AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಂ, ಯುಪಿಐ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡಲು ಅವಕಾಶ; ಫೆಬ್ರುವರಿಯಲ್ಲಿ ಇಪಿಎಫ್​ಒ 3.0 ಜಾರಿ ಸಾಧ್ಯತೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಮೂರನೇ ತಲೆಮಾರಿನ ವ್ಯವಸ್ಥೆ 2027ರ ಫೆಬ್ರುವರಿಯಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಇಪಿಎಫ್​ಒದ ತಂತ್ರಜ್ಞಾನ ವ್ಯವಸ್ಥೆ ಹೊಸ ಕಾಲಕ್ಕನುಗುಣವಾಗಿರಲಿದೆ. ಗಿಗ್ (gig) ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಲಾಗಲಿದೆ. ಎಟಿಎಂ, ಯುಪಿಐ ಮೂಲಕ ಇಪಿಎಫ್ ಹಣ ವಿತ್ಡ್ರಾ ಕೆಲಸವನ್ನು ಮತ್ತಷ್ಟು ಸುಗಮಗೊಳಿಸಲಾಗಬಹುದು.

ಎಟಿಎಂ, ಯುಪಿಐ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡಲು ಅವಕಾಶ; ಫೆಬ್ರುವರಿಯಲ್ಲಿ ಇಪಿಎಫ್​ಒ 3.0 ಜಾರಿ ಸಾಧ್ಯತೆ
ಇಪಿಎಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2026 | 5:28 PM

Share

ನವದೆಹಲಿ, ನವೆಂಬರ್ 25: ಉದ್ಯೋಗಿಗಳು ತಮ್ಮ ಪ್ರಾವಿಡೆಂಟ್ ಫಂಡ್ ಹಣವನ್ನು ಎಟಿಎಂ, ಯುಪಿಐ ಮೂಲಕ ಸುಲಭವಾಗಿ ವಿತ್​ಡ್ರಾ ಮಾಡಲಾಗುವಂತೆ ವಿನೂತನ ಸೌಲಭ್ಯಗಳು ಬರಲಿವೆ ಎನ್ನುವಂತಹ ಸುದ್ದಿ ವರ್ಷದಿಂದಲೂ ಇದೆ. ಇದೀಗ ಈ ಸೌಲಭ್ಯ ಮುಂದಿನ ಕೆಲವೇ ತಿಂಗಳಲ್ಲಿ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಫೆಬ್ರುವರಿಯಲ್ಲಿ ಇಪಿಎಫ್​ಒ 3.0 ಜಾರಿಗೆ ಬರಲಿದೆ. ಅದಾದ ಬಳಿಕ ಎಟಿಎಂ ವಿತ್​ಡ್ರಾಯಲ್, ಯುಪಿಐ ವಿತ್​ಡ್ರಾಯಲ್ ಇತ್ಯಾದಿ ಸೌಲಭ್ಯಗಳು ಚಾಲನೆಗೆ ಬರಲಿವೆ.

ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ‘ಇಪಿಎಫ್‌ಒ 3.0’ ಯೋಜನೆಯ ಫ್ರೇಮ್​ವರ್ಕ್​ಗೆ 2025ರ ಅಕ್ಟೋಬರ್ ತಿಂಗಳಲ್ಲೇ ಅನುಮೋದನೆ ಸಿಕ್ಕಿದೆ. ಇಪಿಎಫ್​ಒನ ಕೇಂದ್ರೀಯ ವಿಶ್ವಸ್ತ ಮಂಡಳಿ ಈ ಅನುಮೋದನೆ ನೀಡಿದ್ದು, ಒಂದು ವರ್ಷದಲ್ಲಿ ಜಾರಿಯಾಗಬೇಕೆಂದು ಸೂಚಿಸಿತ್ತು. 2027ರ ಫೆಬ್ರುವರಿಯಲ್ಲಿ ಮಂಡಳಿ ಸಭೆ ಇದ್ದು, ಆಗಲೇ ಇಪಿಎಫ್​ಒ 3.0 ಜಾರಿಯನ್ನು ಘೋಷಿಸಬಹುದು. ಈಗಾಗಲೇ ಟೆಕ್ನಾಲಜಿ ಪಾರ್ಟ್ನರ್ ಅನ್ನು ನಿರ್ಧರಿಸಲಾಗಿದೆ. ಹೀಗಾಗಿ, ಬೇಗನೇ ಇಪಿಎಫ್​ಒ 3.0 ಜಾರಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಫ್ಲಿಪ್​ಕಾರ್ಟ್​ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ

ಮುಂದಿನ 50 ವರ್ಷಗಳ ಅವಧಿಯಲ್ಲಿ ಸುಮಾರು 200 ಕೋಟಿ ಸದಸ್ಯರ ದತ್ತಾಂಶವನ್ನು ನಿರ್ವಹಿಸುವ ಸಾಮರ್ಥ್ಯದೊಂದಿಗೆ ಈ ಹೊಸ ವೇದಿಕೆಯನ್ನು ರೂಪಿಸಲಾಗುತ್ತಿದೆ.

ಕೇಂದ್ರೀಕೃತ ವ್ಯವಸ್ಥೆ (Core Banking Solution) ಮತ್ತು ಸಮಗ್ರ ಡಿಜಿಟಲ್ ವೇದಿಕೆಯಿಂದ ಸದಸ್ಯರು ದೇಶದ ಯಾವುದೇ ಪ್ರಾದೇಶಿಕ ಕಚೇರಿಯ ಮೂಲಕ ಖಾತೆ ಸೇವೆಗಳನ್ನು ಸುಲಭವಾಗಿ ಪಡೆಯಲು ಹಾಗೂ ಕ್ಲೈಮ್ ಪ್ರಕ್ರಿಯೆಗಳನ್ನು ವೇಗಗೊಳಿಸಲು ಸಹಕಾರಿಯಾಗಲಿದೆ.

ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ

ಗಿಗ್ ವರ್ಕರ್ಸ್, ಡೆಲಿವರಿ ಪಾರ್ಟ್ನರ್ಸ್ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಂಪ್ರದಾಯಿಕ ಉದ್ಯೋಗದಾತರಿಲ್ಲದೆಯೂ ಯುಎಎನ್ (UAN) ಆಧಾರಿತ ಭವಿಷ್ಯ ನಿಧಿ ಕೊಡುಗೆ ನೀಡುವ ಮಾರ್ಗವನ್ನು ಇದು ತೆರೆಯಲಿದೆ.

ಒಂದೇ ಯುಎಎನ್ ಅನ್ನು ಹಲವು ಉದ್ಯೋಗದಾತರು ಅಥವಾ ಅಗ್ರಿಗೇಟರ್‌ಗಳೊಂದಿಗೆ ಜೋಡಿಸುವ ‘ಒನ್-ಟು-ಮೆನಿ ಮ್ಯಾಪಿಂಗ್’ ವ್ಯವಸ್ಥೆಯ ಜೊತೆಗೆ, ಎನ್‌ಜಿಒಗಳು, ದಾನಿಗಳು ಅಥವಾ ಸಿಎಸ್‌ಆರ್ (CSR) ನಿಧಿಗಳಂತಹ ಮೂರನೇ ವ್ಯಕ್ತಿಯ ಕೊಡುಗೆಗಳಿಗೂ ಅವಕಾಶ ಕಲ್ಪಿಸಲಾಗುವುದು.

ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್​ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ

ಯುಪಿಐ, ಎಟಿಎಂ ವಿತ್​ಡ್ರಾಯಲ್ ಸೌಲಭ್ಯ

ಯುಪಿಐ (UPI) ಮೂಲಕ ಪಿಎಫ್ ಹಣ ಹಿಂಪಡೆಯುವ ಸೌಲಭ್ಯವು ಮುಂದಿನ ವರ್ಷದ ಡಿಸೆಂಬರ್ ಅಂತ್ಯದೊಳಗೆ ಪ್ರಾಯೋಗಿಕ ಹಂತ ಪೂರೈಸಿ ಜಾರಿಗೆ ಬರುವ ನಿರೀಕ್ಷೆಯಿದೆ. ಎಟಿಎಂ ಮೂಲಕವೂ ಹಣ ಪಡೆಯುವ ವ್ಯವಸ್ಥೆಯ ಯೋಜನೆ ಇದೆ.

ನಿವೃತ್ತಿ ನಂತರದ ವಿತ್​ಡ್ರಾಯಲ್​ನಲ್ಲಿ ಹೊಸ ಆಯ್ಕೆ

ಇದರ ಜೊತೆಗೆ, ನಿವೃತ್ತ ಸದಸ್ಯರಿಗೆ ಒಂದೇ ಬಾರಿಗೆ ಸಂಪೂರ್ಣ ಮೊತ್ತ ಪಡೆಯುವ ಬದಲು ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಕಂತುಗಳಲ್ಲಿ ಹಣ ಪಡೆಯಲು ಅವಕಾಶ ನೀಡುವ ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್ (SWP) ಸೇರಿದಂತೆ ಹಲವು ಸದಸ್ಯಸ್ನೇಹಿ ಬದಲಾವಣೆಗಳತ್ತ ಗಮನ ಹರಿಸಲಾಗಿದೆ. ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಇಪಿಎಫ್​ನ ಎಸ್​ಡಬ್ಲ್ಯುಪಿ ಪ್ಲಾನ್​ನಲ್ಲಿ 20 ವರ್ಷಗಳವರೆಗೆ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ