
ನವದೆಹಲಿ, ಫೆಬ್ರುವರಿ 17: ‘ಕ್ರಿಯೇಟ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ 50ಕ್ಕೂ ಹೆಚ್ಚು ಡೀಪ್-ಟೆಕ್ ಕಂಪನಿಗಳು ತಲೆ ಎತ್ತುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಭಾಗವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಎಐ ಆವಿಷ್ಕಾರಗಳಿಗೆ ಪೂರಕವಾಗಿ ಭಾರತದ ಸೆಮಿಕಂಡಕ್ಟರ್ ಮಿಷನ್ನ ಹಾದಿ ಸಾಗುತ್ತದೆ ಎಂದಿದ್ದಾರೆ. ಹಾಗೆಯೇ, ಮಿಷನ್ನ ಮುಂದಿನ ಹಂತದಲ್ಲಿ ಚಿಪ್ ಡಿಸೈನ್ ಮೇಲೆ ಪ್ರಧಾನ ಗಮನ ಇರುತ್ತದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ, ಭಾರತದಲ್ಲಿ 38,000 ಜಿಪಿಯುಗಳಿದ್ದು, ಈಗ ಮತ್ತಷ್ಟು 20,000 ಜಿಪಿಯುಗಳು ಸೇರ್ಪಡೆಯಾಗಲಿವೆ. ಇದರಿಂದ ದೇಶದ ಎಐ ಕಂಪ್ಯೂಟ್ ಇನ್ಫ್ರಾಸ್ಟ್ರಕ್ಚರ್ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್
‘ಭಾರತದ ಐಟಿ ಸೆಕ್ಟರ್ ನಮ್ಮ ಪಾಲಿಗೆ ಮಹತ್ವದ ಆಸ್ತಿ ಎನಿಸಿದೆ. ಯಾವುದೇ ತಂತ್ರಜ್ಞಾನ ಪರಿವರ್ತನೆಯ ಸಂದರ್ಭದಲ್ಲಿ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದ ನಡುವೆ ಸಹಭಾಗಿತ್ವ ಸಾಧಿಸುವುದು ಅಗತ್ಯ. ಈಗಿರುವ ಕೆಲಸಗಾರರಿಗೆ ಕೌಶಲ್ಯ ಮರುಪೂರಣ, ಕೌಶಲ್ಯ ಅಭಿವೃದ್ಧಿ, ಹೊಸ ಪ್ರತಿಭೆಗಳ ಬೆಳವಣಿಗೆ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಭವಿಷ್ಯದ ತಲೆಮಾರುಗಳನ್ನು ಸಜ್ಜುಗೊಳಿಸುವುದು, ಈ ಮೂರು ಕ್ಷೇತ್ರಗಳಲ್ಲಿ ಉದ್ಯಮ ಮತ್ತು ಶಿಕ್ಷಣ ವಲಯದ ಜೊತೆ ಸಹಭಾಗಿತ್ವ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎಐ ಅಳವಡಿಕೆಯ ಕಾರ್ಯವನ್ನು ಅಶ್ವಿನಿ ವೈಷ್ಣವ್ ಅವರು ಐದನೇ ಕೈಗಾರಿಕಾ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ‘ಎಲ್ಲಾ ಸೆಕ್ಟರ್ನಲ್ಲೂ ಎಐ ಅಳವಡಿಕೆ ಆಗುತ್ತಿದೆ. ಇದು ಐದನೇ ಕೈಗಾರಿಕಾ ಕ್ರಾಂತಿಯ ದ್ಯೋತಕವಾಗಿದೆ. ಆರ್ಥಿಕತೆ ಮತ್ತು ಸಮಾಜದ ಪ್ರತಿಯೊಂದು ಅಂಶದ ಮೇಲೂ ಇದರ ಪ್ರಭಾವ ಇರುತ್ತದೆ. ಎಐನಿಂದ ಪರಿವರ್ತನಾತ್ಮಕ ಪರಿಹಾರಗಳನ್ನು ಕಾಣುತ್ತಿದ್ದೇವೆ. ಹೆಲ್ತ್ಕೇರ್ ಸೇವೆಗಳು ಎಐನಿಂದ ಅಗ್ಗದ ಬೆಲೆಗೆ ಸಿಗುವಂತಾಗುತ್ತದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯಿಂದ ಪ್ರತೀ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಕಲಿಕೆ ಕೊಡಬಹುದು’ ಎಂದು ಎಐನ ಬಹು ಉಪಯುಕ್ತತೆಯ ಸಾಧ್ಯತೆಗಳನ್ನು ಸಚಿವರು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್
All the top executives are present and participating in nearly twenty sessions, reflecting the strong commitment of global AI leaders. AI deployment is expanding across virtually every sector, and it represents the fifth industrial revolution, with the potential to impact every… pic.twitter.com/dlvoFf6hu4
— PIB India (@PIB_India) February 17, 2026
India’s Semiconductor Mission is aligned with AI-driven advancements, with chip design set to be the primary focus in the next phase. Under the ‘Create in India’ initiative, at least 50 deep-tech companies are expected to emerge in the coming years
– Union Minister… pic.twitter.com/RDhSJ06gUS
— PIB India (@PIB_India) February 17, 2026
We are witnessing huge investment interest in the infrastructure and energy sectors. As you all know, India is one of the very few countries where more than 50% of power generation capacity comes from clean sources. That’s a significant achievement; about 51% of our power… pic.twitter.com/NFSUXbO9p6
— PIB India (@PIB_India) February 17, 2026
Investments are coming across all five layers of the AI stack. Venture capital investors are committing funds to deep tech startups, large scale solutions and applications, as well as cutting edge research.
The next generation of #AI models will emerge from both engineering and… pic.twitter.com/bZD2XTIUb3
— PIB India (@PIB_India) February 17, 2026
India’s IT sector stands as one of our greatest assets. During any technological shift, effective management requires collaboration among industry, academia, and government. Currently, we’re partnering with industry and academia on three key areas: reskilling and upskilling the… pic.twitter.com/NzJvSW9KPe
— PIB India (@PIB_India) February 17, 2026
ಎಐ ಅಭಿವೃದ್ಧಿಗೆ ಬೇಕಾದ ಇನ್ಫ್ರಾಸ್ಟ್ರಕ್ಚರ್ ಅಗತ್ಯಗಳಲ್ಲಿ ವಿದ್ಯುತ್ ಪೂರೈಕೆಯೂ ಒಂದು. ಭಾರತದಲ್ಲಿ ವಿದ್ಯುತ್ ತಯಾರಿಕೆಗೆ ರಿನಿವಬಲ್ ಎನರ್ಜಿ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಸಚಿವ ಎ ವೈಷ್ಣವ್ ಪ್ರಸ್ತಅಪಿಸಿದ್ದಾರೆ. ಭಾರತದಲ್ಲಿ ಶೇ. 51ರಷ್ಟು ವಿದ್ಯುತ್ ಉತ್ಪಾದನೆಯು ನವೀಕರಣ ಶಕ್ತಿ ಮೂಲಗಳಿಂದ ಬರುತ್ತಿರುವುದನ್ನು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ