AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ

Patanjali Ayurved and DS Group acquiring Magma General insurance company: ಪತಂಜಲಿ ಆಯುರ್ವೇದ ಸಂಸ್ಥೆ ಇನ್ಷೂರೆನ್ಸ್ ಬ್ಯುಸಿನೆಸ್​ಗೆ ಕಾಲಿಡುತ್ತಿದೆ. ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯನ್ನು ಖರೀದಿಸುತ್ತಿದೆ. ಪತಂಜಲಿ ಆಯುರ್ವೇದ ಮತ್ತು ಡಿಎಸ್ ಗ್ರೂಪ್ ಜಂಟಿಯಾಗಿ ಖರೀದಿಸಲಿರುವ ಈ ಡೀಲ್​ಗೆ ಐಆರ್​ಡಿಎಐ ಅನುಮೋದನೆ ನೀಡಿದೆ. ಮೂರು ತಿಂಗಳಲ್ಲಿ ಖರೀದಿ ಆಗಬೇಕು.

Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ
ಬಾಬಾ ರಾಮದೇವ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2026 | 4:46 PM

Share

ಮುಖ್ಯಾಂಶಗಳು

  • ಪತಂಜಲಿ ಆಯುರ್ವೇದ ಸಂಸ್ಥೆ ಇನ್ಷೂರೆನ್ಸ್ ಬ್ಯುಸಿನೆಸ್​ಗೆ ಕಾಲಿಡುತ್ತಿದೆ.
  • ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯನ್ನು ಖರೀದಿಸುತ್ತಿದೆ.
  • ಪತಂಜಲಿಯ ಈ ಖರೀದಿಗೆ ಐಆರ್​ಡಿಎಐ ಅನುಮೋದನೆ ನೀಡಿದೆ.

ನವದೆಹಲಿ, ಜುಲೈ 31: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ (Patanjali Ayurved) ಕಂಪನಿಯು ವಿಮಾ ಕ್ಷೇತ್ರಕ್ಕೆ ಕಾಲಿಡಲು ಮಹತ್ವದ ಹೆಜ್ಜೆ ಇಟ್ಟಿದೆ. ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯ (Magma General Insurance) ಸ್ವಾಧೀನಕ್ಕೆ ಪತಂಜಲಿ ಮುಂದಾಗಿದೆ. ವಿಮಾ ನಿಯಂತ್ರಕ ಸಂಸ್ಥೆಯಾದ IRDAI ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಡಿಎಸ್ ಗ್ರೂಪ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗಳು ಜಂಟಿಯಾಗಿ ಈ ಖರೀದಿ ಮಾಡುತ್ತಿವೆ. ಒಪ್ಪಂದದ ಒಟ್ಟು ಮೌಲ್ಯ ಅಂದಾಜು ₹4,500 ಕೋಟಿಯಷ್ಟಿದೆ.

ಪತಂಜಲಿ ಪಾಲು 73%

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ಸೀರಂ ಇನ್ಸ್​ಟಿಟ್ಯೂಟ್​ನ ಸಿಇಒ ಅದಾರ್ ಪೂನಾವಾಲಾ ಅವರ ಒಡೆತನ ಸನೋತಿ ಪ್ರಾಪರ್ಟೀಸ್ (Sanoti Properties) ಮೊದಲಾದವರು ಪ್ರಮುಖ ಷೇರುದಾರರಿದ್ದಾರೆ. ಪತಂಜಲಿ ಆಯುರ್ವೇದ ಸಂಸ್ಥೆಯು ಮ್ಯಾಗ್ಮಾದಲ್ಲಿ 73.56% ಷೇರುಪಾಲು ಪಡೆದು ಪ್ರಮುಖ ಪ್ರೊಮೋಟರ್ ಎನಿಸಲಿದೆ. ರಜನಿಗಂಧ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವ ಡಿಎಸ್ ಗ್ರೂಪ್ ಸಂಸ್ಥೆಯು ಮ್ಯಾಗ್ಮಾ ಇನ್ಷೂರೆನ್ಸ್ ಕಂಪನಿಯಲ್ಲಿ 24.5% ಪಾಲು ಪಡೆಯುತ್ತದೆ. ಮ್ಯಾಗ್ಮಾದ ಈಗಿರನ ಶೇ. 98ರಷ್ಟು ಷೇರುಗಳನ್ನು ಪತಂಜಲಿ ಮತ್ತು ಡಿಎಸ್ ಗ್ರೂಪ್ ಖರೀದಿಸುತ್ತಿವೆ.

ಇದನ್ನೂ ಓದಿ: ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು

ಆಯುರ್ವೇದದಿಂದ ವಿಮಾ ವಲಯಕ್ಕೆ ಪತಂಜಲಿ ಪ್ರವೇಶ

ಎಫ್‌ಎಂಸಿಜಿ (FMCG) ಮತ್ತು ಆಯುರ್ವೇದ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗಿರುವ ಪತಂಜಲಿ ಸಂಸ್ಥೆ ಈ ಒಪ್ಪಂದದೊಂದಿಗೆ ಅಧಿಕೃತವಾಗಿ ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಕ್ಕೆ (Financial Services & Insurance Sector) ಕಾಲಿಟ್ಟಂತಾಗಿದೆ.

ಪತಂಜಲಿ ವಿಸ್ತೃತವಾದ ರೀಟೇಲ್ ನೆಟ್ವರ್ಕ್ ಮತ್ತು ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ (Retail & Distribution Network) ಹೊಂದಿದೆ. ಗ್ರಾಮೀಣ ಮಾರುಕಟ್ಟೆಯಲ್ಲೂ ಆಳವಾಗಿ ಬೇರೂರಿದೆ. ಈ ಶಕ್ತಿಯನ್ನು ಬಳಸಿ ದೇಶದ ಮೂಲೆ ಮೂಲೆಗೆ ವಿಮಾ ಸೇವೆ ತಲುಪಿಸುವ ಗುರಿ ಹೊಂದಿದೆ.

ಈ ಒಪ್ಪಂದಕ್ಕೆ ಐಆರ್​ಡಿಎಐ ನೀಡಿರುವ ಸಮ್ಮತಿಯು ಮೂರು ತಿಂಗಳವರೆಗೆ ಸಿಂಧು ಇರುತ್ತದೆ. ಅಂದರೆ, ಈ ಮೂರು ತಿಂಗಳೊಳಗೆ ಪತಂಜಲಿ ಆಯುರ್ವೇದ ಮತ್ತು ಡಿಎಸ್ ಗ್ರೂಪ್ ಸಂಸ್ಥೆಗಳು ಮ್ಯಾಗ್ಮಾವನ್ನು ಖರೀದಿಸಬೇಕು. ಇಲ್ಲವಾದರೆ, ಒಪ್ಪಂದವು ಅನೂರ್ಜಿತಗೊಳ್ಳುತ್ತದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಮ್ಯಾಗ್ಮಾ ಜನರಲ್ ಇನ್ಷೂರೆನ್ಸ್ ಕಂಪನಿಯು ಜೀವ ವಿಮೆ ಬಿಟ್ಟು ಇತರ ಇನ್ಷೂರೆನ್ಸ್ ಸೆಗ್ಮೆಂಟ್​ಗಳಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ವಾಹನ ವಿಮೆ, ಆರೋಗ್ಯ ವಿಮೆ, ಆಸ್ತಿ ವಿಮೆ, ವಾಣಿಜ್ಯ ವಿಮೆ ಇತ್ಯಾದಿ ಸೆಗ್ಮೆಂಟ್​ಗಳಲ್ಲಿ ಇದು ವಿಮೆ ಮಾಡುತ್ತದೆ. 2025-26ರಲ್ಲಿ ಈ ಕಂಪನಿಯು 3,615 ಕೋಟಿ ರೂ ಮೊತ್ತದ ಪ್ರೀಮಿಯಮ್​ಗಳನ್ನು ಪಡೆದಿತ್ತು.

ಮಾರುಕಟ್ಟೆಯಲ್ಲಿ ಸಾಕಷ್ಟು ಗುರುತು ಮಾಡಿರುವ ಮ್ಯಾಗ್ಮಾ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡರೆ ಪತಂಜಲಿ ಸಂಸ್ಥೆ ಸುಲಭವಾಗಿ ಮಾರುಕಟ್ಟೆ ಪ್ರವೇಶಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಾಮನಗರ KSRTC ಬಸ್ ನಿಲ್ದಾಣದಲ್ಲಿ ಹೈಡ್ರಾಮಾ
ರಾಮನಗರ KSRTC ಬಸ್ ನಿಲ್ದಾಣದಲ್ಲಿ ಹೈಡ್ರಾಮಾ
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಕೈ ಶಾಸಕನ ಎಡವಟ್ಟು:ಆಸ್ಪತ್ರೆಯಲ್ಲಿ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಪಟ್ಟು ಸಡಿಲಿಸದ ಬಿಜೆಪಿ, ಸಚಿವ ನಾಗೇಂದ್ರ ರಾಜೀನಾಮೆಗೆ ಮತ್ತೊಂದು ಹೋರಾಟ
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ