AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎಲ್ಲರೂ ಸಂಪಾದನೆ ಕೇಳ್ತಾರೆ, ನಮ್ಮ ತ್ಯಾಗಗಳು ಕಾಣಲ್ಲ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಾಡದಲ್ಲಿ ನೆಲೆಸಿರುವ ಭಾರತೀಯ ಯುವತಿ

ವಿದೇಶದಲ್ಲಿ ಉದ್ಯೋಗ ಸಿಕ್ಕಿದ್ರೆ ಲೈಫ್ ಸೆಟ್ಲ್ ಆದಂತೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಕುಟುಂಬದಿಂದ ದೂರ ಉಳಿದು ಒಂದೊಂದು ರೂಪಾಯಿ ಸಂಪಾದಿಸುವ ವ್ಯಕ್ತಿಗಳ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಯುವತಿ ಇದೇ ವಿಚಾರವಾಗಿ ಮಾತನಾಡಿದ್ದಾಳೆ. ಎಲ್ಲರೂ ಡಾಲರ್ ನೋಡ್ತಾರೆ, ಆದರೆ ನಾವು ಮಾಡುವ ತ್ಯಾಗ ಕಾಣಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎಲ್ಲರೂ ಸಂಪಾದನೆ ಕೇಳ್ತಾರೆ, ನಮ್ಮ ತ್ಯಾಗಗಳು ಕಾಣಲ್ಲ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಕೆನಾಡದಲ್ಲಿ ನೆಲೆಸಿರುವ ಭಾರತೀಯ ಯುವತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 01, 2026 | 11:42 AM

Share

ವಿದೇಶ ಅಂದ್ರೆ ಹೆಚ್ಚಿನವರಿಗೆ ಅದೇನೋ ಕ್ರೇಜ್. ಹೀಗಾಗಿ ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ಹೆಚ್ಚಿನವರು ವಿದೇಶಕ್ಕೆ (foreign) ತೆರಳುತ್ತಾರೆ. ಹೀಗೆ ವರ್ಷಾನುಗಟ್ಟಲೇ ವಿದೇಶದಲ್ಲಿ ನೆಲೆಸಿದವರಿಗೆ ಮತ್ತೆ ಹುಟ್ಟೂರಿಗೆ ಮರಳುತ್ತಾರೆ. ಆದರೆ ಅವರುಗಳು ಮಾಡುವ ತ್ಯಾಗ ಮಾತ್ರ ಯಾರಿಗೂ ಕಾಣಲ್ಲ. ಇಲ್ಲೊಬ್ಬ ಯುವತಿ ಕೂಡ ಕೈ ತುಂಬಾ ಸಂಬಳ ಸಿಗುತ್ತೆ, ಆದರೆ ನಮ್ಮ ತ್ಯಾಗಗಳು ಕಾಣಲ್ಲ. ನಾವು ಕುಟುಂಬ ತಂದೆ ತಾಯಿಯನ್ನು ಬಿಟ್ಟು ದೂರ ಇರ್ತೇವೆ. ದಿನನಿತ್ಯದ ಒದ್ದಾಟಗಳು ಯಾರಿಗೂ ಕಾಣಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಮ್ಮ ಮಾತು ನಿಜ ಎಂದು ಒಪ್ಪಿಕೊಂಡಿದ್ದಾರೆ.

ನಮ್ಮ ಆರೈಕೆ ನಾವೇ ಮಾಡ್ಬೇಕು ಎಂದ ಯುವತಿ

ಕನುಪ್ರಿಯಾ (Kanupria) ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶಿ ಜೀವನದ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ವಿದೇಶಕ್ಕೆ ಹೋದವರು ಕೈ ತುಂಬಾ ಹಣ ಸಂಪಾದನೆ ಮಾಡ್ತಾರೆ ಎಂದು ಹೇಳ್ತಾರೆ. ಆದರೆ ನಾವು ಮಾಡುವ ತ್ಯಾಗಗಳು ಕಾಣಲ್ಲ. ಎರಡು ಮೂರು ವರ್ಷಗಳ ಕಾಲ ವಿದೇಶದಲ್ಲಿಯೇ ನೆಲೆಸಿ ಹುಟ್ಟೂರಿಗೆ ಹೋದಾಗ ತಂದೆ ತಾಯಿಗೆ ವಯಸ್ಸಾಗಿದೆ ಎಂಬ ಸತ್ಯವು ಅರಿವಿಗೆ ಬರುತ್ತದೆ. ಮನೆ ಸಮಾರಂಭ, ಹಬ್ಬಗಳ ಸಡಗರ ಸಂಭ್ರಮವನ್ನು ನೋಡುವುದು ವಿಡಿಯೋ ಕಾಲ್ ನಲ್ಲಿ ಮಾತ್ರವಾಗುತ್ತದೆ. ಇನ್ನು ಆರೋಗ್ಯ ಹದಗೆಟ್ಟಾಗ ನಮ್ಮನ್ನು ನಾವೇ ನೋಡಿಕೊಳ್ಳಬೇಕು ಎಂದು ವಾಸ್ತವ ಸ್ಥಿತಿ ವಿವರಿಸಿದ್ದಾಳೆ.

ಯೋಗ ಕ್ಷೇಮ ವಿಚಾರಿಸಲು ಯಾರು ಇಲ್ಲ

ಆರೋಗ್ಯ ಸಮಸ್ಯೆ ಎದುರಾದಾಗ ಮಾತ್ರೆ ನುಂಗುವುದು, ಅಡುಗೆ ಮಾಡುವುದು ಹೀಗೆ ಪ್ರತಿಯೊಂದು ಕೆಲಸದ ಜವಾಬ್ದಾರಿಗಳು ನಮ್ಮ ತಲೆ ಮೇಲೆಯೇ ಇರುತ್ತದೆ. ನಮ್ಮ ಯೋಗ ಕ್ಷೇಮ ವಿಚಾರಿಸಲು ಯಾರು ಇರಲ್ಲ. ಆದರೆ ಎಲ್ಲರೂ ಡಾಲರ್ ಲೆಕ್ಕ ಹಾಕ್ತಾರೆ, ಆದರೆ ನಮ್ಮ ತ್ಯಾಗಗಳು ಯಾರಿಗೂ ಕಾಣಲ್ಲ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕೆಟ್ ಸವಿದು ಕ್ಯೂಟ್‌ ರಿಯಾಕ್ಷನ್‌ ಕೊಟ್ಟ ಕೆನಡಿಯನ್ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿರುವ ಪ್ರತಿಯೊಬ್ಬರ ಬದುಕು ಐಷಾರಾಮಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕುಟುಂಬಕ್ಕಾಗಿ ತ್ಯಾಗ ಮಾಡುವುದು ಅನಿರ್ವಾಯ ಎಂದಿದ್ದಾರೆ. ಮತ್ತೊಬ್ಬರು, ಒಂದನ್ನು ಪಡೆಯಲು ಮತ್ತೊಂದನ್ನು ತ್ಯಾಗ ಮಾಡಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More