TV9 Kannada business Fixed Deposit: Are you investing money in an FD, Follow these tricks to earn returns.
ಫಿಕ್ಸೆಡ್ ಡೆಪಾಸಿಟ್ ಇಡುವಾಗ ಈ ಟ್ರಿಕ್ಸ್ ಪಾಲಿಸಿದ್ರೆ ಲಾಭ ಅಧಿಕ
ಸ್ಥಿರ ಠೇವಣಿಯೂ ಸುರಕ್ಷಿತ ಹಾಗೂ ಅಪಾಯವಿಲ್ಲದ ಹೂಡಿಕೆಯಾಗಿದೆ. ಆದರೆ ಈ ಎಫ್ ಡಿಯಲ್ಲಿ ಲಾಭ ಪಡೆಯಲು ಹಣವನ್ನು ಒಂದೇ ಎಫ್‌ಡಿಯಲ್ಲಿ ಇಡುವ ಬದಲು, ಅದನ್ನು ಬೇರೆ ಬೇರೆ ಅವಧಿಗಳಿಗೆ ವಿಂಗಡಿಸಿ ಹೂಡಿಕೆ ಮಾಡುವುದು ಉತ್ತಮ. ಅವಧಿಗಳ ಆಯ್ಕೆ, ಬ್ಯಾಂಕ್ ಗಳಲ್ಲಿ ಎಫ್ ಡಿ ಮೇಲಿನ ಬಡ್ಡಿದರ ಈ ಎಲ್ಲಾ ಅಂಶಗಳ ಮೇಲೆ ಗಮನ ಹರಿಸಿದರೆ ಹೆಚ್ಚಿನ ಬಡ್ಡಿ ಹಾಗೂ ಲಾಭ ಪಡೆಯಲು ಸಾಧ್ಯ.
ಹೆಚ್ಚಿನವರು ಹಣವನ್ನು ಚಿನ್ನ, ಸೇರಿದಂತೆ ವಿವಿಧ ಹಣಕಾಸು ಯೋಜನೆಗಳಿಗೆ ಹೂಡಿಕೆ ಮಾಡುತ್ತಾರೆ
ಸ್ಥಿರ ಠೇವಣಿ ಸುರಕ್ಷಿತ ಹಾಗೂ ಅಪಾಯವಿಲ್ಲದೇ ಹೂಡಿಕೆ
ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಲ್ಯಾಡರಿಂಗ್ ತಂತ್ರ ಅಳವಡಿಸಿದರೆ ಲಾಭ ಅಧಿಕ
ಹೆಚ್ಚಿನವರು ತಾವು ದುಡಿದ ಹಣವನ್ನು ಚಿನ್ನ, ಸೇರಿದಂತೆ ವಿವಿಧ ಹಣಕಾಸು ಯೋಜನೆಗಳಿಗೆ (Financial Planning) ಹೂಡಿಕೆ ಮಾಡುತ್ತಾರೆ. ಆದರೆ ಈ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮತ್ತೊಂದು ತಂತ್ರಗಳಲ್ಲಿ ಒಂದು. ಈ ಇನ್ವೆಸ್ಟ್ಮೆಂಟ್ ಸುರಕ್ಷಿತವಾಗಿದ್ದು ಯಾವುದೇ ಅಪಾಯವಿಲ್ಲ. ಆದ್ರೆ ನೀವೇನಾದ್ರೂ ಸ್ಥಿರ ಠೇವಣಿ ಮಾಡುತ್ತೀರಿ ಅಂತಾದ್ರೆ ಈ ಕೆಲವು ವಿಷ್ಯಗಳತ್ತ ಗಮನ ಕೊಡುವುದು ಸೂಕ್ತ. ಬಡ್ಡಿದರಗಳು ಹಾಗೂ ಎಫ್ ಡಿ ಅವಧಿಗಳು, ಲ್ಯಾಡರಿಂಗ್ ತಂತ್ರ, ತೆರಿಗೆ ನಿಯಮಗಳು ಹಾಗೂ ಅವಧಿ ಮುನ್ನವೇ ಹಣ ಹಿಂಪಡೆಯುವಿಕೆ ಈ ಕೆಲವು ಅಂಶಗಳ ಮೇಲೆ ಗಮನ ಹರಿಸಿದರೆ ಇದು ನಿಮಗೆ ಉತ್ತಮ ಲಾಭ ತಂದು ಕೊಡುತ್ತವೆ.
ಸ್ಥಿರ ಠೇವಣಿ ಇಡುವಾಗ ಈ ಸಲಹೆಗಳನ್ನು ಪಾಲಿಸಿ
ಎಲ್ಲಾ ಬ್ಯಾಂಕುಗಳಲ್ಲಿ ಬಡ್ಡಿ ದರ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ನೀವು ಎಫ್ ಡಿ ಇಡುತ್ತಿದ್ದರೆ ವಿವಿಧ ಬ್ಯಾಂಕ್ ಗಳ ಬಡ್ಡಿದರಗಳನ್ನು ಒಮ್ಮೆ ಪರಿಶೀಲಿಸಿ.
ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ ಶೇ. 0.50 ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಹೀಗಾಗಿ ಅವರ ಹೆಸರಿನಲ್ಲಿ ಎಫ್ ಡಿ ಹಣ ಹೂಡಿಕೆ ಮಾಡುವುದು ಉತ್ತಮ.
ಸ್ಥಿರ ಠೇವಣಿಯಲ್ಲಿ ಬಡ್ಡಿದರವನ್ನು ಗಮನಿಸಿ ಅವಧಿಯನ್ನು ಆಯ್ಕೆ ಮಾಡಿ. ಎಷ್ಟು ವರ್ಷಗಳ ಕಾಲ ಇಟ್ಟರೆ ಗರಿಷ್ಠ ಬಡ್ಡಿ ಸಿಗುತ್ತದೆ ಎಂಬುವುದರತ್ತ ಗಮನ ಹರಿಸಿ.
ಅವಧಿ ಪೂರ್ಣಗೊಳ್ಳುವ ಮೊದಲೇ ಎಫ್‌ಡಿ ಹಣವನ್ನು ಹಿಂಪಡೆದರೆ ಬ್ಯಾಂಕುಗಳು ಶೇ 0.5 ರಿಂದ ಶೇ. 1 ರವರೆಗೆ ದಂಡ ವಿಧಿಸುತ್ತವೆ. ಹೀಗಾಗಿ ನೀವು ಎಫ್ ಡಿ ಇಡುವ ಬ್ಯಾಂಕ್ ಗಳಲ್ಲಿ ದಂಡ ವಿಧಿಸಲಾಗುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
ಸ್ಥಿರ ಠೇವಣಿ ಇಡುವಾಗ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಎಫ್‌ಡಿ ಅವಧಿಯನ್ನು ನಿಗದಿಪಡಿಸಿಕೊಳ್ಳಿ.
ಫಿಕ್ಸೆಡ್ ಡೆಪಾಸಿಟ್ ನಲ್ಲಿ ಲ್ಯಾಡರಿಂಗ್ ತಂತ್ರ ಅಳವಡಿಸಿಕೊಳ್ಳುವುದನ್ನು ಮರೆಯದಿರಿ.
ಈ ತಂತ್ರದಡಿಯಲ್ಲಿ ನಿಮ್ಮ ಎಲ್ಲಾ ಹಣವನ್ನು ಒಂದೇ ಎಫ್‌ಡಿಯಲ್ಲಿ ಇಡುಬೇಡಿ. 2, 3 ಅಥವಾ 4 ಭಾಗಗಳಾಗಿ ವಿಂಗಡಿಸಿ ಆ ಮೊತ್ತವನ್ನು ಬೇರೆ ಬೇರೆ ಅವಧಿಗೆ ಡೆಪಾಸಿಟ್ ಇಡುವುದು ಲಾಭದ ದೃಷ್ಟಿಯಿಂದ ತುಂಬಾನೇ ಉತ್ತಮ.
ನಿಮ್ಮ ಒಟ್ಟು ಆದಾಯ ತೆರಿಗೆ ಮಿತಿಗಿಂತ ಕಡಿಮೆಯಿದ್ದರೆ, ಟಿಡಿಎಸ್ ಕಡಿತಗೊಳಿಸದಂತೆ ತಡೆಯಲು ನೀವು ಫಾರ್ಮ್ 15ಜಿ ಅಥವಾ ಫಾರ್ಮ್ 15ಹೆಚ್ ಬ್ಯಾಂಕಿಗೆ ಸಲ್ಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 pm, Thu, 29 October 26
ಸಾಯಿನಂದಾ
ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ