AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಕಬಿನಿ, KRS ಡ್ಯಾಂ ಇಂದಿನ ಕಂಪ್ಲೀಟ್ ರಿಪೋರ್ಟ್

ಅಕ್ಟೋಬರ್ 1 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ. ಕೆಆರ್‌ಎಸ್, ಕಬಿನಿ, ಹೇಮಾವತಿ, ತುಂಗಭದ್ರಾ, ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳ ಪ್ರಸ್ತುತ ನೀರಿನ ಸಂಗ್ರಹ ಸಾಮರ್ಥ್ಯದೊಂದಿಗೆ, ಅವುಗಳ ಇಂದಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವರದಿ ರೈತರಿಗೆ ಮತ್ತು ನೀರಾವರಿ ನಿರ್ವಹಣೆಗೆ ಸಹಾಯಕ.

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಕಬಿನಿ, KRS ಡ್ಯಾಂ ಇಂದಿನ ಕಂಪ್ಲೀಟ್ ರಿಪೋರ್ಟ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 01, 2026 | 11:11 AM

Share

ಬೆಂಗಳೂರು, ಅ.1: ರಾಜ್ಯಾದ್ಯಂತ ಇರುವ ಪ್ರಮುಖ ಜಲಾಶಯಗಳ ಅಕ್ಟೋಬರ್ 1ರ ಇಂದಿನ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ತಾಜಾ ಅಂಕಿ-ಅಂಶಗಳ ವಿವರ ಇಲ್ಲಿದೆ. ಕೆ.ಆರ್.ಸಾಗರ, ಕಬಿನಿ, ಹೇಮಾವತಿ, ತುಂಗಭದ್ರಾ, ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳ ಇಂದಿನ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.

ಕೆ.ಆರ್.ಸಾಗರ ಜಲಾಶಯ (ಮಂಡ್ಯ):

ಮಂಡ್ಯ ಜಿಲ್ಲೆಯ ಕೆ.ಆರ್.ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಹಾಗೂ ನೀರಿನ ಸಂಗ್ರಹದ ವಿವರ:

ಇಂದಿನ ನೀರಿನ ಮಟ್ಟ: 104.15 ಅಡಿ (ಗರಿಷ್ಠ ಮಟ್ಟ: 124.80 ಅಡಿ)

ಒಳಹರಿವು: 465 ಕ್ಯೂಸೆಕ್

ಹೊರಹರಿವು: 3,078 ಕ್ಯೂಸೆಕ್

ನೀರಿನ ಸಂಗ್ರಹ: 26.240 ಟಿಎಂಸಿ

ಕಬಿನಿ ಜಲಾಶಯ (ಮೈಸೂರು):

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ ವ್ಯಾಪ್ತಿಯಲ್ಲಿ 1 ಮಿ.ಮೀ ಮಳೆಯಾಗಿದ್ದು, ನೀರಿನ ಸ್ಥಿತಿ ಹೀಗಿದೆ:

ಗರಿಷ್ಠ ಮಟ್ಟ: 84 ಅಡಿ

ಇಂದಿನ ನೀರಿನ ಮಟ್ಟ: 68.85 ಅಡಿ

ಒಟ್ಟು ನೀರಿನ ಸಂಗ್ರಹ: 11.12 ಟಿಎಂಸಿ

ಬಳಕೆಗೆ ಲಭ್ಯವಿರುವ ನೀರು: 1.31 ಟಿಎಂಸಿ

ಒಳಹರಿವು: 870 ಕ್ಯೂಸೆಕ್

ಹೊರಹರಿವು: ಒಟ್ಟು 1,325 ಕ್ಯೂಸೆಕ್ (ನದಿಗೆ 525 ಕ್ಯೂಸೆಕ್ & ಬಲದಂಡೆ (RBC) ನಾಲೆಗೆ 800 ಕ್ಯೂಸೆಕ್). ಎಡದಂಡೆ (LBC) ನಾಲೆಗೆ ನೀರಿನ ಬಿಡುಗಡೆ ಇಲ್ಲ.

ಹೇಮಾವತಿ ಜಲಾಶಯ (ಹಾಸನ):

ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಇಂದಿನ ಸ್ಥಿತಿಗತಿ:

ಗರಿಷ್ಠ ಮಟ್ಟ: 2,922.00 ಅಡಿ

ಇಂದಿನ ನೀರಿನ ಮಟ್ಟ: 2,892.05 ಅಡಿ

ಗರಿಷ್ಠ ಸಂಗ್ರಹ ಸಾಮರ್ಥ್ಯ: 37.103 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 15.205 ಟಿಎಂಸಿ

ಬಳಕೆಗೆ ಲಭ್ಯವಿರುವ ನೀರು (Live Storage): 10.833 ಟಿಎಂಸಿ

ಒಳಹರಿವು: 988 ಕ್ಯೂಸೆಕ್

ಆಲಮಟ್ಟಿ ಡ್ಯಾಂ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ) – ವಿಜಯಪುರ:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ವಿವರ:

ಗರಿಷ್ಠ ಮಟ್ಟ: 519.60 ಮೀಟರ್

ಇಂದಿನ ನೀರಿನ ಮಟ್ಟ: 518.47 ಮೀಟರ್

ಒಳಹರಿವು: ಸಂಪೂರ್ಣ ಶೂನ್ಯ (ಇಲ್ಲ)

ಹೊರಹರಿವು: 10,451 ಕ್ಯೂಸೆಕ್

ಬಸವಸಾಗರ ಜಲಾಶಯ (ನಾರಾಯಣಪುರ) – ಯಾದಗಿರಿ:

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಜಲಾಶಯ:

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ಮಟ್ಟ: 491.26 ಮೀಟರ್

ಒಳಹರಿವು: 8,863 ಕ್ಯೂಸೆಕ್

ಹೊರಹರಿವು: 366 ಕ್ಯೂಸೆಕ್

ಇದನ್ನೂ ಓದಿ; ಮಂಗಳೂರು MRPL ಸ್ಫೋಟಕ್ಕೆ ಕಾರಣವಾಯ್ತಾ ದೈವಾಕ್ರೋಶ?: ‘ನನ್ನ ದೈವಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ ಎಂದು ಎಚ್ಚರಿಸಿದ್ದ ಕಾಂತೇರಿ ಜುಮಾದಿ ದೈವ

ತುಂಗಭದ್ರಾ ಜಲಾಶಯ (ವಿಜಯನಗರ):

ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ಇಂದಿನ ಸ್ಥಿತಿ:

ಗರಿಷ್ಠ ಮಟ್ಟ (FRL): 1,633.00 ಅಡಿ

ಇಂದಿನ ನೀರಿನ ಮಟ್ಟ: 1,623.281 ಅಡಿ

ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ

ಇಂದಿನ ಸಂಗ್ರಹ: 71.018 ಟಿಎಂಸಿ

ಒಳಹರಿವು: ಶೂನ್ಯ (Nil)

ಹೊರಹರಿವು: 9,573 ಕ್ಯೂಸೆಕ್ (ವಿವಿಧ ನಾಲೆಗಳ ಮೂಲಕ)

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More