AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿನಿಮಮ್ ಬ್ಯಾಲನ್ಸ್ ದಂಡದಿಂದಲೇ ಬ್ಯಾಂಕುಗಳ ಖಜಾನೆಗೆ 7,100 ಕೋಟಿ ರೂ ಭರ್ತಿ

Banks get Rs 7,098 crore from minimum balance penalties: 2025-26ರ ಹಣಕಾಸು ವರ್ಷದಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರಿಂದ ಬ್ಯಾಂಕುಗಳು ವಸೂಲಿ ಮಾಡಿರುವ ದಂಡದ ಹಣ ಬರೋಬ್ಬರಿ 7,100 ಕೋಟಿ ರೂ ಎನ್ನಲಾಗಿದೆ. ಹಿಂದಿನ ವರ್ಷದಲ್ಲಿ ಇದು 6,800 ಕೋಟಿ ರೂ ಇತ್ತು. ಹೆಚ್ಚಿನ ಸರ್ಕಾರಿ ಬ್ಯಾಂಕುಗಳು ಇತ್ತೀಚೆಗೆ ಆರ್​ಬಿಐ ನಿರ್ದೇಶನದ ಮೇರೆಗೆ ಮಿನಿಮಮ್ ಬ್ಯಾಲನ್ಸ್ ಚಾರ್ಜ್ ರದ್ದುಗೊಳಿಸಿವೆ.

ಮಿನಿಮಮ್ ಬ್ಯಾಲನ್ಸ್ ದಂಡದಿಂದಲೇ ಬ್ಯಾಂಕುಗಳ ಖಜಾನೆಗೆ 7,100 ಕೋಟಿ ರೂ ಭರ್ತಿ
ಎಚ್‌ಡಿಎಫ್‌ಸಿ ಬ್ಯಾಂಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2026 | 5:37 PM

Share

ನವದೆಹಲಿ, ಜುಲೈ 31: ಬ್ಯಾಂಕ್ ಖಾತೆಗಳಲ್ಲಿ ನಿಗದಿತ ಕನಿಷ್ಠ ಸರಾಸರಿ ಶಿಲ್ಕು (Minimum Average Balance – MAB) ಕಾಯ್ದುಕೊಳ್ಳದ ಗ್ರಾಹಕರಿಂದ ದಂಡದ ರೂಪದಲ್ಲಿ ಬ್ಯಾಂಕುಗಳು ಕಲೆಹಾಕಿರುವ ಮೊತ್ತ ಬರೋಬ್ಬರಿ ₹7,000 ಕೋಟಿಗಿಂತಲೂ ಹೆಚ್ಚು. 2025-26ರ ಹಣಕಾಸು ವರ್ಷದಲ್ಲಿ ಭಾರತದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಒಟ್ಟು ₹7,098 ಕೋಟಿ ದಂಡವನ್ನು ದಂಡದ ರೂಪದಲ್ಲಿ ವಸೂಲಿ ಮಾಡಿವೆ. ಹಿಂದಿನ ವರ್ಷದಲ್ಲಿ (2024-25) ಇದು ₹6,800 ಕೋಟಿ ಇತ್ತು.

ಮಿನಿಮಮ್ ಬ್ಯಾಲನ್ಸ್ ದಂಡ ವಸೂಲಿಯಲ್ಲಿ ಖಾಸಗಿ ಸಿಂಹಪಾಲು

ಒಟ್ಟು ದಂಡದ ಮೊತ್ತದಲ್ಲಿ 70% ರಷ್ಟು (ಸುಮಾರು ₹4,948 ಕೋಟಿ) ಬೃಹತ್ ಪಾಲು ಖಾಸಗಿ ಬ್ಯಾಂಕುಗಳಿಂದಲೇ (Private Banks) ಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್​ವೊಂದೇ (HDFC Bank) ಸುಮಾರು ₹1,800 ಕೋಟಿ ದಂಡ ವಸೂಲಿ ಮಾಡಿದ್ದು ಮೊದಲ ಸ್ಥಾನದಲ್ಲಿದೆ.

ನಂತರದ ಸ್ಥಾನಗಳಲ್ಲಿ ಆಕ್ಸಿಸ್ ಬ್ಯಾಂಕ್ (Axis Bank ₹1,081 ಕೋಟಿ), ಐಸಿಐಸಿಐ ಬ್ಯಾಂಕ್ (ICICI Bank ₹353 ಕೋಟಿ) ಮತ್ ಕೊಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank ₹290 ಕೋಟಿ) ಇವೆ.

ಸರ್ಕಾರಿ ಬ್ಯಾಂಕುಗಳಿಂದ ಎಷ್ಟು ವಸೂಲಿ?

ಪಬ್ಲಿಕ್ ಸೆಕ್ಟರ್ (ಸರ್ಕಾರಿ) ಬ್ಯಾಂಕುಗಳಿಂದ ಒಟ್ಟು ₹2,137 ಕೋಟಿ ದಂಡ ಸಂಗ್ರಹವಾಗಿದೆ. ಸರಕಾರ ತಿಳಿಸಿರುವಂತೆ, 12 ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ 10 ಬ್ಯಾಂಕುಗಳು ಸಾಮಾನ್ಯ ಉಳಿತಾಯ ಖಾತೆಗಳ ಮೇಲೆ (Savings Accounts) ಕನಿಷ್ಠ ಬ್ಯಾಲೆನ್ಸ್ ದಂಡವನ್ನು ರದ್ದುಗೊಳಿಸಿವೆ.

ಆದರೆ ಚಾಲ್ತಿ ಖಾತೆಗಳು (Current Accounts) ಮತ್ತಿತರ ವರ್ಗಗಳಿಂದ ಸಂಗ್ರಹಿಸಿದ ದಂಡದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ₹477 ಕೋಟಿ, ಬ್ಯಾಂಕ್ ಆಫ್ ಬರೋಡಾ (BoB) ₹394 ಕೋಟಿ ಹಾಗೂ ಇಂಡಿಯನ್ ಬ್ಯಾಂಕ್ ₹299 ಕೋಟಿ ವಸೂಲಿ ಮಾಡಿವೆ.

ಇದನ್ನೂ ಓದಿ: Patanjali Insurance: ಇನ್ಷೂರೆನ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪತಂಜಲಿ ಆಯುರ್ವೇದ

ಆರ್‌ಬಿಐ (RBI) ನಿಯಮಗಳು ಏನು ಹೇಳುತ್ತವೆ?

ಕನಿಷ್ಠ ಬ್ಯಾಲೆನ್ಸ್ ಕಡಿಮೆಯಾದ ತಕ್ಷಣವೇ ಬ್ಯಾಂಕುಗಳು ದಂಡ ವಿಧಿಸುವಂತಿಲ್ಲ. ಗ್ರಾಹಕರಿಗೆ SMS, ಇಮೇಲ್ ಅಥವಾ ಪತ್ರದ ಮೂಲಕ ಮುಂಚಿತವಾಗಿ ಸೂಚನೆ ನೀಡಿ, ಕನಿಷ್ಠ ಬ್ಯಾಲೆನ್ಸ್ ಅನ್ನು ಮರುಪೂರಣ (Restore) ಮಾಡಲು ಕಾಲಾವಕಾಶ ನೀಡಿದ ನಂತರವೇ ದಂಡ ವಿಧಿಸಬೇಕು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ವಿವಿಧ ಬ್ಯಾಂಕುಗಳಲ್ಲಿರುವ ಕನಿಷ್ಠ ಬ್ಯಾಲನ್ಸ್ ಮೊತ್ತ

ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಸಾಮಾನ್ಯ ಉಳಿತಾಯ ಖಾತೆಗಳಿಗೆ (Savings Accounts) ನಿಗದಿಪಡಿಸಲಾಗಿರುವ ಮಾಸಿಕ ಸರಾಸರಿ ಶೇಷ (Monthly Average Balance – MAB) ಅಥವಾ ತ್ರೈಮಾಸಿಕ ಸರಾಸರಿ ಶೇಷ (Quarterly Average Balance – QAB) ವಿವರಗಳು ಹಾಗೂ ನಿಯಮಗಳು ಈ ಕೆಳಗಿನಂತಿವೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): 0
  • ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank): 10,000 ರೂ
  • ಐಸಿಐಸಿಐ ಬ್ಯಾಂಕ್ (ICICI Bank): 50,000 ರೂ
  • ಆಕ್ಸಿಸ್ ಬ್ಯಾಂಕ್ (Axis Bank): 12,000 ರೂ
  • ಕೆನರಾ ಬ್ಯಾಂಕ್ (Canara Bank): 2,000 ರೂ
  • ಬ್ಯಾಂಕ್ ಆಫ್ ಬರೋಡಾ (BoB): 2,000 ರೂ
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): 2,000 ರೂ

ಇದನ್ನೂ ಓದಿ: ಹೊಸ ಎಲೆಕ್ಟ್ರಾನಿಕ್ಸ್ ಬ್ಯುಸಿನೆಸ್​ಗಳಲ್ಲಿ ಎಲ್ ಅಂಡ್ ಟಿಯಿಂದ 5,000 ಕೋಟಿ ರೂ ಹೂಡಿಕೆ; 45,000 ಕೋಟಿ ರೂ ಮಾರುಕಟ್ಟೆ ಮೇಲೆ ಕಣ್ಣು

ಈ ಮೇಲಿನದು ನಗರ ಪ್ರದೇಶಗಳಲ್ಲಿ ಈ ಬ್ಯಾಂಕುಗಳು ಹೊಂದಿರುವ ಕನಿಷ್ಠ ಬ್ಯಾಲನ್ಸ್ ನಿಯಮ. SBI, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಬಹುತೇಕ ಸರ್ಕಾರಿ ಬ್ಯಾಂಕುಗಳು ಸಾಮಾನ್ಯ ಉಳಿತಾಯ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಇಡದಿದ್ದರೆ ವಿಧಿಸಲಾಗುತ್ತಿದ್ದ ದಂಡವನ್ನು ಸಂಪೂರ್ಣವಾಗಿ ರದ್ದುಗೊಳಿಸಿವೆ ಅಥವಾ ವಿನಾಯಿತಿ ನೀಡಿವೆ.

ಖಾಸಗಿ ಬ್ಯಾಂಕುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಶಾರ್ಟ್‌ಫಾಲ್ (Shortfall) ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ (ಸಾಮಾನ್ಯವಾಗಿ ಕೊರತೆಯ ಶೇಕಡಾ 5% ರಿಂದ 6% ಅಥವಾ ₹250 ರಿಂದ ₹500 ವರೆಗೆ).

PMJDY (ಜನ್ ಧನ್ ಯೋಜನೆ) ಹಾಗೂ BSBDA (ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್) ಖಾತೆಗಳಲ್ಲಿ ಯಾವುದೇ ಬ್ಯಾಂಕ್‌ನಲ್ಲೂ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us