AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸರ್ವಂ ಈಗ ಅಮೆರಿಕದ ಎಐ ಮಾಡಲ್​ಗಳನ್ನೂ ಹೋಸ್ಟ್ ಮಾಡಬಲ್ಲುದು: ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್

ಬೆಂಗಳೂರು ಮೂಲದ ಸರ್ವಂ ಎಐ ಸಂಸ್ಥೆ ಬಹಳ ವೇಗವಾಗಿ ಫೌಂಡೇಶನ್ ಮಾಡಲ್​ಗಳನ್ನು ನಿರ್ಮಿಸಿದೆ. ಈಗ ಇವುಗಳಾಚೆ, ಎಐ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸುವ ಕೆಲಸಕ್ಕೆ ಸರ್ವಂ ಗಮನ ಕೊಡುತ್ತಿದೆ. ಸರ್ವಂನ ಎಐ ಇನ್​ಫ್ರಾಸ್ಟ್ರಕ್ಚರ್ ಈಗ ಬೇರೆ ಬೇರೆ ಎಐ ಮಾಡಲ್​ಗಳನ್ನು ಹೋಸ್ಟ್ ಮಾಡಬಲ್ಲುದು. ಅಮೆರಿಕದ ಎಐ ಮಾಡಲ್​ಗಳನ್ನೂ ರನ್ ಮಾಡಬಲ್ಲುದು ಎಂದು ಸರ್ವಂ ಎಐನ ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ.

ಭಾರತದ ಸರ್ವಂ ಈಗ ಅಮೆರಿಕದ ಎಐ ಮಾಡಲ್​ಗಳನ್ನೂ ಹೋಸ್ಟ್ ಮಾಡಬಲ್ಲುದು: ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್
ಸರ್ವಂ ಎಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 21, 2026 | 6:44 PM

Share

ನವದೆಹಲಿ, ಅಕ್ಟೋಬರ್ 21: ಭಾರತ ತಡವಾಗಿ ಎಐ ಟೆಕ್ನಾಲಜಿ ಕ್ಷೇತ್ರಕ್ಕೆ ಕಾಲಿಟ್ಟರೂ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ವರ್ಷದ ಹಿಂದಷ್ಟೇ ಶುರುವಾದ ಸರ್ವಂ ಎಐ ಕಂಪನಿ ಇದೀಗ ಅಮೆರಿಕದ ಎಐ ಮಾಡಲ್​ಗಳನ್ನು ಹೋಸ್ಟ್ ಮಾಡುವ ಫೌಂಡೇಶನಲ್ ಮಾಡಲ್ ಇನ್​ಫ್ರಾಸ್ಟ್ರಕ್ಚರ್ ಸಾಮರ್ಥ್ಯ ರೂಪಿಸಿದೆ. ಬೆಂಗಳೂರು ಮೂಲದ ಸರ್ವಂ ಎಐ ಕಂಪನಿಯ ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.

ಮನಿಕಂಟ್ರೋಲ್ ಸ್ಟಾರ್ಟಪ್ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರತ್ಯೂಶ್ ಕುಮಾರ್, ಸರ್ವಂ ಎಐ ಇನ್​ಫ್ರಾಸ್ಟ್ರಕ್ಚರ್ ಈಗ ತನ್ನದೇ ಸ್ವಂತ ಎಐ ಮಾಡಲ್​ಗಳನ್ನು ಹೋಸ್ಟ್ ಮಾಡುವುದಷ್ಟೇ ಅಲ್ಲ, ಅಮೆರಿಕದವರದ್ದೂ ಸೇರಿ ಇತರೆ ಕಂಪನಿಗಳು ನಿರ್ಮಿಸಿದ ಎಐ ಮಾಡಲ್​ಗಳನ್ನೂ ಹೋಸ್ಟ್ ಮಾಡಬಲ್ಲುದು ಎಂದಿದ್ದಾರೆ.

ಇದನ್ನೂ ಓದಿ: ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ; ಅತಿವೇಗದ ಸಬ್​ಸ್ಕ್ರಿಪ್ಷನ್ ಸೇರಿ ಪ್ರಮುಖ ದಾಖಲೆಗಳು; ಹೊಸ ಇತಿಹಾಸ

ಸರ್ವಂ ಎಐ ಸಂಸ್ಥೆ ಕೆಲ ಫೌಂಡೇಶನ್ ಮಾಡಲ್​ಗಳನ್ನು ನಿರ್ಮಿಸಿ ಸೈ ಎನಿಸಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಎಐ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸುವ ಕೆಲಸ ಮಾಡುತ್ತಿದೆ. ಉದ್ದಿಮೆಗಳು ಸರ್ವಂನ ಎಐ ಮಾಡಲ್​ಗಳನ್ನು ಬಳಸಬಹುದು. ಅಥವಾ ತಮ್ಮವೇ ಯಾವುದಾದರೂ ಎಐ ಮಾಡಲ್​ಗಳಿದ್ದರೆ ಅವನ್ನು ಸರ್ವಂ ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಬಳಸಬಹುದು ಎಂದು ಸರ್ವಂ ಸಹ-ಸಂಸ್ಥಾಪಕರು ಹೇಳಿದ್ದಾರೆ.

ತನ್ನ ಇನ್​ಫ್ರಾಸ್ಟ್ರಚರ್​ನಲ್ಲಿ ಉದ್ದಿಮೆಗಳು ಎಐ ಅಳವಡಿಕೆ ಸುಲಭಗೊಳಿಸಲು ಸರ್ವಂ ಸಂಸ್ಥೆ ತನ್ನದೇ ಎಂಜಿನಿಯರುಗಳನ್ನು ಕ್ಲೈಂಟ್ ಸ್ಥಳಕ್ಕೆ ಕಳುಹಿಸುತ್ತಿದೆ. ಕ್ಲೈಂಟ್​ಗಳ ತಂಡಗಳ ಜೊತೆಗೆ ಸರ್ವಂನ ಎಂಜಿನಿಯರುಗಳೂ ಸೇರಿ ಎಐ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸಲು ನೆರವಾಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪ್ರತ್ಯೂಶ್ ಕುಮಾರ್ ನೀಡಿದ್ದಾರೆ.

ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು

ಸರ್ಕಾರದ ಕಂಪ್ಯೂಟರ್ ಆರ್ ಅಂಡ್ ಡಿ ವಿಭಾಗವಾದ ಎನಿಸಿದ ಸಿ-ಡಾಕ್ ಜೊತೆ ಸರ್ವ ಒಪ್ಪಂದ ಮಾಡಿಕೊಂಡಿದೆ. ಸಿ-ಡಾಕ್ ಅಭಿವೃದ್ಧಿಪಡಿಸಿದ ಕಂಪ್ಯೂಟಿಂಗ್ ಸಿಸ್ಟಂಗಳಲ್ಲಿ ಸರ್ವಂನ ಮಾಡಲ್​ಗಳು, ಅಪ್ಲಿಕೇಶನ್​ಗಳು ರನ್ ಆಗಲಿವೆ.

ಐಬಿಎಂ, ಎಚ್​ಪಿ, ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಇತ್ಯಾದಿ ಸಂಸ್ಥೆಗಳು ಸರ್ವಂ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಕನ್ನಡ ಚಿತ್ರರಂಗದ ತಾರೆಯರು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಜಂಬೂಸವಾರಿ ವೈಭವ ಕಣ್ತುಂಬಿಕೊಂಡ ತೆಲಂಗಾಣ, ಕೇರಳ ಮುಖ್ಯಮಂತ್ರಿಗಳು
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪಟ್ಟದಾನೆ ಶ್ರೀಕಂಠನ ಗಾಂಭೀರ್ಯದ ಹೆಜ್ಜೆಗಳಿಗೆ ಮರುಳಾದ ಜನಸಾಗರ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ