AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

Ashwini Vaishnaw speaks about AI Impact Summit: ಭಾರತದಲ್ಲಿ ಫೆಬ್ರುವರಿ 16ರಿಂದ 20ರವರೆಗೆ ನಡೆಯಲಿರುವ ಎಐ ಇಂಪ್ಯಾಕ್ಟ್ ಸಮಿಟ್ ಹಿಂದಿನ ಆವೃತ್ತಿಗಿಂತ ಹೆಚ್ಚು ಮಹತ್ತರ ಎನಿಸಿದೆ. ಎಐನಿಂದ ಅಪಾಯಗಳನ್ನು ತಡೆಯುವುದು, ಎಐ ಅನ್ನು ಜನಕಲ್ಯಾಣಕ್ಕೆ ಹೇಗೆ ಉಪಯೋಗಿಸುವುದು ಎಂಬುದನ್ನು ಈ ಸಮಿಟ್​ನಲ್ಲಿ ಚರ್ಚಿಸಲಾಗಬಹುದು. ಈ ಕುರಿತು ಸಚಿವ ಡಾ. ಅಶ್ವಿನಿ ವೈಷ್ಣವ್ ಮಾತನಾಡಿದ್ದಾರೆ.

AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2026 | 3:08 PM

Share

ನವದೆಹಲಿ, ಫೆಬ್ರುವರಿ 16: ಎಐ ಇಂಪ್ಯಾಕ್ಟ್ ಸಮಿಟ್ 2026 (AI Impact Summit) ಇಂದಿನಿಂದ ಐದು ದಿನಗಳ ಕಾಲ ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿದೆ. ಇದು ನಾಲ್ಕನೇ ಆವೃತ್ತಿಯಾಗಿದ್ದು, ಭಾರತ ಆತಿಥ್ಯ ವಹಿಸಿರುವುದು ಇದು ಪ್ರಥಮ. ಬಹಳ ಗುರುತರವಾಗಿರುವ ಎಐ ಇಂಪ್ಯಾಕ್ಟ್ ಶೃಂಗಸಭೆ ಹಾಗೂ ಭಾರತದ ಎಐ ದೃಷ್ಟಿಕೋನ ಇತ್ಯಾದಿ ವಿಚಾರದ ಬಗ್ಗೆ ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ಫಿನಾನ್ಷಿಯಲ್ ಎಕ್ಸ್​ಪ್ರೆಸ್ ಪತ್ರಿಕೆ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಏನು ವಿಶೇಷತೆ?

ಭಾರತದಲ್ಲಿ ನಡೆಯುವ ಈ ವರ್ಷದ ಎಐ ಶೃಂಗಸಭೆಯು ಎಐ ಅನ್ನು ಒಂದು ಅಭಿವೃದ್ಧಿ ಸಾಧನವಾಗಿ ತೋರ್ಪಡಿಸುತ್ತದೆ. ಹೆಲ್ತ್​ಕೇರ್, ಕೃಷಿ, ಪಬ್ಲಿಕ್ ಸರ್ವಿಸ್, ಹಣಕಾಸು ಮತ್ತು ಉದ್ದಿಮೆಗಳ ಕ್ಷಮತೆ ಹೆಚ್ಚಿಸಲು ಎಐ ಅನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ಅವಲೋಕಿಸಲಾಗುತ್ತೆ. ನಮ್ಮ ಜೀವನದ ಮೇಲೆ ಎಐನ ಪರಿಣಾಮ ಹೇಗಿರುತ್ತೆ ಎಂಬುದನ್ನೂ ಅವಲೋಕಿಸಲಾಗುತ್ತದೆ ಎಂದು ಡಾ. ಎ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಭಾರತದ ಎಐ ತಂತ್ರಗಾರಿಕೆ ಮತ್ತು ಗುರಿ ಏನು?

‘ಎಐ ಸೇವೆಗಳನ್ನು ಒದಗಿಸುವುದು ನಮ್ಮ ಗುರಿ. ಇಂಡಿಯಾ ಎಐ ಸ್ಟ್ಯಾಕ್​ನ ಎಲ್ಲಾ ಐದು ಲೇಯರ್​ಗಳಲ್ಲಿ ಸಂಯೋಜಿತವಾದ ಮತ್ತು ಪೂರಕವಾದ ನೀತಿ ಇದೆ. ಇಂಡಿಯಾ ಎಐ ಮಿಷನ್ ಮೂಲಕ ಒಂದು ಸಾಮಾನ್ಯ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ರಚಿಸುತ್ತಿದ್ದೇವೆ. ದೇಶೀಯವಾಗಿರುವ ಫೌಂಡೇಶನಲ್ ಎಐ ಮಾಡಲ್​ಗಳನ್ನು ಅಭಿವೃದ್ಧಿಡಿಸುತ್ತಿದ್ದೇವೆ. ಈ ಮಾಡಲ್​ಗಳು ಜಾಗತಿಕ ಗುಣಮಟ್ಟಗಳನ್ನು ತಲುಪುತ್ತಿವೆ. ಸರ್ವಮ್​ನಂತಹ ಮಾಡಲ್​ಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮತ್ತು ವಿಮರ್ಶೆ ಸಿಗುತ್ತಿದೆ’ ಎಂದು ಕೇಂದ್ರ ಸಚಿವರು ಈ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ ದೂರಗಾಮಿ ಎಐ ಅಭಿವೃದ್ದಿಗಾಗಿ ಹಾರ್ಡ್​ವೇರ್ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ. ಅನುಮೋದಿತವಾಗಿರುವ ಹತ್ತು ಸೆಮಿಕಂಡಕ್ಟರ್ ಘಟಕಗಳ ಪೈಕಿ ನಾಲ್ಕರಲ್ಲಿ ಪ್ರಾಯೋಗಿಕ ಉತ್ಪಾದನೆ ಶುರುವಾಗಿದೆ. ಈ ವರ್ಷ ಕಮರ್ಷಿಯಲ್ ಆಗಿ ಉತ್ಪಾದನೆ ಆರಂಭವಾಗುತ್ತದೆ. ಭಾರತೀಯ ಕಂಪನಿಗಳು 2ಎನ್​ಎಂ ಚಿಪ್​ಗಳ ಡಿಸೈನ್ ಮಾಡುತ್ತಿವೆ. 2035ರೊಳಗೆ ನಾವು ವಿಶ್ವದ ಅಗ್ರ 3-4 ಸೆಮಿಕಂಡಕ್ಟರ್ ರಾಷ್ಟ್ರಗಳ ಸಾಲಿಗೆ ಸೇರುವ ಹಾದಿಯಲ್ಲಿದ್ದೇವೆ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ

ಈ ಸಮಿಟ್ ಮೂಲಕ ಭಾರತದಿಂದ ವಿಶ್ವಕ್ಕೆ ಸಂದೇಶವೇನು?

ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಎಐ ಬಳಕೆಯಾಗಬೇಕು ಎಂಬುದು ಭಾರತದ ಭಾವನೆ. ಆರೋಗ್ಯಪಾಲನೆ ಉತ್ತಮಗೊಳಿಸಲು ಹೊಸ ಮಾರ್ಗ ಕಂಡುಕೊಳ್ಳುವುದು, ಎಐನ ತಪ್ಪು ಪರಿಣಾಮಗಳಿಂದ ಜಗತ್ತನ್ನು ರಕ್ಷಿಸುವುದು, ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗಳಿಗೆ ಉತ್ತಮ ಪರಿಹಾರೋಪಾಯ ಮಾಡುವುದು ಇಂತಹ ಕೆಲಸಗಳನ್ನು ಎಐನಿಂದ ಮಾಡಿಸುವುದು ಭಾರತದ ನಿಲುವು ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!