AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಇಂಧನ ದರದಲ್ಲಿ ಭಾರೀ ಏರಿಕೆ, ವಿಮಾನಯಾನ ಸಂಸ್ಥೆಗಳ ವೆಚ್ಚ ಹೆಚ್ಚಳ, ಟಿಕೆಟ್ ದರದ ಮೇಲೆ ಎಲ್ಲರ ಚಿತ್ತ

ಜೆಟ್ ಇಂಧನ (ATF) ದರದಲ್ಲಿ ಲೀಟರ್‌ಗೆ ₹16 ಏರಿಕೆಯಾಗಿದ್ದು, ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಇದು ವಿಮಾನ ಟಿಕೆಟ್ ದರಗಳ ಮೇಲೆ ನೇರ ಪರಿಣಾಮ ಬೀರಬಹುದೇ ಎಂಬ ಆತಂಕ ಸೃಷ್ಟಿಸಿದೆ. ಆದರೂ, ಪ್ರಯಾಣಿಕರ ಬೇಡಿಕೆ, ಸ್ಪರ್ಧೆ ಇತ್ಯಾದಿ ಅಂಶಗಳು ಟಿಕೆಟ್ ದರವನ್ನು ನಿರ್ಧರಿಸುತ್ತವೆ. ವಾಣಿಜ್ಯ LPG ದರವೂ ಏರಿದೆ, ಆದರೆ ಗೃಹ ಬಳಕೆಯ LPG ಮತ್ತು ಇಂಧನ ದರದಲ್ಲಿ ಬದಲಾವಣೆ ಇಲ್ಲ

ವಿಮಾನ ಇಂಧನ ದರದಲ್ಲಿ ಭಾರೀ ಏರಿಕೆ, ವಿಮಾನಯಾನ ಸಂಸ್ಥೆಗಳ ವೆಚ್ಚ ಹೆಚ್ಚಳ, ಟಿಕೆಟ್ ದರದ ಮೇಲೆ ಎಲ್ಲರ ಚಿತ್ತ
ವಿಮಾನ Image Credit source: Getty Images
ನಯನಾ ರಾಜೀವ್
|

Updated on: Oct 01, 2026 | 10:12 AM

Share

ನವದೆಹಲಿ, ಅಕ್ಟೋಬರ್ 1: ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಅಕ್ಟೋಬರ್ ಆರಂಭದಲ್ಲೇ ಇಂಧನ ಬೆಲೆ ಏರಿಕೆಯ ಹೊರೆ ಎದುರಾಗಿದೆ. ವಿಮಾನ ಟರ್ಬೈನ್ ಇಂಧನ (ATF) ದರ ಲೀಟರ್‌ಗೆ ಸುಮಾರು 16 ರೂ. ಹೆಚ್ಚಳವಾಗಿ, 121 ರೂ.ನಿಂದ 137 ರೂ.ಗೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲೂ ಎಟಿಎಫ್ ದರ 6.28 ರೂ.ನಷ್ಟು ಹೆಚ್ಚಾಗಿತ್ತು. ಎಟಿಎಫ್ ವಿಮಾನಯಾನ ಸಂಸ್ಥೆಗಳ ಪ್ರಮುಖ ನಿರ್ವಹಣಾ ವೆಚ್ಚವಾಗಿದ್ದು, ಒಟ್ಟು ಕಾರ್ಯಾಚರಣಾ ವೆಚ್ಚದ ಸುಮಾರು ಶೇ.35–40 ವರೆಗೆ ಇಂಧನಕ್ಕೆ ಹೋಗಬಹುದು. ಹೀಗಾಗಿ ಇಂಧನ ದರ ನಿರಂತರವಾಗಿ ಏರಿದರೆ ವಿಮಾನಯಾನ ಸಂಸ್ಥೆಗಳ ಮೇಲಿನ ವೆಚ್ಚದ ಒತ್ತಡ ಹೆಚ್ಚಾಗಬಹುದು.

ಟಿಕೆಟ್ ದರ ಕೂಡ ಹೆಚ್ಚಾಗುತ್ತದೆಯೇ?

ಎಟಿಎಫ್ ಬೆಲೆ ಏರಿಕೆಯ ಪರಿಣಾಮವಾಗಿ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ತಕ್ಷಣವೇ ವಿಮಾನ ಟಿಕೆಟ್ ದರ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಟಿಕೆಟ್ ದರವನ್ನು ಪ್ರಯಾಣಿಕರ ಬೇಡಿಕೆ, ಸೀಟ್ ಲಭ್ಯತೆ, ಮಾರ್ಗ, ಸ್ಪರ್ಧೆ ಮತ್ತು ವಿಮಾನಯಾನ ಸಂಸ್ಥೆಗಳ ದರ ನೀತಿ ಸೇರಿದಂತೆ ಹಲವು ಅಂಶಗಳು ನಿರ್ಧರಿಸುತ್ತವೆ.

ಕಮರ್ಷಿಯಲ್ ಎಲ್​ಪಿಜಿ ಕೂಡ ದುಬಾರಿ

ವಿಮಾನ ಇಂಧನದ ಜೊತೆಗೆ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆ 62.50 ರೂ.ನಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಹೊಸ ದರ 2,810 ರೂ. ಆಗಿದೆ. ಮುಂಬೈನಲ್ಲಿ 2,764 ರೂ., ಚೆನ್ನೈನಲ್ಲಿ 2,983 ರೂ. ಮತ್ತು ಪಾಟ್ನಾದಲ್ಲಿ 3,100.50 ರೂ.ಗೆ ತಲುಪಿದೆ. ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಇತರ ವಾಣಿಜ್ಯ ಬಳಕೆದಾರರ ಮೇಲೆ ಇದರ ನೇರ ಪರಿಣಾಮ ಬೀಳಲಿದೆ.

ಮತ್ತಷ್ಟು ಓದಿ: LPG Cylinder Price Hike: ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಹೆಚ್ಚಿದ ಹೊರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಭಾರೀ ಹೆಚ್ಚಳ

ಗೃಹಬಳಕೆದಾರರಿಗೆ ಸದ್ಯಕ್ಕೆ ನೆಮ್ಮದಿ

14.2 ಕೆಜಿ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಅದು 942 ರೂ.ನಲ್ಲೇ ಮುಂದುವರೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಈ ಪರಿಷ್ಕರಣೆಯ ಸಂದರ್ಭದಲ್ಲಿ ಬದಲಾವಣೆ ಮಾಡಲಾಗಿಲ್ಲ.

ಬೆಲೆಗಳು ಏಕೆ ಬದಲಾಗುತ್ತವೆ?

ಎಟಿಎಫ್ ಮತ್ತು ಎಲ್​ಪಿಜಿ ದರಗಳ ಮಾಸಿಕ ಪರಿಷ್ಕರಣೆಯಲ್ಲಿ ಅಂತಾರಾಷ್ಟ್ರೀಯ ಬೆಂಚ್‌ಮಾರ್ಕ್ ಬೆಲೆಗಳು ಮತ್ತು ರೂಪಾಯಿ–ಡಾಲರ್ ವಿನಿಮಯ ದರ ಪ್ರಮುಖ ಪಾತ್ರ ವಹಿಸುತ್ತವೆ. ರಾಜ್ಯ ತೆರಿಗೆಗಳ ಕಾರಣ ವಿವಿಧ ನಗರಗಳಲ್ಲಿ ಅಂತಿಮ ಬೆಲೆಗಳು ಭಿನ್ನವಾಗಿರಬಹುದು. ಅಕ್ಟೋಬರ್ 1ರಿಂದ ಸಬ್ಸಿಡಿ ದರದಲ್ಲಿ ಗೃಹ ಎಲ್​ಪಿಜಿ ರಿಫಿಲ್ ಪಡೆಯಲು ಬಯಸುವ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಡ್ಡಾಯವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ 19ರ ವೇಳೆಗೆ 27.43 ಕೋಟಿ, ಅಂದರೆ ಶೇ.89.9 ಸಕ್ರಿಯ ಗೃಹ ಎಲ್​ಪಿಜಿ ಗ್ರಾಹಕರು ದೃಢೀಕರಣ ಪೂರ್ಣಗೊಳಿಸಿದ್ದರು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More