
ನವದೆಹಲಿ, ಅಕ್ಟೋಬರ್ 21: ಇನ್ಸ್ಟಾ, ಯೂಟ್ಯೂಬ್ಗಳಲ್ಲಿ ಪೋಸ್ಟ್ ಮಾಡಲಾಗುವ ವಿಡಿಯೋಗಳಿಗೆ ಸುಮ್ಮನೆ ಹಣ ಸಿಗೋದಿಲ್ಲ. ಅರ್ಹ ಚಾನಲ್ಗಳು ಮತ್ತು ಕನಿಷ್ಠ ವೀಕ್ಷಣೆ ದಾಟಿದ ವಿಡಿಯೋಗಳಿಗೆ ಅವುಗಳ ವೀಕ್ಷಣೆ ಸಂಖ್ಯೆ ಮತ್ತು ಅವಧಿ ಆಧಾರದ ಮೇಲೆ ಪೇಮೆಂಟ್ ಸಿಗುತ್ತದೆ. ಆದರೆ, ಪೋಸ್ಟ್ ಮಾಡಿದ ಎಲ್ಲಾ ವಿಡಿಯೋಗಳಿಗೂ ಪೇಮೆಂಟ್ ಸಿಗುವಂತಿದ್ದರೆ? ಇಲಾನ್ ಮಸ್ಕ್ ಅವರ ಎಕ್ಸ್ ಪ್ಲಾಟ್ಫಾರ್ಮ್ ಅಂಥದ್ದೊಂದು ಆಫರ್ ನೀಡಲು ಮುಂದಾಗಿದೆ. ತನ್ನ ಪ್ಲಾಟ್ಫಾರ್ಮ್ನಲ್ಲಿ ವಿಡಿಯೋ ಕಂಟೆಂಟ್ಗಳಿಗೆ ಉತ್ತೇಜನ ನೀಡಲು ವಿಡಿಯೋ ಕಿಕ್ಸ್ಟಾರ್ಟ್ ಬೋನಸ್ ಎನ್ನುವ ಹೊಸ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಯಲ್ಲಿ ಅರ್ಹ ಕಂಟೆಂಟ್ ಕ್ರಿಯೇಟರ್ಗಳಿಗೆ 3,000 ಡಾಲರ್ ಅಥವಾ 2.85 ಲಕ್ಷ ರೂ ಪೇಮೆಂಟ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಈ ಯೋಜನೆಯ ಪೈಲಟ್ ಹಂತ ಅಥವಾ ಪ್ರಾಯೋಗಿಕ ಹಂತ ಈಗ ಆರಂಭವಾಗಿದೆ. ಸ್ಪೇಸ್ಎಕ್ಸ್ಎಐನ ಕ್ರಿಯೇಟರ್ ಪ್ರಾಡಕ್ಟ್ ಮುಖ್ಯಸ್ಥರಾದ ಅಲೀಗ್ರಾ ಜಾಚಿಯಾ ಅವರು ನೀಡಿರುವ ಮಾಹಿತಿ ಪ್ರಕಾರ, ಕಂಟೆಂಟ್ ಕ್ರಿಯೇಟರ್ಸ್ಗೆ ನೀಡಲಾಗುವ ಪೇಮೆಂಟ್, ವಿಡಿಯೋ ವೀಕ್ಷಣೆ ಸಂಖ್ಯೆ ಅಥವಾ ಅವಧಿಯ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ, ಅರ್ಹ ಕಂಟೆಂಟ್ ಕ್ರಿಯೇಟರ್ಸ್ ಅನ್ನು ಎಕ್ಸ್ ಸಂಸ್ಥೆಯೇ ಆಯ್ಕೆ ಮಾಡುತ್ತದೆ. ಆ ಆಯ್ಕೆ ಮಾನದಂಡಗಳೇನು ಎಂಬುದನ್ನು ಬಹಿರಂಗಪಡಿಸಿಲ್ಲ.
ಅಲೀಗ್ರಾ ಜಾಚಿಯಾ ಅವರ ಎಕ್ಸ್ ಪೋಸ್ಟ್
ಇದನ್ನೂ ಓದಿ: ಭಾರತದ ಸರ್ವಂ ಈಗ ಅಮೆರಿಕದ ಎಐ ಮಾಡಲ್ಗಳನ್ನೂ ಹೋಸ್ಟ್ ಮಾಡಬಲ್ಲುದು: ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್
ಗಮನಿಸಬೇಕಾದ ಸಂಗತಿ ಎಂದರೆ, ಎಕ್ಸ್ನಲ್ಲೇ ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಚಾಲನೆಯಲ್ಲಿದೆ. ಅದು ಒರಿಜಿನಲ್ ಕಂಟೆಂಟ್ ರಿವಾರ್ಡ್ಸ್ ಪ್ರೋಗ್ರಾಮ್. ಈ ಪ್ರೋಗ್ರಾಮ್ನಲ್ಲಿ ಜೋಡಿತವಾಗಬೇಕಾದರೆ ಪ್ರೀಮಿಯಮ್ ಸಬ್ಸ್ಕ್ರಿಪ್ಷನ್ ಹೊಂದಿರಬೇಕು. 500 ವೆರಿಫೈಡ್ ಫಾಲೋಯರ್ಸ್ ಇರಬೇಕು. ಅಕೌಂಟ್ನಿಂದ ಪೋಸ್ಟ್ ಆದ ವಿಡಿಯೋಗಳಿಗೆ 5 ಲಕ್ಷ ಇಂಪ್ರೆಷನ್ಸ್ ಇರಬೇಕು. ಈ ನಿಯಮಗಳು ಕಂಟೆಂಟ್ ರಿವಾರ್ಡ್ಸ್ ಪ್ರೋಗ್ರಾಮ್ನಲ್ಲಿ ಇವೆ.
ಆದರೆ, ವಿಡಿಯೋ ಕಿಕ್ಸ್ಟಾರ್ಟ್ ಬೋನಸ್ ಪ್ರೋಗ್ರಾಮ್ ಬೇರೆಯದು. ಇದರಲ್ಲಿ ಪ್ರೀಮಿಯಮ್ ಸಬ್ಸ್ಕ್ರಿಪ್ಷನ್, ವೆರಿಫೈಡ್ ಫಾಲೋಯರ್ಸ್ ಇತ್ಯಾದಿ ನಿಯಮಗಳೇನಿಲ್ಲ. ಆದರೆ, ಈ ಕೆಳಗಿನ ಷರತ್ತುಗಳಿವೆ:
ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು
ಕಂಟೆಂಟ್ ಕ್ರಿಯೇಟರ್ಸ್ಗೆ ಎಕ್ಸ್ನಿಂದಲೇ ಇನ್ವಿಟೇಶನ್ ಹೋಗುತ್ತದೆ. ಈ ರೀತಿ ಆಹ್ವಾನ ಪಡೆದ ಕಂಟೆಂಟ್ ಕ್ರಿಯೇಟರ್ಗಳು 2026ರ ಅಕ್ಟೋಬರ್ 30ರೊಳಗೆ ಎನ್ರೋಲ್ ಆಗಬೇಕು ಎಂದು ಅಲೀಗ್ರಾ ಜಾಚಿಯಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ