ಇಪಿಎಫ್​ಒದಿಂದ ನೂತನ ವಾಟ್ಸಪ್ ಚಾನಲ್; ಶೀಘ್ರದಲ್ಲೇ ಬರಲಿದೆ ಚಾಟ್​ಬಾಟ್; ಇಲ್ಲಿದೆ ಅದರ ಚಾನಲ್ ಲಿಂಕ್

ಇಪಿಎಫ್​ಒ ತನ್ನ ಚಂದಾದಾರರಿಗೆ ಮಹತ್ವದ ಮಾಹಿತಿ ಮತ್ತು ಹೊಸ ಅಪ್​ಡೇಟ್​ಗಳನ್ನು ಸುಲಭವಾಗಿ ತಲುಪಿಸಲು ಅಧಿಕೃತ ವಾಟ್ಸಾಪ್ ಚಾನಲ್ ಅನ್ನು ಪರಿಚಯಿಸಿದೆ. ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಹೊಸ ಸೇವೆಗಳು, ಅಪ್​ಡೇಟ್​ಗಳು ಹಾಗೂ ಮಾಹಿತಿಯುಕ್ತ ವೀಡಿಯೊಗಳ ವಿವರಗಳನ್ನು ಈ ಚಾನಲ್​ನಲ್ಲಿ ಪಡೆಯಬಹುದು. ಮುಂದಿನ ದಿನಗಳಲ್ಲಿ ವಾಟ್ಸಾಪ್​ನಲ್ಲೇ ಇಪಿಎಫ್​ಒದಿಂದ ಚಾಟ್​ಬಾಟ್ ಕೂಡ ಬರಲಿದ್ದು, ಕೆಲ ಸೇವೆಗಳನ್ನು ಸುಲಭಗೊಳಿಸಲಿದೆ.

ಇಪಿಎಫ್​ಒದಿಂದ ನೂತನ ವಾಟ್ಸಪ್ ಚಾನಲ್; ಶೀಘ್ರದಲ್ಲೇ ಬರಲಿದೆ ಚಾಟ್​ಬಾಟ್; ಇಲ್ಲಿದೆ ಅದರ ಚಾನಲ್ ಲಿಂಕ್
ಇಪಿಎಫ್‌ಒ
Image Credit source: Getty Images

Updated on: Sep 14, 2026 | 3:48 PM

ನವದೆಹಲಿ, ಸೆಪ್ಟೆಂಬರ್ 14: ಇಪಿಎಫ್‌ಒ ತನ್ನ ಡಿಜಿಟಲ್ ಸೇವೆಗಳನ್ನು ವಿಸ್ತರಿಸುತ್ತಿದ್ದು, ಸಂಸ್ಥೆಯ ಹೊಸ ನಿರ್ಧಾರಗಳು ಮತ್ತು ಸೇವಾ ಸೌಲಭ್ಯಗಳ ಮಾಹಿತಿಯನ್ನು ತಲುಪಿಸಲು ಅಧಿಕೃತ ವಾಟ್ಸಾಪ್ ಚಾನಲ್ ಬಳಸಿಕೊಳ್ಳುತ್ತಿದೆ. ಈ ಕುರಿತು ಇಪಿಎಫ್‌ಒ ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಚಂದಾದಾರರು ನೇರವಾಗಿ ಚಾನಲ್‌ಗೆ ಸೇರ್ಪಡೆಗೊಳ್ಳಲು ಲಿಂಕ್ ಹಾಗೂ ಕ್ಯೂಆರ್ ಕೋಡ್ ಹಂಚಿಕೊಂಡಿದೆ.

ಇಪಿಎಫ್​ಒದ ಅಧಿಕೃತ ವಾಟ್ಸಾಪ್ ಚಾನಲ್‌ಗೆ ಸೇರುವುದು ಹೇಗೆ?

ಇಪಿಎಫ್‌ಒ ನೀಡಿರುವ ನೇರ ಲಿಂಕ್ www.whatsapp.com/channel/0029Vb6kmH48Pgs8ftd6Kw3Y ಮೂಲಕ ವಾಟ್ಸಾಪ್ ಚಾನಲ್‌ಗೆ ಸೇರಬಹುದು.

ಇಪಿಎಫ್‌ಒ ಅಧಿಕೃತ ಜಾಲತಾಣ ಅಥವಾ ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಚಾನಲ್ ‘Follow’ ಮಾಡಬಹುದು.

ಇದನ್ನೂ ಓದಿ: Maruti WagonR 2026: ಬರುತ್ತಿದೆ ಹೊಸ ವ್ಯಾಗನ್‌ಆರ್‌: ಹೊಸ ಎಂಜಿನ್, ಹೆಚ್ಚು ಮೈಲೇಜ್‌

ಇಪಿಎಫ್ ವಾಟ್ಸಾಪ್ ಚಾನಲ್​ನಲ್ಲಿ ಏನೆಲ್ಲಾ ಮಾಹಿತಿಗಳು ಲಭ್ಯವಾಗಲಿವೆ?

ಇಪಿಎಫ್ ಅಡ್ವಾನ್ಸ್ ಹಿಂಪಡೆಯುವುದು ಹೇಗೆ, ವಿಕಸಿತ ಭಾರತ ರೋಜ್‌ಗಾರ್ ಯೋಜನೆಯ ವಿವರಗಳು ಮತ್ತು ಅರ್ಹತೆಗಳು, ಕೆಲಸ ಬದಲಾಯಿಸಿದ ನಂತರ ಪಿಎಫ್ ಖಾತೆ ವರ್ಗಾವಣೆ ಮತ್ತು ಕೊಡುಗೆಗಳ ಮಾಹಿತಿ, ಪಿಎಫ್ ಕ್ಲೈಮ್, ಯುಎಎನ್ ಸಕ್ರಿಯಗೊಳಿಸುವಿಕೆ (UAN Activation), ಇ-ನಾಮಿನೇಷನ್ ಮತ್ತು ಪಿಂಚಣಿ ಸಂಬಂಧಿತ ಉಪಯುಕ್ತ ಮಾಹಿತಿ ಸಿಗುತ್ತದೆ. ಬೇಕಾದಲ್ಲಿ ಸಂಬಂಧಿತ ಯೂಟ್ಯೂಬ್ ವೀಡಿಯೊ ಲಿಂಕ್‌ಗಳು ಲಭ್ಯವಿರುತ್ತವೆ.

ಮುಂದಿನ ಹೆಜ್ಜೆ – ‘Hello’ ಚಾಟ್‌ಬಾಟ್ ಸೇವೆ

ಪ್ರಸ್ತುತ ಚಾನಲ್ ಮೂಲಕ ಅಪ್​ಡೇಟ್​ಗಳನ್ನು ನೀಡಲಾಗುತ್ತಿದೆ. ಶೀಘ್ರದಲ್ಲೇ ಬೇರೆ ಸೇವೆಗಳೂ ಸೇರಲಿವೆ. ಅಧಿಕೃತ (Green Tick) ವಾಟ್ಸಾಪ್ ಸಂಖ್ಯೆಗೆ “Hello” ಎಂದು ಮೆಸೇಜ್ ಕಳುಹಿಸುವ ಮೂಲಕ ನೇರವಾಗಿ ಪಿಎಫ್ ಬ್ಯಾಲೆನ್ಸ್ (PF Balance) ವೀಕ್ಷಿಸುವುದು, ಕೊನೆಯ 5 ವಹಿವಾಟುಗಳ ವಿವರಗಳು ತಿಳಿಯುವುದು ಮತ್ತು ಕ್ಲೈಮ್ ಸ್ಟೇಟಸ್ (Claim Status) ತಿಳಿಯುವುದು ಇತ್ಯಾದಿ ಸೌಲಭ್ಯಗಳೂ ಬರಲಿವೆ.

ಇದನ್ನೂ ಓದಿ: ಜಪಾನ್​ನಲ್ಲಿ ಮಾರುತಿ ಕಾರುಗಳಿಗೆ ಹೆಚ್ಚಿದ ಬೇಡಿಕೆ; ಮೇಡ್ ಇನ್ ಇಂಡಿಯಾ ಜಿಮ್ನಿ, ಫ್ರಾಂಕ್ಸ್, ಇ-ವಿಟಾರಾ ಕಾರುಗಳ ರಫ್ತು 1 ಲಕ್ಷಕ್ಕಿಂತ ಹೆಚ್ಚು

ಗಮನಿಸಬೇಕಾದ ಸಂಗತಿ ಎಂದರೆ, ಈ ವಾಟ್ಸಾಪ್ ಚಾನಲ್​ನಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆಯಷ್ಟೇ. ಚಾಟ್​ಬಾಟ್​ನಲ್ಲಿ ಪಿಎಫ್ ಬ್ಯಾಲನ್ಸ್ ಇತ್ಯಾದಿ ಬಹಳ ಮೂಲಭೂತ ಕಾರ್ಯಗಳಿಗೆ ಮಾತ್ರ ಅವಕಾಶ ಇರುತ್ತದೆ. ಪಿಎಫ್ ಹಣ ವಿತ್​ಡ್ರಾ ಮಾಡಿಕೊಳ್ಳಲು, ಅಡ್ವಾನ್ಸ್ ಪಡೆಯಲು ಇತ್ಯಾದಿ ಕಾರ್ಯಗಳಿಗೆ ಚಾಟ್​ಬಾಟ್​ನಲ್ಲಿ ಅವಕಾಶ ಇರುವುದಿಲ್ಲ. ಇಪಿಎಫ್​ನ ಅಧಿಕೃತ ಪೋರ್ಟಲ್ ಮತ್ತು ಆ್ಯಪ್​ನಲ್ಲಿ ಮಾತ್ರ ಆ ಸೇವೆಗಳನ್ನು ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us