AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

AI Impact Summit 2026, how this benefits India and the world: ಫೆಬ್ರುವರಿ 16-20ರವರೆಗೆ ದೆಹಲಿಯಲ್ಲಿ ನಾಲ್ಕನೇ ಎಐ ಇಂಪ್ಯಾಕ್ಟ್ ಶೃಂಗಸಭೆ ನಡೆಯುತ್ತಿದೆ. ಈ ಹಿಂದಿನ ಮೂರು ಆವೃತ್ತಿಗಳು ಬ್ರಿಟನ್, ಸೌತ್ ಕೊರಿಯಾ ಮತ್ತು ಫ್ರಾನ್ಸ್​ನಲ್ಲಿ ನಡೆದಿದ್ದವು. ಕೈಗಾರಿಕಾ ಕ್ರಾಂತಿ ಬಳಿಕ ವಿಶ್ವ ಕಾಣುತ್ತಿರುವ ಅತಿದೊಡ್ಡ ಪರಿವರ್ತನೆ ಇದು ಎಂದು ಎಐ ಬೆಳವಣಿಗೆಯನ್ನು ಬಣ್ಣಿಸಲಾಗುತ್ತಿದೆ.

ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?
ಎಐ ಇಂಪ್ಯಾಕ್ಟ್ ಸಮಿಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2026 | 12:47 PM

Share

ನವದೆಹಲಿ, ಫೆಬ್ರುವರಿ 16: ಈ ಬಾರಿಯ ಎಐ ಇಂಪ್ಯಾಕ್ಟ್ ಸಭೆಗೆ (India AI Impact Summit) ಭಾರತ ಆತಿಥ್ಯ ವಹಿಸಿದೆ. ಇದು ನಾಲ್ಕನೇ ಎಐ ಸಭೆಯಾಗಿದೆ. 2023ರಲ್ಲಿ ಬ್ರಿಟನ್​ನಲ್ಲಿ ಮೊದಲ ಎಐ ಇಂಪ್ಯಾಕ್ಟ್ ಸಭೆ ನಡೆದಿತ್ತು. ನಂತರದ ವರ್ಷಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಶೃಂಗಸಭೆಗಳು ನಡೆದಿವೆ. ಈ ಬಾರಿಯ ಎಐ ಸಮಿಟ್ ಅನ್ನು ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಥೀಮ್​ನಲ್ಲಿ ರೂಪಿಸಲಾಗಿದೆ. ಅಂದರೆ, ಎಲ್ಲರಿಗೂ ಎಐ ಅಭಿವೃದ್ಧಿಫಲ ಸಿಗಲಿ ಎಂಬುದು ಭಾರತದ ಆಶಯ. ಆ ನಿಟ್ಟಿನಲ್ಲಿ ಸಮಿಟ್​ನ ಕಾರ್ಯಕ್ರಮಗಳು ನಡೆಯಲಿವೆ.

ಕೈಗಾರಿಕಾ ಕ್ರಾಂತಿ ಬಳಿಕ ಮಾನವನ ಇತಿಹಾಸದಲ್ಲಿ ಕಂಡ ಅತ್ಯಂತ ಪರಿವರ್ತನಾತ್ಮಕ ಕ್ರಾಂತಿ ಎಂದರೆ ಆರ್ಟಿಫಿಶಿಯಲ್ ಇಂಟೆಲೆಜೆನ್ಸ್ನದ್ದು ಎಂದು ಹೇಳಲಾಗುತ್ತದೆ. ಔದ್ಯಮಿಕ ಕ್ರಾಂತಿಯಿಂದ ಹೇಗೆ ಜಗತ್ತಿನ ಆರ್ಥಿಕ ಪರಿಭಾಷೆ ಬದಲಾಯಿತೋ, ಅದೇ ಪರಿಣಾಮವನ್ನು ಎಐನಿಂದ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ

ಜಾಗತಿಕ ಎಐ ರೇಸ್​ನಲ್ಲಿ ಭಾರತದ ಸ್ಥಾನ ಏನು?

ಸ್ಟಾನ್ಫೋರ್ಡ್​ನ ಎಐ ವೈಬ್ರೆನ್ಸಿ ಟೂಲ್ ಪ್ರಕಾರ ಎಐನಲ್ಲಿ ಭಾರತ ಮೂರನೇ ಶ್ರೇಯಾಂಕ ಪಡೆದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನೈಪುಣ್ಯತೆ ಹೊಂದಿರುವ ಅತಿಹೆಚ್ಚು ಮಾನವಸಂಪನ್ಮೂಲ ಹೊಂದಿರುವ ದೇಶಗಳಲ್ಲಿ ಸಿಂಗಾಪುರ ಬಿಟ್ಟರೆ ಭಾರತವೇ ಇರುವುದು. ಎಐ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಎಐನಲ್ಲಿ ಭಾರತ ಒಂದೊಂದೇ ಹೆಜ್ಜೆಗಳನ್ನು ಇರಿಸುತ್ತಿದೆ. ಅಮೆರಿಕ ಮತ್ತು ಚೀನಾ ತೋರಿರುವ ಪ್ರಗತಿಯನ್ನು ಸರಿಗಟ್ಟಲು ಭಾರತಕ್ಕೆ ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು ಎಂದು ಪರಿಣಿತರು ಹೇಳುತ್ತಾರೆ. ಅಮೆರಿಕವು ಚ್ಯಾಟ್​ಜಿಪಿಟಿ, ಕ್ಲಾಡ್, ಜೆಮಿನೈ ಇತ್ಯಾದಿ ಫೌಂಡೇಶನಲ್ ಮಾಡಲ್​ಗಳ ಅಭಿವೃದ್ಧಿಯಲ್ಲಿ ಮುಂದಿದೆ. ಚೀನಾ ದೇಶವು ಅಗ್ಗದ ಬೆಲೆಗೆ ಎಐ ಸಿಗುವಂತೆ ಮಾಡುತ್ತಿದೆ. ಭಾರತವು ತನ್ನದೇ ಸಾವರಿನ್ ಎಐ ಮಾಡಲ್​ಗಳನ್ನು ಬೆಳೆಸಲು ಗುರುತರವಾದ ಯೋಜನೆಗಳನ್ನು ಹಾಕಿದೆ.

ಇದನ್ನೂ ಓದಿ: ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು

ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಭಾರತಕ್ಕೇನು ಲಾಭ?

ಎಐ ವಿಚಾರದಲ್ಲಿ ಭಾರತ ಗಂಭೀರವಾಗಿರುವುದನ್ನು ಜಗತ್ತಿನ ಟೆಕ್ ನಾಯಕರು ಗಮನಿಸಲಿದ್ದಾರೆ. ಭಾರತ ಹಾಗೂ ಭಾರತೀಯ ಕಂಪನಿಗಳ ಜೊತೆ ಜಗತ್ತಿನ ಟೆಕ್ ದೈತ್ಯರು ಹೊಂದಾಣಿಕೆ ಮಾಡಿಕೊಂಡು ಎಐ ಅಭಿವೃದ್ಧಿಗೆ ಮುಂದಾಗಬಹುದು. ಈ ಸಮಿಟ್ ವೇಳೆ ಡಾಟಾ ಸೆಂಟರ್ ಹಾಗೂ ಸಂಬಂಧಿತ ಯೋಜನೆಗಳ ಘೋಷಣೆ ಆಗಬಹುದು.

ಸರ್ಕಾರಿ ಬೆಂಬಲಿತ ಎಐ ಕಂಪ್ಯೂಟ್ ಮಾಡಲ್ ಅನ್ನು ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಸರ್ವಿಸ್ ಆಗಿ ಇತರ ದೇಶಗಳಿಗೆ ಆಫರ್ ಮಾಡಲಾಗಬಹುದು. ಎಐ ಸ್ಟ್ಯಾಕ್ ನಿರ್ಮಿಸುವ ಭಾರತದ ಪ್ರಯತ್ನಗಳಿಗೆ ಜಾಗತಿಕ ಕಂಪನಿಗಳು ಬೆಂಬಲ ನೀಡಬಹುದು. ಭಾರತದ ಎಐ ಸ್ಟಾರ್ಟಪ್​ಗಳಿಗೆ ಜಾಗತಿಕ ಬಂಡವಾಳ ಸಿಗಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!