9ನೇ ತರಗತಿ ಮಿಡ್​ಟರ್ಮ್ ಎಕ್ಸಾಮ್​ನಲ್ಲಿ ಒಳ್ಳೆ ಮಾರ್ಕ್ಸ್ ಪಡೆದ ಮಗನಿಗೆ 1.6 ಕೋಟಿ ರೂ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಅಪ್ಪ

ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಮಾರ್ಕ್ಸ್ ಗುರಿ ಮುಟ್ಟಿದ ಮಗನಿಗೆ ಅಪ್ಪ ಬೆಲೆ ಬಾಳುವ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಪೂರಬ್ ಬರ್ಧಮಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಬಾಲಕ 1.62 ಕೋಟಿ ರೂ ಬೆಲೆಯ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಆ ಊರಿನ ಸುತ್ತಮುತ್ತಲೂ ಈ ಕಾರು ಟಾಕ್ ಆಗುತ್ತಿದೆ.

9ನೇ ತರಗತಿ ಮಿಡ್​ಟರ್ಮ್ ಎಕ್ಸಾಮ್​ನಲ್ಲಿ ಒಳ್ಳೆ ಮಾರ್ಕ್ಸ್ ಪಡೆದ ಮಗನಿಗೆ 1.6 ಕೋಟಿ ರೂ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಅಪ್ಪ
ಮೊಹಮ್ಮದ್ ತಲ್ಹಾ
Image Credit source: Talha's Insta page

Updated on: Nov 11, 2026 | 6:12 PM

ಕೋಲ್ಕತಾ, ನವೆಂಬರ್ 11: ಮಕ್ಕಳು ಪರೀಕ್ಷೆಯಲ್ಲಿ ಪಾಸಾದಾಗ ಪೋಷಕರು ಚಾಕೊಲೇಟನ್ನೋ, ಸೈಕಲ್ ಅನ್ನೋ, ಬೈಕ್ ಅನ್ನೋ, ಬಟ್ಟೆಯನ್ನೋ ಇತ್ಯಾದಿ ಗಿಫ್ಟ್​ಗಳನ್ನು ಕೊಡುವುದುಂಟು. ಅದೂ ಎಸ್ಸೆಸ್ಸೆಲ್ಸಿ, ಪಿಯುಸಿಯಂತಹ ಪರೀಕ್ಷೆಗಳಲ್ಲಿ ಪಾಸಾದ ಮಕ್ಕಳಿಗೆ ವಿಶೇಷ ಗಿಫ್ಟ್ ಸಿಗಬಹುದು. ಇಲ್ಲಿ ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಪಡೆದ ಮಗನಿಗೆ ಅಪ್ಪನೊಬ್ಬ ದುಬಾರಿ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದಲ್ಲಿ.

ಪೂರ್ವ ಬರ್ಧಮಾನ್ ಜಿಲ್ಲೆಯ ಗಲ್ಸಿ ಸಮೀಪದ ಪುರಾಜ್ ಎಂಬ ಗ್ರಾಮದ 15 ವರ್ಷದ ಬಾಲಕ ಮೊಹಮ್ಮದ್ ತಲ್ಹಾಗೆ ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಎನ್ನುವ ಸ್ಪೋರ್ಟ್ಸ್ ಕಾರ್ ಅನ್ನು ಗಿಫ್ಟ್ ಆಗಿ ಅಪ್ಪ ಕೊಡಿಸಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 1.62 ಕೋಟಿ ರೂ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಕಾರು ಕೊಡಿಸುವುದಾಗಿ ನೀಡಿದ್ದ ವಾಗ್ದಾನವನ್ನು ಶಂಸುದ್ದೀನ್ ಮಿದ್ಯಾ ಅವರು ಉಳಿಸಿಕೊಂಡಿದ್ದಾರೆ.

Loading...

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರು ಪಡೆಯಲು ಶಂಸುದ್ದಿನ್ ಅವರು ಮುಂಬೈನ ಅಂಧೇರಿಯಲ್ಲಿರುವ ಶೋರೂಮ್​ಗೆ ಹೋಗಬೇಕಾಯಿತು. ಕಂಟೇನರ್​ನೊಳಗೆ ಕಾರನ್ನು ಇರಿಸಿ ಮುಂಬೈನಿಂದ ಪೂರಬ್ ಬರ್ಧಮಾನ್​ನ ಅವರ ಗ್ರಾಮದವರೆಗೆ ಸಾಗಿಸಿ ತರಲಾಯಿತು. ದುಬಾರಿ ಬೆಲೆಯ ಈ ಕಾರು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಆ ಬಾಲಕನೇ ಖುದ್ದು ಇದರ ಒಂದು ಫೋಟೋ ಅನ್ನು ಇನ್ಸ್​ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾನೆ:

ಬಿಎಂಡಬ್ಲ್ಯು ಎಂ4 ಕಾಂಪಿಟೀಶನ್ ಕಾರಿನ ಫೀಚರ್ಸ್…

ಜರ್ಮನಿ ದೇಶದ ವಾಹನ ತಯಾರಕರಾದ ಬಿಎಂಡಬ್ಲ್ಯುನ ಶ್ರೇಷ್ಠ ಸ್ಪೋರ್ಟ್ಸ್ ಕಾರುಗಳಲ್ಲಿ ಎಂ4 ಕಾಂಪಿಟೀಶನ್ ಒಂದು. ಇದು ಕೇವಲ 3.5 ಸೆಕೆಂಡುಗಳಲ್ಲಿ 100 ಕಿಮೀ ವೇಗ ತಲುಪಬಲ್ಲುದು.

ಇದನ್ನೂ ಓದಿ: ಕ್ವಾಲ್​ಕಾಮ್​ನಿಂದ ಲೇ ಆಫ್; ಭಾರತದಲ್ಲಿ ಸಾವಿರ ಉದ್ಯೋಗಿಗಳು ಟಾರ್ಗೆಟ್; ಬೆಂಗಳೂರಿನಲ್ಲೇ ಮೊದಲ ಸುತ್ತಿನ ಬಲಿ

ಅಪ್ಪನ ಬಳಿ ಇನ್ನೂ ಹಲವಿವೆ ಕಾರಿನ ಕಲೆಕ್ಷನ್ಸ್

ಮಗನಿಗೆ ಬಿಎಂಡಬ್ಲ್ಯೂ ಕಾರನ್ನು ಕೊಡಿಸಿದ ಶಂಸುದ್ದೀನ್ ಮಿದ್ಯಾ ಬಳಿ ರೇಂಜ್ ರೋವರ್, ವೋಲ್ವೋ, ಮರ್ಸಿಡೆಸ್ ಬೆಂಜ್, ಮಹೀಂದ್ರ, ಹ್ಯೂಂಡಾಯ್ ಕಂಪನಿಗಳ ಕಾರುಗಳನ್ನೂ ಹೊಂದಿದ್ದಾರೆ. ರೇಂಜ್ ರೋವರ್​ನ ಆಟೊಬಯೋಗ್ರಫಿ, ವೋಲ್ವೋ ಎಕ್ಸ್​ಸಿ90, ಮರ್ಸಿಡೆಸ್ ಸಿ-ಕ್ಲಾಸ್, ಮಹೀಂದ್ರ ಥಾರ್ ರಾಕ್ಸ್, ಹ್ಯೂಂಡಾಯ್ ಆಲ್ಕಜರ್ ಕಾರುಗಳು ಮಿದ್ಯಾ ಅವರ ಬಳಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us