ದೇವಿಪ್ರಸಾದ್ ಶೆಟ್ಟಿ ನಾರಾಯಣ ಹೃದಯಾಲಯ ಸ್ಥಾಪಿಸಲು ಕಾರಣವಾಗಿದ್ದು ಮದರ್ ಥೆರೆಸಾ. ಬಡಬಗ್ಗರಿಗೂ ಕೈಗೆಟುವಂತೆ ವೈದ್ಯಕೀಯ ಸೇವೆ ಒದಗಿಸಬೇಕೆನ್ನುವ ತುಡಿತಕ್ಕೆ ಬೀಳಲು ಮತ್ತು ನಾರಾಯಣ ಹೃದಯಾಲಯ ನಿರ್ಮಿಸಲು ಮದರ್ ಥೆರೇಸಾ ಸ್ಫೂರ್ತಿ ಎಂದು ಹಲವು ಬಾರಿ ದೇವಿಶೆಟ್ಟಿ ಹೇಳಿಕೊಂಡಿದ್ದಿದೆ. ಕ್ರೈಸ್ತ ಮಿಷನರಿಯಾಗಿದ್ದ ಮದರ್ ಥೆರೆಸಾ ಭಾರತದಲ್ಲಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಸೌಲಭ್ಯ ಒದಗಿಸಿ ಬಹಳ ದೊಡ್ಡ ಮಾನವೀಯತೆಗೆ ಆದರ್ಶಪ್ರಾಯವಾಗಿದ್ದಂತಹ ಜೀವ.

ಇದನ್ನೂ ಓದಿMiserable Countries: ದರಿದ್ರ ದೇಶಗಳ ಪಟ್ಟಿಯಲ್ಲಿ ಜಿಂಬಾಬ್ವೆ ನಂ. 1; ಭಾರತ, ಪಾಕಿಸ್ತಾನ ಇತ್ಯಾದಿ ದೇಶಗಳಿಗೆ ಎಷ್ಟನೇ ಸ್ಥಾನ? ಇಲ್ಲಿದೆ ಪಟ್ಟಿ

ಕರ್ನಾಟಕದಲ್ಲಿ ಸರ್ಕಾರದ ಯಶಸ್ವಿನಿ ಆರೋಗ್ಯ ಯೋಜನೆ ಹಿಂದಿನ ಶಕ್ತಿ ದೇವಿಶೆಟ್ಟಿ

ಡಾ. ದೇವಿಪ್ರಸಾದ್ ಶೆಟ್ಟಿ ಕೇವಲ ನಾರಾಯಣ ಹೃದಯಾಲಯ ಆಸ್ಪತ್ರೆ ಸಾಮ್ರಾಜ್ಯ ಮಾತ್ರ ನೋಡಿಕೊಳ್ಳುತ್ತಿಲ್ಲ, ಅವರು ನಾನಾ ರೀತಿಯಲ್ಲಿ ಸಮಾಜಸೇವೆ ಕೈಗೊಳ್ಳುತ್ತಾರೆ. ಸರ್ಕಾರದ ವಿವಿಧ ಕಾರ್ಯಸಮಿತಿಗಳಲ್ಲಿ ಅವರಿರುತ್ತಾರೆ. ಸರ್ಕಾರದ ಜನಪ್ರಿಯ ಯಶಸ್ವಿನಿ ಆರೋಗ್ಯ ಇನ್ಷೂರೆನ್ಸ್ ಸ್ಕೀಮ್ ಸಿದ್ಧಪಡಿಸುವುದರ ಹಿಂದೆ ಡಾ. ಶೆಟ್ಟಿ ಶ್ರಮ ಇದೆ.

ಮಂಗಳೂರಿನ ಕಿನ್ನಿಗೋಳಿಯಲ್ಲಿ ಹುಟ್ಟಿದ ಡಾ. ದೇವಿಶೆಟ್ಟಿ ಚಿಕ್ಕಂದಿನಿಂದಲೇ ಹಾರ್ಟ್ ಸರ್ಜನ್ ಆಗಬೇಕೆಂದು ನಿರ್ಧಾರ ಮಾಡಿದ್ದವರು. ಚಿಕ್ಕವನಿದ್ದಾಗ ವಿಶ್ವದ ಮೊದಲ ಹಾರ್ಟ್ ಟ್ರಾನ್ಸ್​ಪ್ಲಾಂಟ್ ಸರ್ಜರಿ ಬಗ್ಗೆ ಸುದ್ದಿ ಓದಿ ಸರ್ಜನ್ ಆಗಬೇಕೆಂದು ಸಂಕಲ್ಪ ತೊಟ್ಟು ಅದನ್ನು ಸಾಕಾರಗೊಳಿಸಿದ ಛಲಗಾರ ಅವರು. ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಓದಿ ಬ್ರಿಟನ್, ಅಮೆರಿಕದಲ್ಲಿ ಸರ್ಜನ್ ಆಗಿ ಕೆಲಸ ಮಾಡಿ ನಂತರ ಭಾರತಕ್ಕೆ ಬಂದು ಇಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದವರು ಡಾ. ದೇವಿಪ್ರಸಾದ್ ಶೆಟ್ಟಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ